ಪಾಕಿಸ್ತಾನ ಮೂಲದ ಸೈಬರ್ ಗುಂಪುಗಳು ಹಲವಾರು ಭಾರತೀಯ ಮಿಲಿಟರಿ ವೆಬ್‌ಸೈಟ್‌ಗಳನ್ನು ಗುರಿಯಾಗಿಸಿಕೊಂಡಿವೆ, ಸೈಬರ್ ದಾಳಿಯಲ್ಲಿ ಭಾರತೀಯ ರಕ್ಷಣಾ ಅಧಿಕಾರಿಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು, ಅವರ ಲಾಗಿನ್ ವಿವರಗಳನ್ನು ಮತ್ತು ವೈಯಕ್ತಿಕ ವಿವರಗಳು ಸೇರಿದಂತೆ, ಕಳ್ಳತನ ಮಾಡಿರಬಹುದು ಎಂದು ಹೇಳಲಾಗಿದೆ.
Cyber attack | ಭಾರತೀಯರ ಮೇಲೆ ಸೈಬರ್ ಸಾರ್ವಭೌಮತ್ವವನ್ನು ಸಾಧಿಸಲು ಪಾಕಿಸ್ತಾನ ನಿರಂತರ ಪ್ರಯತ್ನದಲ್ಲಿ ತೊಡಗಿದೆ. ಪ್ರಾಯೋಜಿತ ಹ್ಯಾಕರ್ ಗುಂಪುಗಳು ವೆಬ್‌ಸೈಟ್‌ಗಳನ್ನು ಕದಿಯಲು ಪ್ರಯತ್ನಗಳನ್ನು ಮಾಡಿವೆ.
ಮನೋಹರ್ ಪರಿಕ್ಕರ್ ಇನ್ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲಿಸಿಸ್ ವೆಬ್‌ಸೈಟ್‌ನ 1600 ಕ್ಕೂ ಹೆಚ್ಚು ಬಳಕೆದಾರರ 10 ಜಿಬಿ ಡೇಟಾವನ್ನು ಪಡೆದುಕೊಂಡಿದೆ ಎನ್ನಲಾಗಿದೆ.
ಪಾಕಿಸ್ತಾನ ಸೈಬರ್ ಫೋರ್ಸ್‌ನ 'ಎಕ್ಸ್' ಹ್ಯಾಂಡಲ್, ಹ್ಯಾಕರ್‌ಗಳು ಮಿಲಿಟರಿ ಎಂಜಿನಿಯರ್ ಸರ್ವೀಸಸ್ ಮತ್ತು ಮನೋಹರ್ ಪರಿಕ್ಕರ್ ಇನ್ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲಿಸಿಸ್‌ನ ಸೂಕ್ಷ್ಮ ದತ್ತಾಂಶಕ್ಕೆ ಪ್ರವೇಶ ಪಡೆದಿದ್ದಾರೆ ಎಂದು ಹೇಳಿಕೊಂಡಿದೆ. ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಸಾರ್ವಜನಿಕ ವಲಯದ ಉದ್ಯಮವಾದ ಆರ್ಮರ್ಡ್ ವೆಹಿಕಲ್ ನಿಗಮ್ ಲಿಮಿಟೆಡ್‌ನ ವೆಬ್ಸೈಟ್ಅನ್ನು ವಿರೂಪಗೊಳಿಸಲು ಹ್ಯಾಕರ್‌ಗಳು ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕನ್ನಡದಿಂದ ಬ್ಯಾನ್; ತಪ್ಪು ಯಾರದ್ದು ಎಂದು ಕರ್ನಾಟಕದ ಜನತೆ ನಿರ್ಧರಿಸಲಿ; ಸೋನು ನಿಗಮ್ ಸುದೀರ್ಘ ಪತ್ರ| Sonu nigam
ಸೈಬರ್ ಭದ್ರತಾ ತಜ್ಞರು, ಯಾವುದೇ ಹೆಚ್ಚುವರಿ ದಾಳಿಗಳನ್ನು ಪತ್ತೆಹಚ್ಚಲು ಸೈಬರ್‌ಸ್ಪೇಸ್ ಅನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ವಿಶೇಷವಾಗಿ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರುವ ಬೆದರಿಕೆ ಗುಂಪುಗಳ ದಾಳಿಗಳು ಅಲ್ಲದೆ ಮತ್ತಷ್ಟು ಒಳನುಗ್ಗುವಿಕೆ ಪ್ರಯತ್ನಗಳನ್ನು ತಡೆಯಲು ಭದ್ರತಾ ಮೂಲಸೌಕರ್ಯವನ್ನು ಬಲಪಡಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
(ಏಜೆನ್ಸೀಸ್)