ನ್ಯೂಸ್

ಗಾರ್ಮೆಂಟ್ಸ್​ನಲ್ಲೇ ನೇಣಿಗೆ ಶರಣಾದ ಓನರ್; ಅನುಮಾನ ಮೂಡಿಸಿದೆ ಈಕೆಯ ಸಾವಿನ ಪ್ರಕರಣ!

ಹುಬ್ಬಳ್ಳಿ: ಗಾರ್ಮೆಂಟ್ಸ್​ನಲ್ಲೇ ಅದರ ಮಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಡೆದಿದ್ದು, ಈಕೆಯ ಸಾವಿನ ಕುರಿತಂತೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಧಾರವಾಡ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

ಹುಬ್ಬಳ್ಳಿಯ ನವನಗರದ ಐಶ್ವರ್ಯ ಗಾರ್ಮೆಂಟ್ಸ್ ಮಾಲಕಿ ಪ್ರಿಯಾ ಬೊಂಗಲೆ ಆತ್ಮಹತ್ಯೆ ಮಾಡಿಕೊಂಡ ‌ಮಹಿಳೆ. ಈಕೆ ತಾವು ನಡೆಸುತ್ತಿರುವ ಗಾರ್ಮೆಂಟ್ಸ್​ನಲ್ಲೇ ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಗಾರ್ಮೆಂಟ್ಸ್ ನಡೆಸುವ ಮೂಲಕ ನೂರಾರು ಕುಟುಂಬಕ್ಕೆ ಕೆಲಸ ನೀಡಿದ್ದ ಮಹಿಳೆ ಹೀಗೆ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಅನೇಕ ಅನುಮಾನಗಳು ವ್ಯಕ್ತವಾಗಿದೆ. ಆತ್ಮಹತ್ಯೆಗೆ ಕಾರಣ ಏನು ಎಂಬ ಬಗ್ಗೆ ಇನ್ನೂ ನಿಖರ ಮಾಹಿತಿ ಹೊರಬಿದ್ದಿಲ್ಲ. ಸ್ಥಳಕ್ಕೆ ನವನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.