ಪಾಕಿಸ್ತಾನದಲ್ಲೂ 'ರಾಮಾಯಣ' ಕ್ರೇಜ್ 
ನ್ಯೂಸ್

ಪಾಕಿಸ್ತಾನಿ ಹಿಂದೂಗಳಿಂದ 'ರಾಮಾಯಣ' ಸಿನಿಮಾಗೆ ಜೈಕಾರ: ಕರಾಚಿ ಮಂದಿರದಲ್ಲೇ ಪೋಸ್ಟರ್ ಅಂಟಿಸಿ ಸಂಭ್ರಮ! | Ramayana in Pakistan

ಪಾಕಿಸ್ತಾನದ ಕರಾಚಿಯಲ್ಲೂ 'ರಾಮಾಯಣ' ಸಿನಿಮಾ ಹವಾ

ಸಿನಿಮಾ ಆಸ್ಕರ್ ಗೆಲ್ಲಲಿ ಎಂದು ಹಾರೈಸಿದ ಕರಾಚಿಯ ಹಿಂದೂಗಳು

ಲಾಸ್ ಏಂಜಲೀಸ್ ಪ್ರೀಮಿಯರ್‌ ಶೋನಲ್ಲಿ ನಟರ ಅಭಿನಯಕ್ಕೆ ಭಾರಿ ಮೆಚ್ಚುಗೆ

Ramayana Movie: ಭಾರತದಲ್ಲಿ ಮಾತ್ರವಲ್ಲದೆ ಪಾಕಿಸ್ತಾನದಲ್ಲೂ 'ರಾಮಾಯಣ' ಚಿತ್ರ ಭಾರಿ ಕ್ರೇಜ್ ಸೃಷ್ಟಿಸಿದೆ. ನಮ್ಮಲ್ಲಿ ಈ ಸಿನಿಮಾಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದರೆ, ಅತ್ತ ಕರಾಚಿಯಲ್ಲಿರುವ ಹಿಂದೂಗಳು 'ರಾಮಾಯಣ' ಚಿತ್ರಕ್ಕೆ ತೋರುತ್ತಿರುವ ಅಭಿಮಾನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕರಾಚಿಯ ಯೂಟ್ಯೂಬರ್ ಒಬ್ಬರು ಹಂಚಿಕೊಂಡಿರುವ ವಿಡಿಯೋದಲ್ಲಿ, ಅಲ್ಲಿನ ಹಿಂದೂ ಬಾಂಧವರು 'ರಾಮಾಯಣ' ಸಿನಿಮಾವನ್ನು ಸಂಭ್ರಮಿಸುತ್ತಿರುವುದು ಕಂಡುಬಂದಿದೆ. ಕರಾಚಿಯ ಪ್ರಸಿದ್ಧ ದೇವಸ್ಥಾನವೊಂದರ ಗೋಡೆಯ ಮೇಲೆ ರಣಬೀರ್, ಸಾಯಿ ಪಲ್ಲವಿ ಮತ್ತು ಯಶ್ ಅವರಿದ್ದ ‘ರಾಮಾಯಣ’ ಚಿತ್ರದ ಪೋಸ್ಟರ್ ಅಂಟಿಸಿರುವ ಭಕ್ತರು, ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲಿ ಹಾಗೂ ಆಸ್ಕರ್ ಪ್ರಶಸ್ತಿ ಗೆಲ್ಲಲಿ ಎಂದು ಶುಭ ಹಾರೈಸಿದ್ದಾರೆ.

ಪಾಕಿಸ್ತಾನದಲ್ಲಿ ರಿಲೀಸ್ ಆಗುತ್ತಾ 'ರಾಮಾಯಣ'?

ಎರಡೂ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಪಾಕಿಸ್ತಾನದಲ್ಲಿ ಭಾರತೀಯ ಚಿತ್ರಗಳ ಮೇಲಿನ ನಿಷೇಧ ಮುಂದುವರಿದಿದೆ. ಇದರಿಂದಾಗಿ 'ರಾಮಾಯಣ' ಸಿನಿಮಾ ಅಲ್ಲಿ ರಿಲೀಸ್ ಆಗುವುದು ಅನುಮಾನವಾಗಿದೆ. ಆದರೆ, ಹಿಂದೆ ರಣವೀರ್ ಸಿಂಗ್‌ ಅಭಿನಯದ 'ಧುರಂಧರ್' ಚಿತ್ರದ ಪೈರೇಟೆಡ್ ಪ್ರತಿ ಪಾಕಿಸ್ತಾನ ಒಂದರಲ್ಲೇ 20 ಲಕ್ಷಕ್ಕೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿ ಭಾರಿ ಸದ್ದು ಮಾಡಿತ್ತು.

https://www.reddit.com/r/RamayanaTheFilm/s/9fkt9pWNPv

ಇದನ್ನೂ ಓದಿ: ಕೇದಾರನಾಥದಲ್ಲಿ ಸುರಿಯುತ್ತಿದೆ ಹಿಮ! ಪ್ರವಾಸಿಗರಿಗೆ ಹೈಅಲರ್ಟ್; ನವೆಂಬರ್ 11ಕ್ಕೆ ದೇವಸ್ಥಾನದ ಬಾಗಿಲು ಬಂದ್ | Kedarnath Snowfall

ಪ್ರಥಮ ಪ್ರದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್

'ರಾಮಾಯಣ' ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರುತ್ತಿದ್ದು, ಮೊದಲ ಭಾಗವು 2026ರ ನವೆಂಬರ್ 5ರಂದು ತೆರೆಕಾಣಲಿದೆ. ಇತ್ತೀಚೆಗೆ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ಇದರ ವಿಶೇಷ ಪ್ರಥಮ ಪ್ರದರ್ಶನದಲ್ಲಿ ರಣಬೀರ್ ಕಪೂರ್ ಹಾಗೂ ಯಶ್ ಅಭಿನಯಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಲಭಿಸಿದ್ದು, ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆಯಿದೆ.