ನ್ಯೂಯಾರ್ಕ್: ಪಾಕಿಸ್ತಾನ ಮತ್ತು ಚೀನಾ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುತ್ತಿವೆ. ಅಲ್ಲದೆ, ರಷ್ಯಾ ಮತ್ತು ಉತ್ತರ ಕೊರಿಯಾ ಕೂಡ ತಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುತ್ತಿವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಹೇಳಿದ್ದಾರೆ.
ಈ ಬಗ್ಗೆ ಸಿಬಿಎಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಪರಮಾಣು ಶಕ್ತಿಯನ್ನು ಹೊಂದಿರುವ ದೇಶಗಳು ಪರೀಕ್ಷೆಗಳನ್ನು ನಡೆಸುತ್ತಿವೆ. ಆದರೆ, ಕೇಲವು ದೇಶಗಳು ಇದರ ಬಗ್ಗೆ ಮಾತನಾಡುವುದಿಲ್ಲ. ಚೀನಾ ಮತ್ತು ಪಾಕಿಸ್ತಾನಗಳು ಈಗಾಗಲೇ ರಹಸ್ಯವಾಗಿ ಪರಮಾಣು ಸ್ಫೋಟಗಳನ್ನು ನಡೆಸುತ್ತಿವೆ ಎಂದು ಟ್ರಂಪ್ ತಿಳಿಸಿದ್ದಾರೆ.
ರಷ್ಯಾದ ಪರೀಕ್ಷೆ ಮತ್ತು ಚೀನಾದ ಪರೀಕ್ಷೆ ನಡೆಸುತ್ತಿವೆ. ಆದರೆ ಆ ದೇಶಗಳು ಅದರ ಬಗ್ಗೆ ಮಾತನಾಡುವುದಿಲ್ಲ. ನಿಮಗೆ ಗೊತ್ತಾ, ನಾವು ಮುಕ್ತ ಸಮಾಜದಲ್ಲಿದ್ದೇವೆ. ನಾವು ವಿಭಿನ್ನರು. ನಾವು ಪರಮಾಣು ಬಗ್ಗೆ ಮಾತನಾಡುತ್ತೇವೆ. ಅಲ್ಲದೆ, ಪರಮಾಣು ಬಗ್ಗೆ ಬರೆಯುವ ವರದಿಗಾರರು ಅವರ ಬಳಿ ಇಲ್ಲ. ಪಾಕಿಸ್ತಾನದ ವಿರುದ್ಧ ಆರೋಪ ಮಾಡಿದ್ದು, ಖಂಡಿತ ಉತ್ತರ ಕೊರಿಯಾ ಮತ್ತು ಪಾಕಿಸ್ತಾನವು ಪರೀಕ್ಷೆ ಮಾಡುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: “ಆ ರಾತ್ರಿ ಎಲ್ಲವೂ…” ವಿಶ್ವಕಪ್ ಗೆದ್ದ ಸಂಭ್ರಮದಲ್ಲಿ ನಾಯಕಿ ಹರ್ಮನ್ಪ್ರೀತ್ ಕೌರ್ ಹೇಳಿಕೆ ವೈರಲ್ | Harmanpreet Kaur
ಭಾರತ ಪಾಕಿಸ್ತಾನದ ಮೇಲೆ ಪರಮಾಣು ಯುದ್ಧ ಮಾಡಲಿದೆ. ಪಾಕಿಸ್ತಾನದ ಪ್ರಧಾನಿ ಎದ್ದು ನಿಂತರು. ಡೊನಾಲ್ಡ್ ಟ್ರಂಪ್ ಭಾಗಿಯಾಗದಿದ್ದರೆ, ಲಕ್ಷಾಂತರ ಜನರು ಸಾಯುತ್ತಿದ್ದರು. ಇಂಡೋ-ಪಾಕ್ ಒಂದು ಕೆಟ್ಟ ಯುದ್ಧವಾಗಿತ್ತು. ಅಲ್ಲದೆ, ಎಲ್ಲೆಡೆ ವಿಮಾನಗಳನ್ನು ಹೊಡೆದುರುಳಿಸಲಾಯಿತು. ನಾನು ಉಭಯ ರಾಷ್ಟ್ರಗಳಿಗೂ ಹೇಳಿದೆ, ನೀವು ಯುದ್ದ ನಿಲ್ಲಿಸದಿದ್ದರೆ ಅಮೆರಿಕದೊಂದಿಗೆ ನಿಮ್ಮೊಂದಿಗೆ ಯಾವುದೇ ವ್ಯವಹಾರ ಮಾಡುವುದಿಲ್ಲ ಎಂದು ನಾನು ತಿಳಿಸಿದೆ ಎಂದು ಟ್ರಂಪ್ ಮತ್ತೊಮ್ಮೆ ತಿಳಿಸಿದ್ದಾರೆ.
ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ದೇಶಗಳು ಹೋಗಿ ಇದರ ಬಗ್ಗೆ ನಿಮಗೆ ಏನು ಹೇಳುವುದಿಲ್ಲ. ಅಲ್ಲದೆ, ಪರಮಾಣು ಶಸ್ತ್ರಾಸ್ತ್ರಗಳನ್ನು ಭೂಗತವಾಗಿ ಪರೀಕ್ಷೆ ನಡೆಸುತ್ತಾರೆ. ಆ ದೇಶಗಳಲ್ಲಿ ಜನರಿಗೆ ಪರೀಕ್ಷೆಯಿಂದ ಏನಾಗುತ್ತಿದೆ ಎಂದು ನಿಖರವಾಗಿ ತಿಳಿದಿಲ್ಲ. ನಿಮಗೆ ಸ್ವಲ್ಪ ಕಂಪನ ಅನಿಸುತ್ತದೆ ಎಂದು ಟ್ರಂಪ್ ನುಡಿದಿದ್ದಾರೆ.
ಜಾಗತಿಕ ಮೇಲ್ವಿಚಾರಣಾ ಕೇಂದ್ರಗಳು ಭೂಗತ ಪರಮಾಣು ಸ್ಫೋಟಗಳಿಂದ ಉಂಟಾಗುವ ಭೂಕಂಪದಂತಹ ಅಲೆಗಳಾಗಿರುವ ನೆಲದ ಕಂಪನಗಳನ್ನು ಪತ್ತೆ ಮಾಡುತ್ತವೆ. ಅದರೆ, ಇಂತಹ ಪರೀಕ್ಷೆಗಳನ್ನು ರಹಸ್ಯವಾಗಿ ನಡೆಸಬಹುದು. ಇದರಿಂದಾಗಿ ಇವುಗಳನ್ನು ಪತ್ತೆಹಚ್ಚಲಾಗುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಅಲ್ಲದೆ, 33 ವರ್ಷಗಳ ನಿಷೇಧದ ನಂತರ ಅಮೆರಿಕದ ಪಡೆಗಳಿಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸಲು ನೀಡಿದ ಆದೇಶವನ್ನು ಸಮರ್ಥಿಸಿಕೊಳ್ಳುವಾಗ ಟ್ರಂಪ್ ಹೇಳಿಕೆಗಳು ನೀಡಿದ್ದಾರೆ. (ಏಜೆನ್ಸೀಸ್)