ನ್ಯೂಸ್

ದೇಶದೊಳಗೆ ನುಸುಳಲು ಗಡಿಯಲ್ಲಿ ಕಾಯುತ್ತಿದ್ದಾರೆ 300 ಉಗ್ರರು; ಹಿಮ್ಮೆಟ್ಟಿಸಲು ಸೇನೆ ಸಜ್ಜು

ನವದೆಹಲಿ: ಸುಮಾರು 250-300 ಹೊಸ ಜಿಹಾದಿ ಉಗ್ರರು ಭಾರತಕ್ಕೆ ನುಸುಳಲು ಗಡಿಯಲ್ಲೇ ಕಾಯುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ಜಿಒಸಿ 15 ಕಾರ್ಪ್ಸ್​​​ನ ಲೆಫ್ಟಿನಂಟ್​ ಜನರಲ್​ ಬಿ.ಎಸ್​.ರಾಜು ಅವರು ಈ ವಿಚಾರವನ್ನು ತಿಳಿಸಿದ್ದಾರೆ. 250-300 ಉಗ್ರರು ಗಡಿಯಲ್ಲಿ ಇದ್ದು, ಅವರೆಲ್ಲ ಭಾರತಕ್ಕೆ ನುಸುಳಲು ಕಾಯುತ್ತಿದ್ದಾರೆ. ಆದರೆ ನಮ್ಮ ಯೋಧರು ಅದಕ್ಕೆ ಅವಕಾಶ ಕೊಡುವುದಿಲ್ಲ. ಉಗ್ರರಿಗೆ ಗಡಿ ದಾಟಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಉಗ್ರ ಸಂಘಟನೆಗೆ ಸೇರಿದ ಯುವಕರು ಅದನ್ನು ಸಂಪೂರ್ಣವಾಗಿ ಬಿಟ್ಟು, ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರೆ ಅವರನ್ನು ವಾಪಸ್​ ಕರೆಸಿಕೊಳ್ಳಲು ಸಿದ್ಧರಿದ್ದೇವೆ. ಉಳಿದವರ ಬಗ್ಗೆ ಯಾವುದೇ ಕನಿಕರವೂ ಇಲ್ಲ ಎಂದಿದ್ದಾರೆ. (ಏಜೆನ್ಸೀಸ್)