ನ್ಯೂಸ್

'ಐವರು ಐಸಿಸ್' ಭಯೋತ್ಪಾದಕರ ಬಂಧನ; ರಾಸಾಯನಿಕ ಶಸ್ತ್ರಾಸ್ತ್ರಗಳು ಪತ್ತೆ| terrorists

ನವದೆಹಲಿ; ದೆಹಲಿ ಪೊಲೀಸರು ಮತ್ತು ಕೇಂದ್ರೀಯ ಸಂಸ್ಥೆಗಳು ಹಲವಾರು ರಾಜ್ಯಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಮಾಡ್ಯೂಲ್ ಜೊತೆ, ಸ್ನಾತಕೋತ್ತರ ಪದವೀಧರ ಸೇರಿದಂತೆ ಐದು ಐಸಿಸ್ ಭಯೋತ್ಪಾದಕರನ್ನು ಬಂಧಿಸಲಾಗಿದೆ.

ಜಾರ್ಖಂಡ್, ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ಶಂಕಿತ ಉಗ್ರರನ್ನ ಬಂಧನ ಮಾಡಲಾಗಿದೆ. ಮುಂಬೈ ನಿವಾಸಿ ಅಫ್ತಾಬ್, ಅಬು ಸುಫಿಯಾನ್‌ ಇಬ್ಬರನ್ನು ದೆಹಲಿಯ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ ಹಾಗೂ ಕಮ್ರಾನ್ ಖುರೇಷಿಯನ್ನ ಮಧ್ಯಪ್ರದೇಶದ ರಾಜ್‌ಗಢದಲ್ಲಿ, ಆಶರ್ ದಾನಿಶ್‌ ರಾಂಚಿಯಲ್ಲಿ ಮತ್ತು ಹುಜೈಫ್ ಎಂಬಾತನನ್ನು ಯೆಮೆನ್‌ನ ತೆಲಂಗಾಣದಲ್ಲಿ ಬಂಧಿಸಲಾಗಿದೆ.

ಈ ಗುಂಪು ದೇಶದಲ್ಲಿ ದೊಡ್ಡ ದಾಳಿ ನಡೆಸಲು ಯೋಜಿಸುತ್ತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳು ಭಯೋತ್ಪಾದಕ ಸಂಘಟನೆಯ ಸ್ಲೀಪರ್ ಮಾಡ್ಯೂಲ್‌ನ ಭಾಗವಾಗಿದ್ದರು ಎಂದು ಮೂಲಗಳು ತಿಳಿಸಿವೆ. ಬಾಂಬ್‌ಗಳನ್ನು ತಯಾರಿಸುವುದು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದು ಮತ್ತು ಸಂಘಟನೆಯ ಬಲವನ್ನು ಹೆಚ್ಚಿಸುವ ಕೆಲಸವನ್ನು ಅವರಿಗೆ ವಹಿಸಲಾಗಿತ್ತು ಎನ್ನಲಾಗಿದೆ.

(ಏಜೆನ್ಸೀಸ್)

ಬಂಧಿತ ಆರೋಪಿಗಳಿಂದ ಭಾರೀ ಪ್ರಮಾಣದ ಕೆಮಿಕಲ್‌ ವೆಪೆನ್‌, ಒಂದು ಪಿಸ್ತೂಲ್‌, ಡಿಜಿಟಲ್‌ ಸಾಧನಗಳು, ವೆಪೆನ್‌ ಕಾರ್ಟ್ರಿಡ್ಜ್‌ ವಶಕ್ಕೆ ಪಡೆಯಲಾಗಿದೆ. ಇದಲ್ಲದೆ ಲ್ಯಾಪ್ ಟಾಪ್, ಮೊಬೈಲ್ ಫೋನ್, ತೂಕದ ಯಂತ್ರ, ಸುರಕ್ಷತಾ ಕೈಗವಸ್ತುಗಳು, ಮಾಸ್ಕ್​, ಮದರ್‌ಬೋರ್ಡ್ ಹೊಂದಿರುವ ಪ್ಲಾಸ್ಟಿಕ್ ಕಂಟೇನರ್, ವೈರ್‌ಗಳು ಇತ್ಯಾದಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಭಯೋತ್ಪಾದಕರು ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನದಲ್ಲಿರುವ ತಮ್ಮ ನಿರ್ವಾಹಕರೊಂದಿಗೆ ನಿರಂತರ ಸಂವಹನ ನಡೆಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.