ನ್ಯೂಸ್

ರಾವತ್​ಗೆ ಮರಣೋತ್ತರ ಪದ್ಮವಿಭೂಷಣ: 4 ಪದ್ಮವಿಭೂಷಣ, 17 ಪದ್ಮಭೂಷಣ, 107 ಪದ್ಮಶ್ರೀ ಪ್ರಶಸ್ತಿ ಪಟ್ಟಿ ಪ್ರಕಟ

Webdesk - Ravikanth

ನವದೆಹಲಿ: ಕೇಂದ್ರ ಸರ್ಕಾರವು ಈ ವರ್ಷದ ಪದ್ಮ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು, ಪಟ್ಟಿಯನ್ನು ಪ್ರಕಟಿಸಿದೆ. ಈ ಸಲ 4 ಪದ್ಮವಿಭೂಷಣ, 17 ಪದ್ಮಭೂಷಣ, 107 ಪದ್ಮಶ್ರೀ ಸೇರಿ ಒಟ್ಟು 128 ಪದ್ಮಪ್ರಶಸ್ತಿಗಳನ್ನು ನೀಡಲಾಗುತ್ತದೆ.

128 ಪ್ರಶಸ್ತಿಗಳಲ್ಲಿ 34 ಮಹಿಳೆಯರಿಗೆ ಪ್ರದಾನವಾಗಲಿದ್ದರೆ, ಮರಣೋತ್ತರವಾಗಿ 13 ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅದರಲ್ಲೂ ನಾಲ್ಕು ಪದ್ಮವಿಭೂಷಣಗಳ ಪೈಕಿ ಮೂರು ಮರಣೋತ್ತರ. ಇತ್ತೀಚೆಗೆ ಹುತಾತ್ಮರಾದ ಜನರಲ್ ಬಿಪಿನ್ ರಾವತ್, ಉತ್ತರಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್, ರಾಧೇಶ್ಯಾಮ್ ಖೇಮ್ಕಾ ಅವರ ಹೆಸರು ಮರಣೋತ್ತರ ಪದ್ಮವಿಭೂಷಣಕ್ಕೆ ಆಯ್ಕೆ ಆಗಿದೆ. ಮಹಾರಾಷ್ಟ್ರದ ಸಾಹಿತಿ ಪ್ರಭಾ ಆತ್ರೆ ಕೂಡ ಪದ್ಮವಿಭೂಷಣಕ್ಕೆ ಪಾತ್ರರಾಗಲಿದ್ದಾರೆ.

ಮತ್ತೊಂದೆಡೆ ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೊಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಸೇರಿ 17 ಮಂದಿ ಪದ್ಮಭೂಷಣಕ್ಕೆ ಆಯ್ಕೆ ಆಗಿದ್ದಾರೆ. ಇನ್ನು 107 ಪದ್ಮಶ್ರೀಗಳ ಪೈಕಿ ಕರ್ನಾಟಕಕ್ಕೆ ಐದು ಪುರಸ್ಕಾರ ಸಂದಿದೆ. ಕಲಾವಿದ ಎಚ್.ಆರ್.ಕೇಶವಮೂರ್ತಿ, ಅಬ್ದುಲ್ ಖಾದರ್ ನಡಕಟ್ಟಿನ್, ಅಮೈ ಮಹಾಲಿಂಗ ನಾಯ್ಕ, ದಲಿತ ಕವಿ ಸಿದ್ದಲಿಂಗಯ್ಯ (ಮರಣೋತ್ತರ), ವಿಜ್ಞಾನ-ತಂತ್ರಜ್ಞಾನ ವಿಭಾಗದಲ್ಲಿ ಸುಬ್ಬಣ್ಣ ಅಯ್ಯಪ್ಪನ್ ಪ್ರಶಸ್ತಿಗೆ ಪಾತ್ರರಾಗಲಿದ್ದಾರೆ.

ಪೂರ್ತಿ ಪಟ್ಟಿ ಇಲ್ಲಿದೆ...