Rahul Sipligunj: ತೆಲುಗು ಬಿಗ್ಬಾಸ್ 3ನೇ ಸೀಸನ್ ವಿಜೇತ ಮತ್ತು ಆರ್ಆರ್ಆರ್ ಸಿನಿಮಾದ ಆಸ್ಕರ್ ಪ್ರಶಸ್ತಿ ಪಡೆದ ನಾಟು ನಾಟು ಹಾಡಿನ ಗಾಯಕ ರಾಹುಲ್ ಸಿಪ್ಲಿಗಂಜ್ ಆಗಸ್ಟ್ 17ರಂದು ಹೈದರಾಬಾದ್ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ರಾಹುಲ್ ಸಿಪ್ಲಿಗುಂಜ್ ಅವರು ಹರಿನ್ಯಾ ರೆಡ್ಡಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಾಹುಲ್ ತಮ್ಮ ನಿಶ್ಚಿತಾರ್ಥದ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ, "ಶಾಶ್ವತವಾಗಿ ನಮ್ಮ ಹೊಸ ಜೀವನ ಆರಂಭ" ಎಂದು ಬರೆದಿದ್ದಾರೆ. ರಾಹುಲ್ ಹಂಚಿಕೊಳ್ಳುವ ಕೆಲವು ಗಂಟೆಗಳ ಮೊದಲೇ ಆನ್‌ಲೈನ್‌ನಲ್ಲಿ ಪೋಟೋಗಳು ಸೋರಿಕೆಯಾಗಿದ್ದವು.
ಹರಿಣ್ಯ ರೆಡ್ಡಿ ಆಂಧ್ರ ಪ್ರದೇಶದ ಟಿಡಿಪಿ ಪಕ್ಷದ ಹಿರಿಯ ನಾಯಕ ಮತ್ತು ನೆಲ್ಲೂರು ನಗರಾಭಿವೃದ್ಧಿ ಪ್ರಾಧಿಕಾರ (ಎನ್‌ಯುಡಿಎ) ಅಧ್ಯಕ್ಷ ಕೋಟಂರೆಡ್ಡಿ ಶ್ರೀನಿವಾಸುಲು ರೆಡ್ಡಿ ಅವರ ಅಣ್ಣನ ಮಗಳು. ರಾಹುಲ್ ಮತ್ತು ಹರಿಣ್ಯ 2020ರಲ್ಲಿ ಭೇಟಿಯಾಗಿದ್ದಾರೆ. ಕಳೆದ 5 ವರ್ಷಗಳಿಂದ ಡೇಟಿಂಗ್ನಲ್ಲಿದ್ದರು ಎನ್ನಲಾಗಿದೆ. ಹರಿಣ್ಯ ಬಿಗ್ ಬಾಸ್ ನಡೆಸುವ ಎಂಡೆಮೋಲ್ ಶೈನ್ ಕಂಪನಿಗೆ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಪ್ರಸ್ತುತ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹರಿಣ್ಯ ಅವರ ಇಡೀ ಕುಟುಂಬ ನಂದಮೂರಿ ಬಾಲಕೃಷ್ಣ ಅವರಿಗೆ ಆಪ್ತರಾಗಿದ್ದಾರೆ.
ರಾಹುಲ್ ಸಿಪ್ಲಿಗಂಜ್
ರಾಹುಲ್ ಮೂಲತಃ ಹೈದರಾಬಾದ್‌ನ ಓಲ್ಡ್ ಸಿಟಿ ಹುಡುಗ. 2009 ರಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾನೆ. ನಾಗ ಚೈತನ್ಯ ಅಭಿನಯದ ಜೋಶ್ ಚಿತ್ರಕ್ಕಾಗಿ ಕಾಲೇಜ್ ಬುಲ್ಲೊಡಾ ಹಾಡಿದರು. ಜೊತೆಗೆ ಸಿಂಗರೇಣಿ ಉಂಡಿ, ಪ್ರೇಮ ಕಥಾ ಚಿತ್ರಂ, ಪೆದ್ದ ಪುಲಿ, ರಂಗ ರಂಗ ರಂಗಸ್ಥಳ ಮತ್ತು ಇನ್ನೂ ಹೆಚ್ಚಿನ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಆದಾಗ್ಯೂ, ಅವರ ವೃತ್ತಿಜೀವನವನ್ನು ಬದಲಿಸಿದ ಹಾಡು ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್‌ನ ನಾಟು ನಾಟು, ಇದನ್ನು ಅವರು ಕಾಲ ಭೈರವ ಅವರೊಂದಿಗೆ ಹಾಡಿದರು. ಈ ಹಾಡಿಗೆ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ನಂತರ, ತೆಲಂಗಾಣ ಸರ್ಕಾರ ಅವರಿಗೆ ₹ 1 ಕೋಟಿ ಬಹುಮಾನ ನೀಡಿ ಗೌರವಿಸಿದೆ. (ಏಜೆನ್ಸೀಸ್)