ನ್ಯೂಸ್

ಮಳೆ, ಬಾಂಬ್ ಬೆದರಿಕೆ ನಡುವೆಯೂ 'ಮುಂಬೈ'ನಲ್ಲಿ 2,100 ಕ್ಕೂ ಹೆಚ್ಚು 'ಗಣೇಶ' ಮೂರ್ತಿಗಳ ವಿಸರ್ಜನೆ| mumbai

ಇಂದು ಮಧ್ಯಾಹ್ನ 3 ಗಂಟೆಯವರೆಗೆ ಮುಂಬೈನ ವಿವಿಧ ಜಲಮೂಲಗಳಲ್ಲಿ 2,100 ಕ್ಕೂ ಹೆಚ್ಚು ಗಣಪತಿ ವಿಗ್ರಹಗಳನ್ನು ವಿಸರ್ಜಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂಬೈ: ಮಳೆ ಹಾಗೂ ಬಾಂಬ್ ಬೆದರಿಕೆಯ ನಡುವೆಯೂ ಮುಂಬೈನಲ್ಲಿ 10 ದಿನಗಳ ಗಣಪತಿ ಉತ್ಸವ ಇಂದು (ಸೆ.06) ಅದ್ಧೂರಿಯಾಗಿ ನಡೆಯಿತು. ಗಣೇಶ ವಿಸರ್ಜನೆಗಾಗಿ ಸಾವಿರಾರು ಜನರು ಸೇರಿ ಸುಮಾರು 2100ಕ್ಕೂ ಹೆಚ್ಚು ಮೂರ್ತಿಗಳ ವಿಸರ್ಜನೆ ಮಾಡಿದರು.

ಗಣಪತಿ ಬಪ್ಪಾ ಮೋರ್ಯಾ, ಮುಂದಿನ ವರ್ಷ ದೇವರು ಬೇಗನೆ ಹಿಂದಿರುಗಲಿ ಎಂಬ ಮಂತ್ರಗಳ ನಡುವೆ ನಗರದ ಕಡಲತೀರಗಳು ಮತ್ತು ಇತರ ಜಲಮೂಲಗಳಿಗೆ ವಿಗ್ರಹಗಳು ಸಾಗುತ್ತಿದ್ದಂತೆ, ಅದ್ಧೂರಿ ಗಣೇಶೋತ್ಸವವನ್ನು ವೀಕ್ಷಿಸಲು ರಸ್ತೆಗಳು, ಕಟ್ಟಡಗಳ ಟೆರೇಸ್‌ಗಳು, ಬಾಲ್ಕನಿಗಳು, ಮರಗಳು ಮತ್ತು ಕಂಬಗಳ ಮೇಲೆ ಸಾಕಷ್ಟು ಜನರು ಕುಳಿತಿರುವುದು ಕಂಡುಬಂದಿತು.

(ಏಜೆನ್ಸೀಸ್)

ಬೆಳಗ್ಗೆಯಿಂದ ನಗರದ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾದರೂ, ಮುಂಜಾನೆಯ ವೇಳೆ ರಸ್ತೆಗಳಲ್ಲಿ 'ರಂಗೋಲಿ'ಗಳನ್ನು ಬಿಡಿಸಲಾಗಿತ್ತು. ಲಾಲ್‌ಬಾಗ್ ಮತ್ತು ಇತರ ಪ್ರಮುಖ ಮೆರವಣಿಗೆ ಮಾರ್ಗಗಳ ಬೀದಿಗಳಲ್ಲಿ ಸಾವಿರಾರು ಜನರು ತಮ್ಮ ನೆಚ್ಚಿನ ಗಣಪನಿಗೆ ವಿದಾಯ ಹೇಳಲುಪ್ರಾರ್ಥನೆಗಳನ್ನು ಸಲ್ಲಿಸುತ್ತಾ ಸಂಗೀತ, ನೃತ್ಯವನ್ನು ಹಾಡುವ ಮೂಲಕ ಸಂಭ್ರಮಿಸಿದರು.