ನ್ಯೂಸ್

ವಧು-ವರನ ಸಂಬಂಧಿಕರ ಮೇಲೆ ದಿಢೀರ್ ಸಿಟ್ಟಾದ ಪುರೋಹಿತ ಮಾಡಿದ್ದೇನು ನೋಡಿ; Viral Video ಕಂಡು ನೆಟ್ಟಿಗರು ಫುಲ್​ ಗರಂ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮದುವೆಗೆ ಸಂಬಂಧಿಸಿದ ಸುದ್ದಿಗಳು ಒಂದಿಲ್ಲೊಂದು ಕಾರಣಕ್ಕೆ ವೈರಲ್​ ಆಗುತ್ತಿರುತ್ತವೆ. ಹೆಚ್ಚಿಗೆ ಸ್ವೀಟ್​ ತಿಂದರು, ವರ ಎಡವಿದ ಕಾರಣಕ್ಕೆ ಮದುವೆಮನೆಗಳಲ್ಲಿ ಅನೇಕ ಬಾರಿ ಹೊಡೆದಾಟಗಳೆ ಆಗಿಹೋಗಿದೆ. ಈ ರೀತಿಯ ಘಟನೆಗಳು ಉತ್ತರಭಾರತದಲ್ಲಿ ಹೆಚ್ಚು ನಡೆಯುತ್ತವೆ ಎಂದರೆ ತಪ್ಪಾಗಲಾರದು. ಇದೀಗ ಮದುವೆಮನೆಯಲ್ಲಿ ಪುರೋಹಿತರೊಬ್ಬರು ಸಿಟ್ಟಾಗಿ ತಟ್ಟೆಯನ್ನ ಎಸೆದಿರುವ ಘಟನೆ ಬೆಳಕಿಗೆ ಬಂದಿದ್ದು, ಈ ವಿಡಿಯೋ ಸದ್ಯ ವೈರಲ್​ (Viral Video) ಆಗಿದೆ.

ವೈರಲ್​ ಆಗಿರುವ ವಿಡಿಯೋವನ್ನು (Viral Video) ನೋಡುವುದಾದರೆ  ನವದಂಪತಿಗಳು ಹೋಮ ಕುಂಡದ ಸುತ್ತ ಪ್ರದಕ್ಷಿಣೆ ಹಾಕುತ್ತಿರುವುದನ್ನು ನೋಡಬಹುದಾಗಿದೆ. ಈ ವೇಳೆ ವಧು ಹಾಗೂ ವರನ ಸಂಬಂಧಿಕರು ನವದಂಪತಿಯ ಮೇಲೆ ಹೂಗಳನ್ನು ಎಸೆಯುತ್ತಿರುತ್ತಾರೆ. ಇದನ್ನು ಕಂಡು ಸಿಟ್ಟಾದ ಪುರೋಹಿತರು ತನ್ನ ಕೈಯಲ್ಲಿದ್ದ ತಟ್ಟೆಯನ್ನು ಸಂಬಂಧಿಕರ ಮೇಲೆ ಎಸೆದಿದ್ದಾರೆ. ಪುರೋಹಿತರ ಈ ನಡೆ ಕಂಡು ಮದುವೆಮನೆಯಲ್ಲಿದ್ದವರು ಬೆಚ್ಚಿಬಿದ್ದಿದ್ದು, ಅನಿರೀಕ್ಷಿತ ವರ್ತನೆಗೆ ಕಿಡಿಕಾರಿದ್ದಾರೆ.

ಘಟನೆ ಯಾವ ರಾಜ್ಯದಲ್ಲಿ ನಡೆದಿದೆ ಎಂಬುದು ಈವರೆಗೆ ತಿಳಿದು ಬಂದಿಲ್ಲ. ಡಿಸೆಂಬರ್​ 26ರಂದು Ghar Ke Kalesh ಎಂಬ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, 321K ವೀವ್ಸ್​ ಪಡೆದುಕೊಂಡಿದೆ. ಅನೇಕರು ಪುರೋಹಿತರ ನಡೆಯನ್ನು ಖಂಡಿಸಿ ಕಮೆಂಟ್​ ಹಾಕುತ್ತಿದ್ದಾರೆ.