ನ್ಯೂಸ್

ಯೂಕ್ರೇನ್​ನಲ್ಲಿ ರಷ್ಯಾದ ಭಾರಿ ದಾಳಿ; ಲಕ್ಷಗಟ್ಟಲೆ ಮನೆಗಳು ಕತ್ತಲೆಯಲ್ಲಿ...

ನವದೆಹಲಿ: ಯೂಕ್ರೇನ್​-ರಷ್ಯಾ ಸಂಘರ್ಷ ತೀವ್ರಗೊಂಡಿದ್ದು, ರಷ್ಯಾದ ದಾಳಿಯಿಂದಾಗಿ ಯೂಕ್ರೇನ್​ನಲ್ಲಿನ ಲಕ್ಷಾಂತರ ಮನೆಗಳಲ್ಲಿ ಕತ್ತಲು ಆವರಿಸಿದ್ದು, ಜನರು ದೈನಂದಿನ ಚಟುವಟಿಕೆಗಳಿಗೂ ಪರದಾಡುವಂತಾಗಿದೆ.

ಯೂಕ್ರೇನ್​ನಲ್ಲಿ ವಿದ್ಯುತ್​ ಆಗರಗಳ ಮೇಲೇ ರಷ್ಯಾ ದಾಳಿ ನಡೆಸಿರುವ ಪರಿಣಾಮವಾಗಿ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ ಎಂಬುದಾಗಿ ಯೂಕ್ರೇನ್​ನ ಅಧಿಕೃತ ಮೂಲಗಳು ಪ್ರಕಟಿಸಿವೆ.

ಸದ್ಯದ ಮಾಹಿತಿ ಪ್ರಕಾರ ಮೆಲ್ನಿಟ್ಸ್ಕಿ ಪ್ರದೇಶವೊಂದರಲ್ಲೇ 6.72 ಲಕ್ಷ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮೈಕೊಲೈವ್ ಪ್ರದೇಶದಲ್ಲಿ 1,88,400, ವೊಲಿನ್​ ಪ್ರದೇಶದಲ್ಲಿ 1.02 ಲಕ್ಷ, ಚೆರ್ಕಾಸಿ ಪ್ರದೇಶದಲ್ಲಿ 2.42 ಲಕ್ಷ, ರಿವ್ನ್​ ಪ್ರದೇಶದಲ್ಲಿ 1.74 ಲಕ್ಷ ಹಾಗೂ ಕಿರೊವೊಗ್ರಾಡ್ ಪ್ರದೇಶದಲ್ಲಿನ 61,913 ಮತ್ತು ಒಡೆಸಾ ಪ್ರದೇಶದಲ್ಲಿನ 10,500 ವಿದ್ಯುತ್ ಸಂಪರ್ಕಗಳು ಕಡಿತಗೊಂಡಿವೆ ಎಂದು ಮೂಲಗಳು ತಿಳಿಸಿವೆ.