ವೃಂದಾವನದ ಪ್ರಸಿದ್ಧ ಸಂತ ಪ್ರೇಮಾನಂದ ಜಿ ಮಹಾರಾಜ್ ಅವರು ಮಹಿಳೆಯರ ಪಾವಿತ್ರ್ಯತೆ ಕುರಿತು ನಕಾರಾತ್ಮಕವಾಗಿ ಮಾತನಾಡಿದ್ದಾರೆ ಎನ್ನಲಾದ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಪಡ್ರೆ ಧೂಮಾವತಿ ಕ್ಷೇತ್ರದಲ್ಲಿ ಅವ್ಯವಹಾರ, ಕಳ್ಳತನ ನಡೆದಿಲ್ಲ : ದೈವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳ ಸ್ಪಷ್ಟನೆ
ಇತ್ತೀಚಿನ ದಿನಗಳಲ್ಲಿ 100 ಮಹಿಳೆಯರಲ್ಲಿ 2-4 ಜನರು ಮಾತ್ರ ಪರಿಶುದ್ಧರಾಗಿರುತ್ತಾರೆ. ಉಳಿದ ಎಲ್ಲರು ಗೆಳಯ-ಗೆಳತಿ ಸಂಬಂಧಗಳನ್ನು ಹೊಂದಿದ್ದಾರೆ ಎಂಬ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೀಗ ಈ ಹೇಳಿಕೆ ಹೊಸ ವಿವಾದ ಹುಟ್ಟು ಹಾಕಿದೆ. ಪ್ರೇಮಾನಂದ ಜಿ ಮಹಾರಾಜ್ ಹೇಳಿಕೆ ಇದೀಗ ಸಂತ ವಲಯದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ಒಬ್ಬ ಯುವಕ 4 ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದರೆ, ಅವನು ತನ್ನ ಹೆಂಡತಿಯೊಂದಿಗೆ ತೃಪ್ತನಾಗಿರಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವನಿಗೆ ಇದು ಅಭ್ಯಾಸವಿರುತ್ತದೆ. ಅದೇ ರೀತಿ, 4 ಪುರುಷರೊಂದಿಗೆ ಸಂಬಂಧ ಹೊಂದಿರುವ ಹುಡುಗಿಗೆ ಗಂಡನನ್ನು ಸ್ವೀಕರಿಸುವ ಧೈರ್ಯ ಇರುವುದಿಲ್ಲ. 100 ರಲ್ಲಿ ಕೇವಲ ಎರಡರಿಂದ ನಾಲ್ಕು ಹುಡುಗಿಯರು ಮಾತ್ರ ಶುದ್ಧ ಜೀವನವನ್ನು ನಡೆಸುವ ಮತ್ತು ಒಬ್ಬ ಪುರುಷನಿಗೆ ಸಮರ್ಪಿತರಾಗಿರುತ್ತಾರೆ ಎಂದು ಪ್ರೇಮಾನಂದ ಮಹಾರಾಜ್ ಹೇಳಿದ್ದಾರೆ.
ಇದನ್ನೂ ಓದಿ:ಪಡ್ರೆ ಧೂಮಾವತಿ ಕ್ಷೇತ್ರದಲ್ಲಿ ಅವ್ಯವಹಾರ, ಕಳ್ಳತನ ನಡೆದಿಲ್ಲ : ದೈವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳ ಸ್ಪಷ್ಟನೆ
ಸಂತ ಪ್ರೇಮಾನಂದ ಜಿ ಮಹಾರಾಜ್ಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಸೇರಿದಂತೆ ಅನೇಕ ತಾರೆಯರು ಅನುಯಾಯಿಗಳಾಗಿದ್ದಾರೆ. (ಏಜೆನ್ಸೀಸ್)