ನ್ಯೂಸ್

ಬಿಎಸ್​ಎಫ್​ ಯೋಧರ ದಾಳಿಗೆ ಹೆದರಿ ಬಾಲಮುದುರಿ ಓಡಿದ ಪಾಕ್​...🤣

ಚಂಡಿಗಢ್​: ಪುಲ್ವಾಮ ದಾಳಿ ಮಾಡಿಸಿದ್ದು ನಾವೇ ಎಂದು ಸತ್ಯ ಒಪ್ಪಿಕೊಂಡು, ಜಗತ್ತಿನೆದುರು ಬೆತ್ತಲಾದ ಪಾಕಿಸ್ತಾನ ತನ್ನ ಕಪಟತನವನ್ನು ಬಿಡುತ್ತಿಲ್ಲ.

ಗಡಿಯನ್ನು ದಾಟಿ, ಭಾರತದ ಭೂಪ್ರದೇಶದೊಳಗೆ ನುಸುಳಿದ್ದ ಪಾಕಿಸ್ತಾನಿ ಡ್ರೋಣ್​​ನ್ನು ಭಾರತೀಯ ಗಡಿ ಭದ್ರತಾ ಪಡೆ ಹಿಮ್ಮೆಟ್ಟಿಸದೆ. ಪಂಜಾಬ್​ನ ಠಾಕೂರ್​ಪುರ್​ ಗ್ರಾಮದ ಬಳಿ ನಿನ್ನೆ ರಾತ್ರಿ 11.35ರಿಂದ ಗುಂಯ್​​ಗುಡುವ ಶಬ್ದ ಕೇಳಿಬರುತ್ತಿತ್ತು. ಅದು ಪಾಕಿಸ್ತಾನ ಕಡೆಯಿಂದಲೇ ಬರುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿಕೊಂಡ ಸ್ಥಳದಲ್ಲಿದ್ದ ಗಡಿ ಭದ್ರತಾ ಪಡೆಯಾದ ಯೋಧರಾದ ದೇವೇಂದ್ರ ಕುಮಾರ್​ ಮತ್ತು ಅಶೋಕ್​ ಕುಮಾರ್ ಕೂಡಲೇ ಅಲರ್ಟ್​ ಆಗಿ ಒಂದೇ ಸಮ ಫೈರ್ ಮಾಡಲು ಶುರುಮಾಡಿದರು. ನೋಡನೋಡುತ್ತಿದ್ದಂತೆ ಆ ಡ್ರೋಣ್​ ಭಾರತದ ಭೂಪ್ರದೇಶವನ್ನು ಪ್ರವೇಶಿಸಿತು. ಆದರೆ ಬಿಎಸ್​ಎಫ್​ ಯೋಧರ ದಾಳಿಗೆ ಹೆದರಿ ಕೂಡಲೇ ಆ ಡ್ರೋಣ್​ ಪಾಕ್​ಗೆ ಹಿಂದಿರುಗಿದೆ.

ಆದರೆ ಮತ್ತೆ ಮಧ್ಯರಾತ್ರಿ 12.22ರ ಹೊತ್ತಿಗೆ ಮತ್ತೆ ವಾಪಸ್​ ಆಗಿದೆ. ಈ ಸಮಯದಲ್ಲಿ ಅಲ್ಲಿಯೇ ಗಸ್ತು ತಿರುಗುತ್ತಿದ್ದ ಮುಕೇಶ್ ಯಾದವ್​, ದೇವೇಂದ್ರ ಮತ್ತು ಅಶೋಕ್ ಕುಮಾರ್​ ಮತ್ತೊಮ್ಮೆ ಡ್ರೋನ್​ ಎಡೆಗೆ ಗುಂಡಿನ ದಾಳಿ ಮಾಡಿದ್ದಾರೆ.

ಬಿಎಸ್​ಎಫ್​ನ ಮೂವರು ಸಿಬ್ಬಂದಿಯ ಗುಂಡಿನ ದಾಳಿಗೆ ಮಣಿದ ಪಾಕ್​ ಡ್ರೋನ್​ ಕೊನೆಗೂ ಹಿಂದಿರುಗಿದೆ. ನಂತರ ಸ್ಥಳಕ್ಕೆ ಬಿಎಸ್​ಎಫ್​ ಕಮಾಂಡಂಟ್​ ಎನ್​.ಗಂಗೂಲಿ ಭೇಟಿ ನೀಡಿದ್ದರು.