ನ್ಯೂಸ್

ಆಹಾರ ಧಾನ್ಯ ಬೆಳೆಯಲು ಮುಂದಾದ ಪಾಕ್​ ಸೇನೆ!

ನವದೆಹಲಿ: ದೇಶದ 10 ಲಕ್ಷ ಎಕರೆಗೂ ಅಧಿಕ ಪ್ರದೇಶದಲ್ಲಿ ಆಹಾರ ಧಾನ್ಯ ಬೆಳೆಸಲು ಪಾಕಿಸ್ತಾನದ ಸೇನೆ ಮುಂದಾಗಿದೆ. ಸ್ವತಂತ್ರ ಪಾಕಿಸ್ತಾನದ ಇತಿಹಾಸದ ಸುಮಾರು ಅರ್ಧಕ್ಕೂ ಹೆಚ್ಚು ಭಾಗ ದೇಶದ ಆಡಳಿತದ ಮೇಲೆ ಹಿಡಿತ ಸಾಧಿಸಿದ್ದ ಸೇನೆ ಇಂಥದ್ದೊಂದು ಕ್ರಮಕ್ಕೆ ಮುಂದಾಗಿರುವುದು ವಿಶೇಷ ಬೆಳವಣಿಗೆಯಾಗಿದೆ.

ಆದರೆ, ಎಲ್ಲ ರಂಗಗಳಲ್ಲೂ ತನ್ನ ಅಸ್ತಿತ್ವ ತೋರಿಸಲು ಹೊರಟಿರುವ ಸೇನೆಯ ಉದ್ದೇಶದ ಬಗ್ಗೆ ಕಳವಳವೂ ವ್ಯಕ್ತವಾಗುತ್ತಿದೆ. ದೇಶಕ್ಕಾಗಿ ಆಹಾರ ಧಾನ್ಯ ಬೆಳೆಯುವ ಹೊಸ ಪಾತ್ರಕ್ಕೆ ಅಣಿಯಾಗಿರುವ ಸೇನೆ, 10 ಲಕ್ಷಕ್ಕೂ ಅಧಿಕ ಎಕರೆ ಸರ್ಕಾರಿ ಜಮೀನನ್ನು ಸ್ವಾಧಿನಪಡಿಸಿಕೊಂಡಿದೆ.

ಹಲವಾರು ತಿಂಗಳಿಂದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ದೇಶದ ಜನರ ಹಸಿವನ್ನು ನೀಗಿಸಲು ಈ ನಿರ್ಧಾರಕ್ಕೆ ಬಂದಿದೆ. ಅಪಾರ ಪ್ರಮಾಣದ ಸರ್ಕಾರಿ ಸ್ವಾಮ್ಯದ ಜಮೀನಿನಲ್ಲಿ ಆಹಾರ ಬೆಳೆಯುವುದು ಅದರ ಉದ್ದೇಶವಾಗಿದೆ.