ನ್ಯೂಸ್

ಭಯೋತ್ಪಾದಕ 'ಮಸೂದ್ ಅಜರ್‌'ಗೆ ಪಾಕ್ ಸರ್ಕಾರ 14 ಕೋಟಿ ರೂ. ನೀಡುವ ಸಾಧ್ಯತೆ| Pakistan

ಭಾರತದ "ಆಪರೇಷನ್ ಸಿಂಧೂರ್" ಕಾರ್ಯಾಚರಣೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ತಲಾ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಈ ಮೂಲಕ ಉಗ್ರರು ಪಾಕಿಸ್ತಾನ ಸರ್ಕಾರದ ಆಪ್ತರು ಎಂಬುದನ್ನ ಸಾಭೀತು ಪಡಿಸಿದ್ದಾರೆ.

Pakistan | ಪಾಕಿಸ್ತಾನವು ಭಯೋತ್ಪಾದನೆಗೆ ಬೆಂಬಲ ನೀಡುವುದಕ್ಕೆ ಮತ್ತೆ ಮುಂದಾಗುತ್ತಿದ್ದೆಯಾ ಎಂಬ ಪ್ರಶ್ನೆ ಮೂಡಿದೆ. ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ಜೈಶ್-ಎ-ಮೊಹಮ್ಮದ್ ನಾಯಕ ಮಸೂದ್ ಅಜರ್‌ಗೆ 14 ಕೋಟಿ ರೂ. ಪರಿಹಾರವನ್ನು ಪಾಕ್​ ಸರ್ಕಾರ ನೀಡಲಿದೆ ಎಂದು ಹೇಳಲಾಗ್ತಾ ಇದೆ.

ಭಾರತ ಸೇನೆ ಭಯೋತ್ಪಾದಕ ಗುಂಪುಗಳನ್ನು ನಾಶ ಮಾಡಿತ್ತು. ಅದರಲ್ಲಿ ವಿಶ್ವಸಂಸ್ಥೆಯಿಂದ ಗುರುತಿಸಲ್ಪಟ್ಟ ಮತ್ತು ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮಸೂದ್ ಅಜರ್ ಅವರ 14 ಕುಟುಂಬ ಸದಸ್ಯರು ಸಾವನ್ನಪ್ಪಿದ್ದರು. ಸದ್ಯ ಮಸೂದ್ ಅಜರ್ ಕುಟುಂಬಕ್ಕೆ 14 ಕೋಟಿ ರೂಪಾಯಿ ಪರಿಹಾರ ಸಿಗುವ ಸಾಧ್ಯತೆ ಇದೆ ಎನ್ನಲಾಗ್ತಾ ಇದೆ.

ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದ ಉಗ್ರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸರ್ಕಾರದ ಪ್ರಮುಖ ಅಧಿಕಾರಿಗಳು ಭಾಗಿಯಾಗಿಯಾಗಿದ್ದರು. ಈ ಬೆನ್ನಲ್ಲೆ ಅಲ್ಲಿನ ಸರ್ಕಾರವು ಮೃತ ಉಗ್ರರಿಗೆ ಪರಿಹಾರ ಘೋಷಣೆ ಮಾಡಿದೆ.

ಆಪರೇಷನ್‌ ಸಿಂಧೂರ ದಾಳಿಯಲ್ಲಿ ಭಾರತವು ಬಹಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿಯ ಮೇಲೆ ಕ್ಷಿಪಣಿಗಳ ದಾಳಿ ಮಾಡಿತು. ಜೈಶ್​ನ ಭಯೋತ್ಪಾದಕ ಶಿಬಿರವನ್ನು ಅಲ್ಲಿ ಧ್ವಂಸ ಮಾಡಲಾಯಿತು.  ಭಾರತದ ದಾಳಿಯಲ್ಲಿ ಮಸೂದ್ ಅಜರ್​ನ ಸಹೋದರಿ ಮತ್ತು ಭಾವ ಸೇರಿದಂತೆ 14 ಜನರು ಸಾವನ್ನಪ್ಪಿದ್ದರು.

ಒಟ್ಟಾರೆ ದಾಳಿಯಲ್ಲಿ ಮಸೂದ್ ಅಜರ್ ಅವರ ಅಕ್ಕ ಮತ್ತು ಆಕೆಯ ಪತಿ, ಸೋದರಳಿಯ ಮತ್ತು ಆತನ ಹೆಂಡತಿ, ಸೋದರ ಸೊಸೆ ಮತ್ತು ಐವರು ಮಕ್ಕಳು ಮೃತಪಟ್ಟಿದ್ದಾರೆ. ಸದ್ಯ ಕುಟುಂಬದಲ್ಲಿ ಅಜರ್ ಮಾತ್ರ ಉಳಿದಿದ್ದಾನೆ. ಇನ್ನೂ ಸರ್ಕಾರ ನೀಡುವ ಪರಿಹಾರ 14 ಕೋಟಿ ರೂಪಾಯಿ ಆತನ ಕೈ ಸೇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

(ಏಜೆನ್ಸೀಸ್)