ನ್ಯೂಸ್

'ಉಗ್ರರ' ಅಂತ್ಯಕ್ರಿಯೆಯಲ್ಲಿ ಅಧಿಕಾರಿಗಳು ಭಾಗವಹಿಸಲು 'ಪಾಕ್ ಸೇನಾ ಮುಖ್ಯಸ್ಥ'ರು ಆದೇಶಿಸಿದ್ದರು; ಜೆಇಎಂ ಕಮಾಂಡರ್| Masood Ilyas

ನವದೆಹಲಿ: ಜೈಶ್-ಎ-ಮೊಹಮ್ಮದ್ (ಜೆಇಎಂ) ಕಮಾಂಡರ್ ಮಸೂದ್ ಇಲಿಯಾಸ್ ಕಾಶ್ಮೀರಿ ಎಂಬಾತನ ಹೊಸ ವಿಡಿಯೋದಿಂದ ಆಶ್ಚರ್ಯಕರ ಮಾಹಿತಿಯೊಂದು ಹೊರಬಿದ್ದಿದೆ. ಹತ್ಯೆಗೀಡಾದ ಭಯೋತ್ಪಾದಕರನ್ನು ವೈಭವೀಕರಿಸುವಲ್ಲಿ ಪಾಕಿಸ್ತಾನ ಸೇನೆ ಭಾಗಿಯಾಗಿರುವ ಬಗ್ಗೆ ಆತ ಬಹಿರಂಗವಾಗಿ ಹೇಳಿಕೆ ನೀಡಿದ್ದಾನೆ.

ಭಾರತದ ಆಪರೇಷನ್ ಸಿಂಧೂರ್ ಸಮಯದಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಹಿರಿಯ ಅಧಿಕಾರಿಗಳಿಗೆ ಆದೇಶಿಸಿದ್ದರು. ಪಾಕಿಸ್ತಾನದ ಜಿಎಚ್‌ಕ್ಯೂ ಕಾರ್ಪ್ಸ್ ಕಮಾಂಡರ್‌ಗಳಿಗೆ ಭಯೋತ್ಪಾದಕರಿಗೆ ಪೂರ್ಣ ಮಿಲಿಟರಿ ಸೆಲ್ಯೂಟ್‌ಗಳೊಂದಿಗೆ ಗೌರವ ಸಲ್ಲಿಸುವಂತೆ ಸೂಚಿಸಿತ್ತು ಎಂದು ಇಲಿಯಾಸ್ ಕಾಶ್ಮೀರಿ ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.

ಭಾರತದಲ್ಲಿ 'ಮಸೂದ್ ಅಜರ್' ಪಾತ್ರ

ಇನ್ನೂ ಮತ್ತೊಂದು ವಿಡಿಯೋದಲ್ಲಿ ದೆಹಲಿ ಮತ್ತು ಮುಂಬೈನಲ್ಲಿ ಭಯೋತ್ಪಾದಕ ದಾಳಿಗಳನ್ನು ಆಯೋಜಿಸುವಲ್ಲಿ ಮೌಲಾನಾ ಮಸೂದ್ ಅಜರ್ ಪಾತ್ರವನ್ನು ಇಲಿಯಾಸ್ ಕಾಶ್ಮೀರಿ ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಉರ್ದು ಭಾಷೆಯಲ್ಲಿ ಮಾತನಾಡಿದ ಆತ, ದೆಹಲಿಯ ತಿಹಾರ್‌ ಜೈಲಿಂದ ತಪ್ಪಿಸಿಕೊಂಡ ಬಳಿಕ ಅಜರ್‌ ಪಾಕಿಸ್ತಾನಕ್ಕೆ ಬಂದು, ಬಾಲಾಕೋಟ್‌ನಲ್ಲಿ ತಮ್ಮ ಉಗ್ರ ಚಟುವಟಿಕೆ ಪ್ರಾರಂಭಿಸಲಾಯ್ತು. ಇಲ್ಲಿ ಉಳಿದುಕೊಂಡು ಅವರು ದೆಹಲಿ ಮತ್ತು ಮುಂಬೈನಲ್ಲಿ ದಾಳಿ ನಡೆಸಿದ ಶೂರ ಅವರು ಎಂದು ಹೊಗಳಿದ್ದಾನೆ. ಪಾಪಕೃತ್ಯಗಳನ್ನು ಒಪ್ಪಿಕೊಳ್ಳುವುದರ ಜತೆಗೆ ಮಸೂದ್‌ ಅಜರ್‌ ಪಾಕಿಸ್ತಾನ ಉಗ್ರರ ಸ್ವರ್ಗ ಎಂಬುದನ್ನು ಆ ದೇಶ ಅಲ್ಲಗಳೆಯಲು ಮಾಡಿದ್ದಾನೆ ಎಂದು ಹೇಳಲಾಗಿದೆ.

ಭಾರತದಿಂದ ಪ್ರತಿದಾಳಿ

(ಏಜೆನ್ಸೀಸ್)

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ಬಳಿಕ ಇದಕ್ಕೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ್​ಅನ್ನು ಪ್ರಾರಂಭಿಸಲಾಯ್ತು. ಮೇ 7 ರಂದು ಭಾರತೀಯ ಪಡೆಗಳು ಸೇನೆ, ನೌಕಾಪಡೆ ಮತ್ತು ವಾಯುಪಡೆಗಳನ್ನು ಒಳಗೊಂಡ ಸಂಘಟಿತ ಕಾರ್ಯಾಚರಣೆ ನಡೆಸಿ, ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ಗೆ ಸಂಬಂಧಿಸಿದ ಒಂಬತ್ತು ಪ್ರಮುಖ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದವು.