ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ಇದೊಂದು ಅಪರೂಪದ ವಿಡಿಯೋ ಹರಿದಾಡುತ್ತಿದೆ. ವಿಷಸರ್ಪವನ್ನು ಗೂಬೆಯೊಂದು ನೂಡಲ್ಸ್‌ನಂತೆ ಎಳೆದು ನುಂಗುವ ವಿಡಿಯೋ ಅದು. ನೆಟ್ಟಿಗರನ್ನು ಈ ವೀಡಿಯೋ ದಂಗು ಬಡಿಸಿದೆ.
ಗೂಬೆ ಎಂದರೆ ಹಗಲಲ್ಲಿ ಕಣ್ಣು ಕಾಣದ ನರುಪದ್ರವಿ ಜೀವಿ ಎನ್ನಲಾಗುತ್ತದೆ. ಆದರೆ ಇದು ಪರಭಕ್ಷಕ ಎಂಬುದು ಬಹುತೇಕ ಜನರಿಗೆ ತಿಳಿದಿಲ್ಲ. ಆದರೆ ಗೂಬೆ ಜೀವಂತ ಹಾವನ್ನು ನುಂಗುವ ಈ ವಿಡಿಯೋ ನೋಡಿದರೆ ಮೈ ಝುಮ್ಮೆನ್ನಿಸುತ್ತದೆ.
ಇನ್ಸ್ಟಾಗ್ರಾಮ್ನಲ್ಲಿ @reidasserpentesoficial ಎಂಬ ಬಳಕೆದಾರರು ಹಂಚಿಕೊಂಡ ಈ ಭಯಂಕರ ವೀಡಿಯೊದಲ್ಲಿ, ಗೂಬೆಯು ಒಂದೇ ಏಟಿಗೆ ಹಾವನ್ನು ನುಂಗುವ ಮೂಲಕ ಗೂಬೆ ನೋಡುಗರನ್ನು ಕಣ್ಣು ಹುಬ್ಬೇರಿಸುವಂತೆ ಮಾಡಿದೆ.
ವೈರಲ್ ವೀಡಿಯೋದಲ್ಲಿ ಗೂಬೆ ಮೊದಲು ಹಾವಿನ ಬಾಲ ಹಿಡಿದು ನುಂಗುತ್ತದೆ. ಆದರೆ ಹಾವು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆಯಾದರೂ ಅದರ ಮೇಲೆ ಪ್ರಾಬಲ್ಯ ಸಾಧಿಸುವ ಗೂಬೆ ಸಂಪೂರ್ಣ ನುಂಗಿಕೊಳ್ಳುತ್ತದೆ.
ಗೂಬೆಯು ಹಾವನ್ನು ಹಂತಹಂತವಾಗಿ ಆವರಿಸಿ ತಿನ್ನುವಾಗ ಅದರ ಮುಖ ಹೆಚ್ಚು ಭಯಂಕರವಾಗಿತ್ತು. ಒಬ್ಬ ವೀಕ್ಷಕ 'ಅಬ್ಬಬ್ಬಾ..ತುಂಬಾ ಭಯಾನಕವಾಗಿ ಕಾಣುತ್ತಿದೆ' ಎಂದು ಕಾಮೆಂಟ್ ಮಾಡಿದ್ದರೆ. ಮತ್ತೊಬ್ಬರು, 'ನಾವು ಇದನ್ನು ಕ್ಯಾಮೆರಾದಲ್ಲಿ ಅಪರೂಪದ ಕ್ರಿಯೆಯಾಗಿ ನೋಡುತ್ತಿರಬಹುದು, ಆದರೆ ಇದು ಕೇವಲ ಪ್ರಕೃತಿಯ ವಿನ್ಯಾಸವಾಗಿದೆ, ಇದನ್ನು ಗೌರವಿಸಬೇಕು' ಎಂದಿದ್ದಾರೆ. ಇನ್ನೊಬ್ಬರು, ತಾವು ಇಂಟರ್ನೆಟ್‌ನಲ್ಲಿ ನೋಡಿದ ಅತಿ ಮೈ ಝುಮ್ಮೆನ್ನೆಸುವ ವಿಡಿಯೋ ಇದಾಗಿದೆ ಎಂದಿದ್ದಾರೆ.
ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಬೆಕ್ಕಸಬೆರಗಾಗಿದ್ದಾರೆ. ಈ ದೃಶ್ಯಾವಳಿಯು ಗೂಬೆಯು ಸಂಪೂರ್ಣ ಹಾವನ್ನು ಒಂದೇ ಗುಟುಕಿನಲ್ಲಿ ಸಲೀಸಾಗಿ ಕಬಳಿಸುವುದನ್ನು ಸೆರೆ ಹಿಡಿದಿದೆ.