ಪದ್ಮ ಮಯೂರಾಸನ : ಪದ್ಮಾಸನ ಸಹಿತ ಹಾರುವ ನವಿಲಿನ ಭಂಗಿ. ಪದ್ಮಾಸನದಲ್ಲಿ ಕುಳಿತು ಮನಸ್ಸಿನಲ್ಲಿ ಇಡೀ ದೇಹವನ್ನು ಸಡಿಲಗೊಳಿಸಿ. ಕೈಗಳನ್ನು ಬಳಸಿ ದೇಹವನ್ನು ಮೇಲೆತ್ತಿ. ದೇಹದ ಭಾರ ಮೊಣಕಾಲ ಮೇಲಿರಲಿ. ಅಂಗೈಗಳನ್ನು ನೆಲದ ಮೇಲೆ ದೇಹದಿಂದ ಮುಂದಕ್ಕೆ ಊರಿ. ಬೆರಳುಗಳು ಮೊಣಕಾಲುಗಳತ್ತ ಹಿಂದಕ್ಕೆ ಮುಖಮಾಡಿರಲಿ. ಮೊಣಕೈಗಳನ್ನು ಬಾಗಿಸಿ ಒತ್ತಟ್ಟಿಗೆ ತನ್ನಿ. ಮುಂದಕ್ಕೆ ಬಾಗಿ. ಮೊಣಕೈಗಳನ್ನು ಕಿಬ್ಬೊಟ್ಟೆಯ ಅಕ್ಕಪಕ್ಕಕ್ಕೆ ಒತ್ತುವಂತೆ ಇಡಿ. ಇನ್ನಷ್ಟು ಮುಂದಕ್ಕೆಬಾಗಿ, ಎದೆಯು ಮೇಲುತೋಳಿನ ಮೇಲಿರುವಂತೆ ನೋಡಿಕೊಳ್ಳಿ. ದೇಹವನ್ನು ಸಮತೋಲನವಾಗುವಂತೆ ಹೊಂದಾಣಿಸಿ. ಈಗ ಇನ್ನೂ ಮುಂದಕ್ಕೆ ಬಾಗಿ ಮತ್ತು ಮಡಿಸಿದ ಪದ್ಮಾಸನ ಭಂಗಿಯ ಕಾಲನ್ನು ನಿಧಾನವಾಗಿ ಮೇಲೆತ್ತಿ. ಮುಂಡಭಾಗ, ತಲೆ ಮತ್ತುಕಾಲುಗಳು ಸಮತಲವಾಗಿ ನೇರ ರೇಖೆ ಯಲ್ಲಿರಲಿ. ಇದು ಸ್ಥಿರವಾದ ಅಂತಿಮ ಸ್ಥಿತಿ. ಹಿತವೆನಿಸುವಷ್ಟು ಸಮಯ ಈ ಸ್ಥಿತಿಯಲ್ಲಿರಿ. ನಿಧಾನವಾಗಿ ಮೊಣಕಾಲುಗಳನ್ನು ಕೆಳಗಿಳಿಸಿ. ಕಾಲು ಮೇಲುಗಡೆ ಇರುವಂತೆ ಬದಲಿಸಿ, ಇನ್ನೊಂದು ಸುತ್ತು ಅಭ್ಯಾಸಮಾಡಿ.
ಅಭ್ಯಾಸ ಸೂಚನೆ: ಪದ್ಮಾಸನದಲ್ಲಿ ಸುಲಭವಾಗಿ ಕೂಡುವಸಾಮರ್ಥ್ಯ ಇದ್ದವರು ಮೂಲ ಮಯೂರಾಸನಗಿಂತ ಪದ್ಮಮಯೂರಾಸನ ಮಾಡುವುದು ಸುಲಭ. ವಿಶೇಷವಾಗಿ ಮಹಿಳೆಯರಿಗೆ ಈ ಮಾತು ಅನ್ವಯಿಸುತ್ತದೆ. =ಸ್ತ್ರೀಯರ ದೇಹರಚನೆ ಉದರ ಮತ್ತು ಎದೆ ಭಾಗದಲ್ಲಿ ಪುರುಷರಿಗಿಂತ ಬೇರೆಯಾದ್ದರಿಂದ ಸ್ತ್ರೀಯರಿಗೆ ಈ ಆಸನವು ಕಠಿಣವೆನಿಸಬಹುದು. ಹಾಗೂ ಅಂತಿಮ ಸ್ಥಿತಿಯಲ್ಲಿ ಮುಂದಕ್ಕೆ ಜಾರಿ ಬಿದ್ದು ಮೂಗಿಗೆ ಪೆಟ್ಟಾಗುವ ಸಾಧ್ಯತೆ ಇರುವುದರಿಂದ ಸ್ತ್ರೀಯರು ಇದನ್ನು ಮಾಡಲು ಪ್ರೋತ್ಸಾಹಿಸುವುದಿಲ್ಲ.
ಉಸಿರಾಟ: ದೇಹವನ್ನು ನೆಲದಿಂದ ಮೇಲೆತ್ತರಿಸುವಾಗ ಉಸಿರನ್ನು ಹೊರಗೆ ಬಿಡಿ. ದೇಹವನ್ನು ಪುನಃ ನೆಲಕ್ಕಿಳಿಸು ವಾಗ ಉಸಿರನ್ನು ಒಳಗೆ ತೆಗೆದುಕೊಳ್ಳಿ.ಆರಂಭದ ಅಭ್ಯಾಸಿಗಳು, ಅಂತಿಮ ಸ್ಥಿತಿಯಲ್ಲಿ ಉಸಿರನ್ನು ಹೊರಗೇ ಹಿಡಿದಿಡಬಹುದು. ಪಳಗಿದ ಅಭ್ಯಾಸಿಗಳು ಅಂತಿಮ ಸ್ಥಿತಿಯಲ್ಲಿರುವಾಗ ನಿಧಾನವಾಗಿ, ಆಳವಾಗಿ ಉಸಿರಾಡಬಹುದು.
ಗಮನ: ದೈಹಿಕ-ಸಮತೋಲನವನ್ನು ಕಾಪಾಡಿಕೊಳ್ಳುವ ಕಡೆಗೆ, ಆಧ್ಯಾತ್ಮಿಕ ಮಣಿಪುರ ಚಕ್ರದ ಕಡೆಗಿರಲಿ.
ವಿಧಿನಿಷೇಧಗಳು: ಅಧಿಕ ರಕ್ತದೊತ್ತಡ ಅಥವಾ ಹೃದಯಸಂಬಂಧಿ ತೊಂದರೆ ಇರುವ ವರು, ಹರ್ನಿಯಾ. ಕರುಳು ಹುಣ್ಣುಗಳಿಂದ ಬಳಲುತ್ತಿರುವವರು, ಅಸ್ವಸ್ಥತೆ ಅಥವಾ ದೈಹಿಕ ದೌರ್ಬಲ್ಯ ಇರುವವರು ಮಾಡಬಾರದು. ಗರ್ಭಿಣಿಯರಂತೂ ಖಂಡಿತ ಮಾಡಬಾರದು.
ಪ್ರಯೋಜನಗಳು: ಪದ್ಮ ಮಯೂರಾಸನವು ದೇಹದ ಚಯಾಪಚಯಕ್ರಿಯೆಗಳನ್ನು ಪ್ರಚೋದಿಸುವ ಮೂಲಕ ವಿವಿಧ ಅಂಗಗಳಿಂದ ಹೆಚ್ಚಿನ ಸ್ರಾವಗಳಾಗುವಂತೆ ಮಾಡುತ್ತದೆ. ರಕ್ತದಿಂದ ಮಾಲಿನ್ಯಗಳನ್ನು ಹೊರದೂಡುವಂತೆ ಮಾಡಿ ಚರ್ಮದ ಹುಣ್ಣುಗಳು ಆಗದಂತೆ ತಡೆಯುತ್ತದೆ. ಜೀರ್ಣಾಂಗವ್ಯೂಹದ ಎಲ್ಲ ಅವಯವಗಳಿಗೂ ಮಸಾಜು ದೊರೆಯುವ ಮೂಲಕ ಕರುಳಿನೊಳಗಿನ ಚಲನೆ- ಆರೋಗ್ಯ ಸುಗಮವಾಗುತ್ತದೆ. ಉದರದಲ್ಲಿನ ವಾಯು, ಮಲಬದ್ಧತೆ, ಮಧುಮೇಹ, ಪಿತ್ತ ಜನಕಾಂಗ ಮತ್ತು ಮೂತ್ರಪಿಂಡಗಳ ಚಟುವಟಿಕೆಯನ್ನು ಸುಧಾರಿಸುವಚಿಕಿತ್ಸೆಗಳಿಗೆ ಉಪಯುಕ್ತವಾಗಿದೆ.