ನ್ಯೂಸ್

VIDEO| ನಮ್ಮ ಮಕ್ಕಳು ಯಾವುದೇ ತಪ್ಪು ಮಾಡಿಲ್ಲ ಬಿಟ್ಟು ಬಿಡಿ: ಠಾಣೆಯ ಮುಂದೆ ಪಾಲಕರ ಹೈಡ್ರಾಮ

ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿಯಾಗಿರುವ ಗಲಭೆಕೋರರ ಬಿಡುಗಡೆಗಾಗಿ ಆಗ್ರಹಿಸಿದ ಪಾಲಕರು ಪೊಲೀಸ್​ ಠಾಣೆಯ ಬಳಿ ಜಮಾಯಿಸಿ, ಹೈಡ್ರಾಮವನ್ನೇ ನಡೆಸಿದರು.

ಗಲಭೆ ಸಂಬಂಧ ಶನಿವಾರ ಕಳೆದ ರಾತ್ರಿ ಸುಮಾರು 57 ಗಲಭೆಕೋರರನ್ನು ಡಿಜೆ ಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪಾಲಕರಿಂದ ಠಾಣೆಗೆ ಜಮಾಯಿಸಿ ಬಿಡುಗಡೆಗೆ ಆಗ್ರಹಿಸಿದರು.

ನಮ್ಮ ಮಕ್ಕಳು ಯಾವುದೇ ತಪ್ಪು ಮಾಡಿಲ್ಲ. ಅವರನ್ನು ಬಿಟ್ಟು ಬಿಡಿ ಎಂದು ಠಾಣೆಯ ಮುಂದೆ ಗೋಳಾಡಿದರು. ಆದರೆ, 144 ಸೆಕ್ಷನ್​ ಜಾರಿ ಇರುವ ಹಿನ್ನೆಲೆಯಲ್ಲಿ ಪಾಲಕರು ಠಾಣೆ ಮುಂದೆ ಜಮಾಯಿಸದಂತೆ ಮಹಿಳಾ ಪೊಲೀಸ್​ ಸಿಬ್ಬಂದಿ ವಾಪಸ್ಸು ಕಳುಹಿಸಿದರು.

ಈ ವೇಳೆ ಮಹಿಳೆಯೊಬ್ಬಳು ನನ್ನ ಮಗನನ್ನು ನೋಡ್ಬೇಕು ಬಿಡಿ ಎಂದು ಕಣ್ಣೀರಾಕುತ್ತಾ ಠಾಣೆಯ ಮುಂಭಾಗದಲ್ಲೇ ಕುಸಿದು ಬಿದ್ದಳು. (ದಿಗ್ವಿಜಯ ನ್ಯೂಸ್​)