ನ್ಯೂಸ್

ಪಾಕ್​ ವಿರುದ್ಧ ಕಣಕ್ಕಿಳಿದ INS ವಿಕ್ರಾಂತ್! ಕರಾಚಿ ಬಂದರಿನ ಮೇಲೆ ಭಾರತೀಯ ನೌಕಾಪಡೆ ದಾಳಿ; ಕಂಟೇನರ್‌ಗಳು ಛಿದ್ರ | Operation Sindoor

Operation Sindoor: 'ಆಪರೇಷನ್ ಸಿಂದೂರ' ಹೆಸರಿನಲ್ಲಿ ಮುಂದುವರಿದ ದಾಳಿಯಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ಮತ್ತೆ ದಾಳಿ ನಡೆಸುವ ಮೂಲಕ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆ ಭಾರತದ ಮೇಲೆ ಪ್ರತೀಕಾರವಾಗಿ ಡ್ರೋನ್ ದಾಳಿ ನಡೆಸಿರುವ ಪಾಕ್​, ಶ್ರೀನಗರ ಸೇರಿದಂತೆ ಹಲವೆಡೆ ಗುಂಡಿನ ದಾಳಿ ಕೂಡ ನಡೆಸಿದೆ. ಎಲ್‌ಒಸಿಯಲ್ಲಿ ಮುಂಜಾನೆ ಮತ್ತೆ ಗುಂಡಿನ ಸದ್ದು ಕೇಳಿಬಂದಿದ್ದು, ಕಾಶ್ಮೀರದ ಹಲವು ನಗರಗಳಲ್ಲಿ ಲೈಟ್ಸ್ ಆಫ್​ ಮಾಡಲು ಸೂಚಿಸಲಾಯಿತು.

ಇನ್ನು ಪಾಕ್ ಕರಾಚಿ ಬಂದರಿನ ಮೇಲೆ ದಾಳಿ ನಡೆಸಿರುವ ಭಾರತೀಯ ನೌಕಾ ಪಡೆ, ಐಎನ್ಎಸ್ ವಿಕ್ರಾಂತ್ ಅನ್ನು ಅಖಾಡಕ್ಕಿಳಿಸಿದೆ. ಪಾಕಿಸ್ತಾನದ ದಾಳಿಯ ಬೆನ್ನಲ್ಲೇ ಭಾರತ ಪ್ರತೀಕಾರದ ದಾಳಿಗಳನ್ನು ಪ್ರಾರಂಭಿಸಿದೆ. ಪಾಕ್​ ನೆಲಕ್ಕೆ ನುಗ್ಗಿ, ಭೀಕರ ದಾಳಿಗಳನ್ನು ನಡೆಸುತ್ತಿದೆ. ಈ ಸಮಯದಲ್ಲಿ ನೌಕಾಪಡೆಯು ಐಎನ್ಎಸ್ ವಿಕ್ರಾಂತ್ ನಿಯೋಜಿಸಿದ್ದು, ಕರಾಚಿ ಬಂದರಿನ ಮೇಲೆ ಅಟ್ಯಾಕ್ ಮಾಡಿದೆ. ಕರಾಚಿ ಬಂದರಿನಲ್ಲಿ ಹತ್ತು ದೊಡ್ಡ ಸ್ಫೋಟಗಳು ಸಂಭವಿಸಿದ್ದು, ಭಾರತದ ಕ್ಷಿಪಣಿ ದಾಳಿಗೆ ಹಲವಾರು ಕಂಟೇನರ್‌ಗಳು ಛಿದ್ರಗೊಂಡಿವೆ.

ಕರಾಚಿ ಬಂದರು ಪಾಕಿಸ್ತಾನಕ್ಕೆ ಬಹಳ ಮುಖ್ಯ. ಕಾರಣ, ಬಹುತೇಕ ಪಾಕಿಸ್ತಾನಿ ವ್ಯವಹಾರಗಳು ಇಲ್ಲಿಂದಲೇ ಶುರುವಾಗುತ್ತದೆ. ಪ್ರತೀಕಾರದ ಉದ್ದೇಶದಲ್ಲಿ ಮುನ್ನುಗ್ಗಿದ ಭಾರತೀಯ ನೌಕಾಪಡೆ. ಪಾಕಿಸ್ತಾನವು ಕರಾಚಿಯಿಂದ ವಿವಿಧ ದೇಶಗಳಿಗೆ ವ್ಯಾಪಾರ ಮಾಡುವ ಪ್ರಮುಖ ಸ್ಥಳ ಕರಾಚಿ ಬಂದರನ್ನು ಗುರಿಯಾಗಿಸಿ, ದಾಳಿ ನಡೆಸಿದೆ. ಈ ದಾಳಿಯಿಂದ ಬಂದರಿನ ಬಹುತೇಕ ನಾಶವಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.

ತಮ್ಮ ವಿರುದ್ಧ ಭಾರತ ನಡೆಸುತ್ತಿರುವ ಆಪರೇಷನ್​ ಸಿಂಧೂರ ದಾಳಿಯಿಂದ ಸಿಟ್ಟಾಗಿರುವ ಪಾಕ್​, ಪ್ರತೀಕಾರವಾಗಿ ಭಾರತದ ಗಡಿ ಭಾಗಗಳಲ್ಲಿ ಗುಂಡು ಹಾರಿಸಿದೆ ಮತ್ತು ಜಮ್ಮುವಿನ ವಿಮಾನ ನಿಲ್ದಾಣ ಸೇರಿದಂತೆ ಹಲವಾರು ಸ್ಥಳಗಳ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ ದಾಳಿ ನಡೆಸಿದೆ. ಗುರುವಾರ (ಮೇ.08) ರಾತ್ರಿ, ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಜಮ್ಮುವಿನ ಮೇಲೆ ರಾಕೆಟ್‌ಗಳನ್ನು ಹಾರಿಸಿದೆ. ಪಾಕ್​ ಡ್ರೋನ್​ಗಳನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದ್ದೇ ಆದರೂ ಮತ್ತಷ್ಟು ಎಚ್ಚರಿಕೆ ವಹಿಸಿದೆ,(ಏಜೆನ್ಸೀಸ್).