ಇಸ್ಲಾಮಾಬಾದ್: ಇರಾನ್ನ ಸಿಯೆಸ್ತಾನ್-ಬಲೂಚಿ ಸ್ತಾನ್ ಪ್ರಾಂತ್ಯದ ಮೇಲೆ ಪಾಕಿಸ್ತಾನ ಗುರುವಾರ ‘ನಿಖರ ಮಿಲಿಟರಿ ದಾಳಿ’ ನಡೆಸಿದ್ದು, ಎರಡೂ ದೇಶಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿದೆ. ಭಯೋತ್ಪಾದಕರ ಅಡಗುತಾಣಗಳ ಮೇಲೆ ದಾಳಿ ನಡೆದಿದ್ದು, 9 ಜನರು ಇದರಲ್ಲಿ ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನದ ಅಧಿಕೃತ ಹೇಳಿಕೆ ನೀಡಿದೆ. ಪಾಕಿಸ್ತಾನವು ಇರಾನ್ ರಾಯಭಾರಿಯನ್ನು ಹೊರಹಾಕಿದ ಒಂದು ದಿನದ ನಂತರ ಈ ದಾಳಿ ನಡೆದಿದೆ.
3 ಮಹಿಳೆಯರು ಮತ್ತು 4 ಮಕ್ಕಳು ಮೃತಪಟ್ಟಿ ದ್ದಾರೆ. ಇವರೆಲ್ಲರೂ ಇರಾನಿಯೇತರ ಪ್ರಜೆಗಳು. ಗಡಿ ಗ್ರಾಮದ ಮೇಲೆ ಪಾಕಿಸ್ತಾನ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇವರು ಸಾವನ್ನಪ್ಪಿದ್ದಾರೆ ಎಂದು ಇರಾನ್ನ ಅಧಿಕೃತ ಸುದ್ದಿ ಸಂಸ್ಥೆ ವರದಿ ಮಾಡಿದೆ. ಗುರುವಾರ ಬೆಳಗ್ಗೆ 4:05ಕ್ಕೆ ದಾಳಿ ನಡೆದಿದೆ. ಪ್ರಾಂತೀಯ ರಾಜಧಾನಿ ಜಹೇದಾನ್ನ ಆಗ್ನೇಯಕ್ಕೆ 347 ಕಿಮೀ ದೂರದಲ್ಲಿರುವ ಸರವನ್ ನಗರದ ಬಳಿ ಸ್ಫೋಟ ಸಂಭವಿಸಿದೆ. ಅಲ್ಲಿ ಯಾವುದೇ ಸಾವು- ನೋವು ಸಂಭವಿಸಿಲ್ಲ. ಗಡಿ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ 9 ಜನರು ಮೃತಪಟ್ಟಿದ್ದಾರೆಂದು ವರದಿ ಹೇಳಿದೆ. ಪಾಕಿಸ್ತಾನಿ ಮೂಲದ ಭಯೋತ್ಪಾದಕರು ಇರಾನ್ ಪ್ರದೇಶದ ಒಳಗೆ ಸುರಕ್ಷಿತ ನೆಲೆ ಕಂಡುಕೊಂಡಿದ್ದಾರೆ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಆರೋಪ ಮಾಡಿದೆ. ರಾಷ್ಟ್ರೀಯ ಭದ್ರತೆ ರಕ್ಷಣೆಗೆ ಮತ್ತು ಬಾಹ್ಯ ಬೆದರಿಕೆಗಳ ವಿರುದ್ಧ ಹೋರಾಡಲು ಪಾಕಿಸ್ತಾನ ಶಕ್ತವಾಗಿದೆ. ಅತ್ಯಂತ ಸಂಕೀರ್ಣವಾದ ಈ ಕಾರ್ಯಾ ಚರಣೆಯ ಯಶಸ್ವಿಯಾಗಿದ್ದು, ಪಾಕಿಸ್ತಾನದ ಸಶಸ್ತ್ರ ಪಡೆಗಳ ವೃತ್ತಿಪರತೆಗೆ ಸಾಕ್ಷಿಯಾಗಿದೆ. ಜನರ ಸುರಕ್ಷತೆ ಮತ್ತು ಭದ್ರತೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದು ಕೊಳ್ಳಲಾಗುವುದು ಪಾಕ್ ವಿದೇಶಾಂಗ ಕಚೇರಿ ಹೇಳಿದೆ.
ಏನಿದು ವಿವಾದ?: ಇರಾನ್ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಜೈಶ್ ಅಲ್-ಅದ್ಲ್ ಉಗ್ರಗಾಮಿ ಗುಂಪು ಬಲೂಚಿಸ್ತಾನದ ಗಡಿ ಪಟ್ಟಣವಾದ ಪಂಜ್ಗುರ್ನಲ್ಲಿ ಕಾರ್ಯನಿರತವಾಗಿದೆ. ತಮ್ಮ ಮೇಲೆ ದಾಳಿ ನಡೆಸಲು ಉಗ್ರರು ಪಾಕಿಸ್ತಾನದ ನೆಲವನ್ನು ಬಳಸುತ್ತಿದ್ದಾರೆ ಎಂದು ಇರಾನ್ ಹಲವು ಸಮಯದಿಂದ ದೂರುತ್ತಲೇ ಬಂದಿದೆ. ಬುಧವಾರ ಈ ಉಗ್ರ ಸಂಘಟನೆಗಳ ನೆಲೆಗಳನ್ನು ಟಾರ್ಗೆಟ್ ಮಾಡಿ, ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಕಾರ ಕ್ರಮ ಕೈಗೊಂಡಿರುವ ಪಾಕಿಸ್ತಾನ, ಇರಾನ್ ಗಡಿ ಪ್ರದೇಶದ ಮೇಲೆ ದಾಳಿ ನಡೆಸಿದೆ.
ಚೀನಾ ಮಧ್ಯಸ್ಥಿಕೆ ಪ್ರಸ್ತಾಪ: ಪಾಕಿಸ್ತಾನ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಚೀನಾ ಸಂಧಾನ ನಡೆಸಲು ಸಿದ್ಧ ಎಂದು ಹೇಳಿದೆ. ಅಂತಾರಾಷ್ಟ್ರೀಯ ಕಾನೂನು ಮತ್ತು ತತ್ವಗಳ ಆಧಾರದ ಮೇಲೆ ದೇಶಗಳ ನಡುವಿನ ಸಂಬಂಧಗಳನ್ನು ನಿರ್ವಹಿಸಬೇಕು. ಎಲ್ಲಾ ದೇಶಗಳ ಸಾರ್ವಭೌಮತ್ವ, ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಎಂದು ಚೀನಾ ಸರ್ಕಾರದ ವಕ್ತಾರರು ಹೇಳಿದ್ದಾರೆ. ಪಾಕಿಸ್ತಾನವು ಚೀನಾದ ಆಪ್ತ ಮಿತ್ರನಾಗಿದೆ. ಇದೇ ವೇಳೆ ಇರಾನ್ನಿಂದ ಗಣನೀಯ ಪ್ರಮಾಣದಲ್ಲಿ ತೈಲವನ್ನು ಚೀನಾ ಆಮದು ಮಾಡಿಕೊಳ್ಳುತ್ತದೆ.
ವಿವಾದ ಹೊಸದಲ್ಲ: ಪಾಕ್ - ಇರಾನ್ ಗಡಿಯ ಎರಡೂ ಬದಿಗಳಲ್ಲಿ ಪ್ರತ್ಯೇಕತಾ ವಾದಿ ಉಗ್ರರ ಗುಂಪುಗಳು ಕಾರ್ಯನಿರ್ವಹಿಸುತ್ತಿವೆ. ಪಾಕಿಸ್ತಾನ ಮತ್ತು ಇರಾನ್ ನಡುವಿನ ಸಂಘರ್ಷ ಹೊಸದೇನಲ್ಲ. ಕಳೆದ ಕೆಲವು ವರ್ಷಗಳಿಂದ ಉಭಯ ದೇಶಗಳ ನಡುವಿನ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಇದೆ. ಮಾರಣಾಂತಿಕ ಘರ್ಷಣೆಗಳು ಆಗಾಗ ಸಂಭವಿಸುತ್ತಿವೆ. ಕಳೆದ ತಿಂಗಳು ಇರಾನ್ ಜೈಶ್ ಅಲ್-ಅದ್ಲ್ ಉಗ್ರಗಾಮಿಗಳು ಸಿಸ್ತಾನ್ ಮತ್ತು ಬಲೂಚಿಸ್ತಾನದ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದು, 11 ಇರಾನ್ ಪೊಲೀಸ್ ಅಧಿಕಾರಿಗಳನ್ನು ಹತ್ಯೆ ಮಾಡಿದ್ದರು. ಆದರೆ ಈಗ ಎರಡೂ ದೇಶಗಳು ಪರಸ್ಪರ ದಾಳಿ ನಡೆಸುತ್ತಿರುವುದು ಪರಿಸ್ಥಿತಿ ಬಿಗಡಾಯಿಸಲು ಕಾರಣವಾಗಿದೆ.
ಯುದ್ಧ ಛಾಯೆ...: ಪ್ರಸ್ತುತ ಹಲವು ದೇಶಗಳಲ್ಲಿ ಯುದ್ಧದ ಛಾಯೆ ಆವರಿಸಿದೆ. ರಷ್ಯಾ ಮತ್ತು ಯೂಕ್ರೇನ್ ನಡುವೆ ಕಳೆದ ಒಂದು ವರ್ಷದಿಂದ ಯುದ್ಧ ನಡೆಯು ತ್ತಿದ್ದು, ಪರಸ್ಪರ ದಾಳಿಯಲ್ಲಿ ಸಾವಿರಾರು ಜನರು ಮೃತಪಟ್ಟಿದ್ದಾರೆ. ಮತ್ತೊಂದೆಡೆ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ನಡೆಯುತ್ತಿದೆ. ಕಳೆದ 4 ತಿಂಗಳಲ್ಲಿ ಹತ್ತಾರು ಸಾವಿರ ಜನರು ಮೃತಪಟ್ಟಿದ್ದಾರೆ. ಗಾಜಾ ಪಟ್ಟಿಯನ್ನು ಗುರಿಯಾಗಿಸಿ ಇಸ್ರೇಲ್ ಈಗಲೂ ದಾಳಿ ನಡೆಸುತ್ತಿದೆ. ಕಪು್ಪ ಸಮುದ್ರದಲ್ಲಿ ಸಂಚರಿಸುವ ಹಡಗುಗಳ ಮೇಲೆ ಹೌತಿ ಉಗ್ರರು ದಾಳಿ ನಡೆಸುತ್ತಿದ್ದಾರೆ. ಭಾರತ ಸಹಿತ ಹಲವು ದೇಶಗಳಿಗೆ ತೊಂದರೆ ಆಗುತ್ತಿದೆ. ಜಾಗತಿಕ ಪೂರೈಕೆ ಸರಪಳಿಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯೂ ಇದೆ.
ಡ್ರೋನ್, ರಾಕೆಟ್ ಬಳಕೆ: ಎರಡು ಪ್ರಮುಖ ಬಲೂಚ್ ಭಯೋತ್ಪಾದಕ ಗುಂಪುಗಳ ಮೇಲೆ ದಾಳಿ ನಡೆಸಲು ಕಿಲ್ಲರ್ ಡ್ರೋನ್ ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ಬಳಸಿರುವುದಾಗಿ ಪಾಕಿಸ್ತಾನ ಸೇನೆ ಹೇಳಿದೆ. ಕಿಲ್ಲರ್ ಡ್ರೋನ್ಗಳು, ರಾಕೆಟ್ಗಳು, ಸ್ಟಾ್ಯಂಡ್-ಆಫ್ ಆಯುಧಗಳನ್ನು ಬಳಸಿಕೊಂಡು ನಿಖರವಾದ ದಾಳಿಗಳನ್ನು ನಡೆಸಲಾಯಿತು. ಬಲೂಚಿಸ್ತಾನ್ ಲಿಬರೇಶನ್ ಆರ್ವಿು (ಬಿಎಲ್ಎ) ಮತ್ತು ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ (ಬಿಎಲ್ಎಫ್) ಭಯೋತ್ಪಾದಕ ಸಂಘಟನೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಇವರ ಅಡಗುತಾಣಗಳನ್ನು ಗುಪ್ತಚರ-ಆಧಾರಿತ ಕಾರ್ಯಾಚರಣೆಯಲ್ಲಿ ಪತ್ತೆ ಮಾಡಲಾಗಿತ್ತು. ಈ ಅಡಗುತಾಣಗಳನ್ನು ಪ್ರಮುಖ ಉಗ್ರರಾದ ದೋಸ್ತಾ ಅಲಿಯಾಸ್ ಅಧ್ಯಕ್ಷ, ಬಜ್ಜರ್ ಅಲಿಯಾಸ್ ಸೊಘತ್, ಸಾಹಿಲ್ ಅಲಿಯಾಸ್ ಶಫಾಕ್, ಅಸ್ಗರ್ ಅಲಿಯಾಸ್ ಬಾಶಮ್ ಮತ್ತು ವಜೀರ್ ಬಳಸುತ್ತಿದ್ದರು ಎಂದು ಪಾಕ್ ಹೇಳಿದೆ.