ನ್ಯೂಸ್

ಕರೊನಾ ಸೋಂಕಿನ ಬಗ್ಗೆ ಈಗ ಎಚ್ಚೆತ್ತುಕೊಂಡ ಪಾಕಿಸ್ತಾನ ಸರ್ಕಾರ; ಒಂದು ದಾಖಲೆಯನ್ನೂ ಮಾಡಿದೆ...

ಇಸ್ಲಮಾಬಾದ್​: ಜಗತ್ತಿನ ಬಹುತೇಕ ಎಲ್ಲ ದೇಶಗಳೂ ಕರೊನಾ ಮಹಾಮಾರಿಗೆ ತತ್ತರಿಸುತ್ತಿವೆ. ಹಾಗೇ ನೆರೆರಾಷ್ಟ್ರ ಪಾಕಿಸ್ತಾನಕ್ಕೂ ಕಾಲಿಟ್ಟು ಐದಾರು ತಿಂಗಳಾಗಿವೆ.

ಅಲ್ಲಿ ಕರೊನಾ ವಿರುದ್ಧ ಸರಿಯಾದ ಹೋರಾಟ ನಡೆಯುತ್ತಿಲ್ಲ. ಆರೋಗ್ಯ, ಚಿಕಿತ್ಸೆ ವ್ಯವಸ್ಥೆ ಸರಿಯಿಲ್ಲ ಎಂಬುದನ್ನು ಪಾಕಿಸ್ತಾನದ ಹಲವು ವೈದ್ಯರೇ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಸಾಮಾಜಿಕ ಅಂತರ ನಿಯಮ ಪಾಲನೆಯಾಗಿಲ್ಲ. ಕರೊನಾ ಉತ್ತುಂಗಕ್ಕೆ ಏರಿದ ನಂತರವೂ ಕೂಡ ಅಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿತ್ತು ಎಂದು ಅಲ್ಲಿನ ಮಾಧ್ಯಮಗಳೇ ವರದಿ ಮಾಡಿವೆ.

ಪಾಕಿಸ್ತಾನದಲ್ಲಿ 2,40,000ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, 5 ಸಾವಿರ ಜನರು ಸಾವನ್ನಪ್ಪಿದ್ದಾರೆ. ಇಷ್ಟಾದ ಮೇಲೆ ಅಲ್ಲಿನ ಇಮ್ರಾನ್​ ಖಾನ್​ ಸರ್ಕಾರ ಎಚ್ಚೆತ್ತುಕೊಂಡಿದೆ. ಇದನ್ನೂ ಓದಿ: video/ ಧಾರಾಕಾರ ಮಳೆಯಲ್ಲೂ ಪೇದೆ ಮಾಡಿದ ಕೆಲಸಕ್ಕೆ ಸಿಕ್ತು ಭರ್ಜರಿ ಮೆಚ್ಚುಗೆ!

ಇಂದು ಪಾಕಿಸ್ತಾನದಲ್ಲಿಯೇ ಮೊಟ್ಟ ಮೊದಲ ಸಾಂಕ್ರಾಮಿಕ ರೋಗಗಳ ಚಿಕಿತ್ಸಾ ವಿಶೇಷ ಆಸ್ಪತ್ರೆಯನ್ನು ಪ್ರಧಾನಿ ಇಮ್ರಾನ್​ ಖಾನ್​ ಅವರು ಉದ್ಘಾಟನೆ ಮಾಡಿದ್ದಾರೆ.ಇದು 250 ಬೆಡ್​​ಗಳ ಐಸೋಲೇಶನ್​ ಆಸ್ಪತ್ರೆಯಾಗಿದ್ದು, ಸಾಂಕ್ರಾಮಿಕ ರೋಗಗಳಿಗೆ ಚಿಕಿತ್ಸೆ ನೀಡುವ ಎಲ್ಲ ಉಪಕರಣಗಳು, ಸವಲತ್ತುಗಳನ್ನು ಒಳಗೊಂಡಿದೆ. ಈ ಆಸ್ಪತ್ರೆಯನ್ನು 40 ದಿನಗಳಲ್ಲಿ ಕಟ್ಟಿರುವುದೇ ಒಂದು ದಾಖಲೆ.

ಆಸ್ಪತ್ರೆಯ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ ಇಮ್ರಾನ್​ ಖಾನ್​ ಅವರು, ಈದ್​ ಉಲ್​ ಫಿತರ್​ ಸಂದರ್ಭದಲ್ಲಿ ದಯವಿಟ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಪಾಕ್​ನ ಜನರಿಗೆ ಮನವಿ ಮಾಡಿದ್ದಾರೆ. ಒಂದೊಮ್ಮೆ ನೀವು ಹಬ್ಬದ ಸಂದರ್ಭದಲ್ಲಿ ನಿರ್ಲಕ್ಷ್ಯ ಮಾಡಿದೆ ವೈರಸ್​ ಇನ್ನಷ್ಟು ಹರಡುತ್ತದೆ. ನಿಯಂತ್ರಣ ಕಷ್ಟವಾಗುತ್ತದೆ ಎಂದಿದ್ದಾರೆ.

ದೇಶದ ಒಳಿತಿಗಾಗಿ ಹಬ್ಬವನ್ನು ಸರಳವಾಗಿ ಆಚರಣೆ ಮಾಡಿ. ಆಸ್ಪತ್ರೆಗಳಲ್ಲೂ ಬೆಡ್​ಗಳ ಕೊರತೆ ಇದೆ. ವೈದ್ಯರೂ ಒತ್ತಡದಲ್ಲಿದ್ದಾರೆ. ನಾವೆಲ್ಲರೂ ಒಟ್ಟಾಗಿ ಕರೊನಾ ವಿರುದ್ಧ ಹೋರಾಟ ಮಾಡೋಣ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)