ನ್ಯೂಸ್

60ನೇ ಮಗುವಿಗೆ ತಂದೆಯಾದ ಈ ಭೂಪ ಮತ್ತೊಂದು ಮದುವೆ ಆಗ್ತಾನಂತೆ..!

ಪಾಕಿಸ್ತಾನ: ಪಾಕಿಸ್ತಾನದ ಕ್ವೆಟ್ಟಾ ನಗರದ ನಿವಾಸಿ ಜಾನ್ ಮಹಮ್ಮದ್ ಅವರ ಪತ್ನಿಗೆ ಹೊಸ ವರ್ಷದಂದು ಮತ್ತೊಂದು ಮಗು ಜನಿಸಿದೆ. ಈಗ ಜಾನ್​ ಮಹಮ್ಮದ್​ ಒಟ್ಟು 60 ಮಕ್ಕಳ ತಂದೆಯಾಗಿದ್ದಾರೆ.

ಜಾನ್ ಮಹಮ್ಮದ್​ಗೆ ಮೂವರು ಹೆಂಡತಿಯರಿಂದ 60 ಮಕ್ಕಳು ಹುಟ್ಟಿದ್ದಾರೆ. ಅಂದರೆ ಸರಾಸರಿ ಓರ್ವ ಹೆಂಡತಿಯಿಂದ 20 ಮಕ್ಕಳು! 60 ಜನ ಮಕ್ಕಳಲ್ಲಿ ಅವರ 5 ಮಕ್ಕಳು ಸಾವನ್ನಪ್ಪಿದ್ದಾರೆ. ಜಾನ್ ಮುಹಮ್ಮದ್ ಅವರ 55 ಮಕ್ಕಳು ಜೀವಂತವಾಗಿದ್ದು ಆರೋಗ್ಯವಾಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಜಾನ್ ಮಹಮ್ಮದ್, ಹೊಸ ವರ್ಷದ ಆಗಮನದಲ್ಲಿ ಮತ್ತೊಂದು ಮಗು ಜನಿಸಿರುವುದು ತುಂಬಾ ಸಂತೋಷವಾಗಿದೆ. ಮಗುವಿಗೆ ಹಾಜಿ ಖುಷ್ ಖಲ್ ಖಾನ್ ಎಂದು ಹೆಸರಿಡಲಾಗಿದೆ ಎಂದು ಹೇಳಿದರು.

ಇನ್ನೂ ವಿಶೇಷ ಏನೆಂದರೆ ಈ ಜಾನ್ ಮಹಮ್ಮದ್​ನ ಮೂವರು ಹೆಂಡತಿಯರು ಮತ್ತು ಮಕ್ಕಳು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಜಾನ್ ಮಹಮ್ಮದ್, ಅವರು ವೃತ್ತಿಯಲ್ಲಿ ಕಾಂಪೌಂಡರ್ ಆಗಿದ್ದು, ಸ್ವಂತ ಕ್ಲಿನಿಕ್ ಕೂಡ ನಡೆಸುತ್ತಿದ್ದಾರೆ.

60 ಮಕ್ಕಳನ್ನು ಪಡೆದರೂ ತೃಪ್ತಿಯಿಲ್ಲ ಈ ಜಾನ್​ ಮಹಮ್ಮದ್​ ಈಗ ಮತ್ತೊಂದು ಮದುವೆಯಾಗಲಿದ್ದಾರಂತೆ. 4ನೇ ಮದುವೆಗೆ ಈತ ಹೆಣ್ಣು ಕೂಡ ಹುಡುಕುತ್ತಿದ್ದಾನಂತೆ! ಜಾನ್ ಮಹಮ್ಮದ್ ಈ ಹಿಂದೆ '100 ಮಕ್ಕಳನ್ನು ಹೊಂದುವುದು ತನ್ನ ಗುರಿಯಾಗಿದೆ' ಎಂದಿದ್ದ! ತನಗೆ ಹೆಚ್ಚಿನ ಮಕ್ಕಳನ್ನು ದಯಪಾಲಿಸಿದ್ದಕ್ಕಾಗಿ ಅಲ್ಲಾಹನಿಗೆ ತುಂಬಾ ಕೃತಜ್ಞನಾಗಿದ್ದೇನೆ ಎಂದು ಕೂಡ ಇತ ಹೇಳಿದ್ದಾನೆ. (ಏಜೆನ್ಸೀಸ್​)