ನ್ಯೂಸ್

ಅನುಮಾನಾಸ್ಪದವಾಗಿ ಹಾರಾಡುತ್ತಿದ್ದ ಪಾಕ್​ ಡ್ರೋನ್​ನ್ನು ಹೊಡೆದುರುಳಿಸಿದ ಬಿಎಸ್​ಎಫ್​ ಯೋಧರು

ಜಮ್ಮು: ಜಮ್ಮುಕಾಶ್ಮೀರದ ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಸಮೀಪ ಬೇಹುಗಾರಿಕೆ ನಡೆಸುತ್ತಿದ್ದ ಪಾಕಿಸ್ತಾನಿ ಡ್ರೋನ್​ನ್ನು ಭಾರತೀಯ ಗಡಿ ಭದ್ರತಾ ಪಡೆಯ ಯೋಧರು ಹೊಡೆದುರುಳಿಸಿದ್ದಾರೆ.

ಇಂದು ಮುಂಜಾನೆ 5.10ಕ್ಕೆ ಘಟನೆ ನಡೆದಿದೆ. ಪಾಕ್​ ಡ್ರೋನ್​ ಆಕಾಶದಲ್ಲಿ ಅತ್ತಿಂದತ್ತ ಹಾರಾಡುತ್ತಿತ್ತು. ಅನುಮಾನಾಸ್ಪದವಾಗಿ ಸುಳಿದಾಡುತ್ತಿದ್ದ ಡ್ರೋನ್​ನ್ನು ಪಾನ್ಸಾರ್​ ಪೋಸ್ಟ್ ಸಮೀಪ ಗಸ್ತು ತಿರುಗುತ್ತಿದ್ದ ಬಿಎಸ್​ಎಫ್​ ಸಿಬ್ಬಂದಿ ಹೊಡೆದುರುಳಿಸಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಭಾರತೀಯ ಯೋಧರು ಹುತಾತ್ಮರಾದ ಬಗ್ಗೆ ರಾಹುಲ್​ ಗಾಂಧಿಗೆ ಎರಡು ಅನುಮಾನ; ಪ್ರಧಾನಿಗೆ ಪ್ರಶ್ನೆ

ಭಾರತೀಯ ಭೂಪ್ರದೇಶದ ಒಳಗೆ 250 ಮೀ.ಎತ್ತರದಲ್ಲಿ ಹಾರಾಡುತ್ತಿದ್ದ ಡ್ರೋನ್​ನತ್ತ ಬಿಎಸ್​ಎಫ್​ ಯೋಧರು 9 ಬಾರಿ ಫೈರಿಂಗ್​ ಮಾಡಿದ ಬಳಿಕ, ಅದು ಕೆಳಗೆ ಬಿದ್ದಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. (ಏಜೆನ್ಸೀಸ್​)