ನ್ಯೂಸ್

ಗರ್ಭಪಾತದ ನಂತರ ಓಝೆಂಪಿಕ್ ತೆಗೆದುಕೊಳ್ಳುತ್ತಿದ್ದೆ: ಸೆಲೆಬ್ರಿಟಿ ಕ್ರಿಸ್ಸಿ ಟೀಜೆನ್! | Chrissy Teigen

Chrissy Teigen: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ತಾವು ಸುಂದರವಾಗಿ ಕಾಣಬೇಕೆಂಬ ಉದ್ದೇಶಕ್ಕಾಗಿ ಹಲವಾರು ರೀತಿಯ ಔಷಧಿಗಳ ಮೊರೆ ಹೋಗುತ್ತಿದ್ದಾರೆ. ಈಗಂತೂ ತೂಕ ಇಳಿಸುವ ಔಷಧಿಗಳು ಸಾಕಷ್ಟು ಜನಪ್ರಿಯವಾಗುತ್ತಿದ್ದು, ಇವುಗಳನ್ನು ಅನೇಕರು ಸೇವಿಸಲು ಇಷ್ಟಪಡುತ್ತಿದ್ದಾರೆ. ಅದರಲ್ಲೂ ಹೆಚ್ಚಾಗಿ, ಅನೇಕ ಸೆಲೆಬ್ರಿಟಿಗಳು ಅದನ್ನು ಸೇವಿಸುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ರೀತಿಯಲ್ಲಿ ತೂಕ ಇಳಿಸಿಕೊಳ್ಳುವ ಔಷಧಿಯಾದ ಓಜೆಂಪಿಕ್​ನ್ನು ಸೇವಿಸಿರುವುದಾಗಿ ಸೆಲೆಬ್ರೆಟಿ ಕ್ರಿಸ್ಸಿ ಟೀಜೆನ್ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಲೇಖಕ ಜೋಹಾನ್ ಹರಿ ಆಯೋಜಿಸಿದ್ದ ಸೆಲ್ಫ್-ಕಾನ್ಸಿಯಸ್ ಪಾಡ್‌ಕ್ಯಾಸ್ಟ್‌ನಲ್ಲಿ ಕ್ರಿಸ್ಸಿ ಟೀಜೆನ್ ಭಾಗವಹಿಸಿದ್ದು, ಈ ಸಂಭಾಷಣೆಯ ಸಮಯದಲ್ಲಿ ಇವರು ಓಝೆಂಪಿಕ್ ತೆಗೆದುಕೊಳ್ಳುವುದನ್ನು ಬಹಿರಂಗಪಡಿಸಿದ್ದಾರೆ. ಈ ಹೊಸ ತೂಕ ಇಳಿಸುವ ಔಷಧಿಗಳನ್ನು ಸೇವಿಸುವುದು, ನಾವು ಬಾಟಲಿಯಲ್ಲಿ ಜೀನಿಯನ್ನು ಬಿಡುಗಡೆ ಮಾಡಿದಂತೆ ಭಾಸವಾಗುತ್ತದೆ ಎಂದರು.

2020 ರಲ್ಲಿ ಗರ್ಭಪಾತದ ನಂತರ ಕಠಿಣ ಅವಧಿಯನ್ನು ನೆನಪಿಸಿಕೊಳ್ಳುತ್ತಾ, ಇವರು ನನಗೆ ಎರಡು ಮಕ್ಕಳಿದ್ದವು. 20 ವಾರಗಳಲ್ಲಿ ಮಗುವನ್ನು ಕಳೆದುಕೊಂಡಿದ್ದೇನೆ. ಆದಾದ ನಂತರ ನನ್ನ ದೇಹವು ಸಂಪೂರ್ಣವಾಗಿ ಸಿಲುಕಿಕೊಂಡಿತು. ನಾನು ಗರ್ಭೀಣಿಯಾಗಿದ್ದಾಗ ನನ್ನನು ನಾನು ತೊಡಗಿಸಿಕೊಳ್ಳಲು ಪ್ರಾರಂಭಿಸಿದೆ. ಈ ವೇಳೆ ನಾನು ಸುಮಾರು 20 ಕೆಜಿ ಹೆಚ್ಚಿಸಿಕೊಂಡಿದ್ದೆ ಎಂದರು.

ಇವರು ಓಝೆಂಪಿಕ್ ಔಷಧಿಯನ್ನು ಯಾವಾಗ ಸೇವಿಸಲು ಪ್ರಾರಂಭಿಸಿದೆ ಎಂದು ನಿರ್ದಿಷ್ಟವಾಗಿ ತಿಳಿದಿಲ್ಲ. ಆದರೆ, ಇದನ್ನು ಸೇವಿಸಿ ಒಂದು ವರ್ಷ ಕಳೆದರೂ ಯಾವುದೇ ಗೋಚರ ಫಲಿತಾಂಶಗಳು ಕಂಡುಬಂದಿಲ್ಲ ಎಂದು ತಿಳಿಸಿದರು.

"ನನಗೆ ನೆನಪಿದೆ. ನಾನು ಇದನ್ನು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಪ್ರಯತ್ನಿಸಿದ್ದೇನೆ. ಮೂರು, ನಾಲ್ಕು ತಿಂಗಳುಗಳಿಂದ ಯಾವುದೇ ಫಲಿತಾಂಶ ಬಂದಿಲ್ಲ. ಒಂದು ಪೌಂಡ್​ ಅಷ್ಟು ತೂಕ ಕಡಿಮೆಯಾಗಿಲ್ಲ. ಆದರೆ, ನಾನು ಮಗುವನ್ನು ಕಳೆದುಕೊಂಡಾಗ ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಯಿತು ಎಂದರು.

ಕ್ರಿಸ್ಸಿ ಟೀಜೆನ್ ಅವರ ಓಜೆಂಪಿಕ್ ಪ್ರಯಾಣವು ತನ್ನದೇ ಆದ ಸವಾಲುಗಳನ್ನು ಹೊಂದಿತ್ತು. "ನಾನು ಎಚ್ಚರಗೊಂಡಿದ್ದೇನೆ ಮತ್ತು ನನಗೆ ಹಸಿವಿಲ್ಲ ಎಂದು ನಾನು ಅರಿತುಕೊಂಡೆ. ಈ ಔಷಧಿಯನ್ನು ಸೇವಿಸುವುದು "ಕೆಲವೊಮ್ಮೆ ಬಲವಂತವಾಗಿ ಆಹಾರ ನೀಡಿದಂತೆ ಎಂದು ಭಾಸವಾಗುತ್ತದೆ ಎಂದು ಹೇಳಿದರು. ಕ್ರಿಸ್ಸಿ ಸರಿಯಾದ ಡೋಸೇಜ್ ತೆಗೆದುಕೊಳ್ಳಲು ಪ್ರಾರಂಭಿಸಿದ ನಂತರ ಅವಳು ತನ್ನ ಹಸಿವನ್ನು ಮರಳಿ ಪಡೆದಳು.

2013 ರಲ್ಲಿ ಜಾನ್ ಲೆಜೆಂಡ್ ಅವರನ್ನು ವಿವಾಹವಾದ ಕ್ರಿಸ್ಸಿ ಟೀಜೆನ್ ಅವರಿಗೆ ನಾಲ್ಕು ಮಕ್ಕಳಿದ್ದಾರೆ - ಲೂನಾ ಸಿಮೋನ್, ಮೈಲ್ಸ್ ಥಿಯೋಡರ್, ಎಸ್ಟಿ ಮ್ಯಾಕ್ಸಿನ್ ಮತ್ತು ರೆನ್ ಅಲೆಕ್ಸಾಂಡರ್. ಕ್ರಿಸ್ಸಿಯ ಗರ್ಭಧಾರಣೆಯ ತೊಡಕುಗಳಿಂದಾಗಿ ದಂಪತಿಗಳು ತಮ್ಮ ಹುಟ್ಟಲಿರುವ ಮಗ ಜ್ಯಾಕ್ ಅನ್ನು ಕಳೆದುಕೊಂಡರು. (ಏಜೆನ್ಸೀಸ್​)