ದೆಹಲಿ: ಆಪರೇಷನ್ ಸಿಂಧೂರ್ ಆರಂಭದ ನಂತರದ ಮಹತ್ವದ ಬೆಳವಣಿಗೆ ಕುರಿತು, ಭಾರತೀಯ ಸಶಸ್ತ್ರ ಪಡೆಗಳು ಭಾನುವಾರ (11) ಸಂಜೆ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿ ಕಾರ್ಯಾಚರಣೆಯ ಪ್ರಗತಿ ಮತ್ತು ಕಾರ್ಯತಂತ್ರದ ದೃಷ್ಟಿಕೋನದ ಬಗ್ಗೆ ರಾಷ್ಟ್ರಕ್ಕೆ ಮಾಹಿತಿ ನೀಡಿವೆ.
ಪಹಲ್ಗಾಮ್‌ನಲ್ಲಿ ದಾಳಿ 26 ಜನರ ಹತ್ಯೆಗೆ ಕಾರಣರಾದ ಉಗ್ರರನ್ನು ಆಪರೇಷನ್ ಸಿಂದೂರ್ ಮಟ್ಟಹಾಕಲು ನಡೆಸಲಾಯ್ತು. ಪಾಕಿಸ್ತಾನ ಹಾಗೂ ಪಿಒಕೆ ಭಾಗದಲ್ಲಿದ್ದ 9 ವಿವಿಧ ಉಗ್ರ ಸಂಘಟನೆ ನೆಲೆಗಳನ್ನು ಗುರಿಯಾಗಿಸಿ ಭಾರತ ದಾಳಿ ನಡೆಸಿತ್ತು. ಇದರಲ್ಲಿ ಸತ್ತ ಭಯೋತ್ಪಾದಕರು ಎಷ್ಟು ಎಂಬ ಬಗ್ಗೆ ಲೆಕ್ಕ ಇರಲಿಲ್ಲ. ಇದೀಗ ಭಾರತೀಯ ಸೇನೆಯ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ರಾಜೀವ್ ಘಾಯ್ ಸುದ್ದಿಗೋಷ್ಠಿ ನಡೆಸಿ, ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ಆಪರೇಷನ್ ಸಿಂದೂರ ಹೇಗೆ ನಡೆಯಿತು? ಅದರ ಪರಿಣಾಮ ಏನಾಯ್ತು ಅನ್ನೋ ಬಗ್ಗೆ ಮಾಹಿತಿ ನೀಡಿದ್ದಾರೆ.
ಪಾಕ್ ಡ್ರೋನ್ ದಾಳಿಯನ್ನು ಯಶಸ್ವುಯಾಗಿ ಮಟ್ಟ ಹಾಕಿದ್ದೇವೆ, ಡ್ರೋನ್ ದಾಳಿ ವೇಳೆ ಪಾಕ್ನಲ್ಲಿ ನಾಗರೀಕ ವಿಮಾನ ಹಾರಾಟ ಇತ್ತು. ಆದರೆ ಒಂದು ವಿಮಾನಕ್ಕೂ ಭಾರತದ ದಾಳಿಯಿಂದ ಯಾವುದೇ ಹಾನಿಯಾಗಿಲ್ಲ, 700 ಪಾಕ್ ಡ್ರೋನ್ಗಳನ್ನು ಹೊಡೆದುರುಳಿಸಿದ್ದೇವೆ, ಪಾಕಿಸ್ತಾನದ 35 ರಿಂದ 40 ಯೋಧರ ಮೃತಪಟ್ಟಿದ್ದಾರೆ. ನೂರ್ಖಾನ್ ಏರ್ಬೇಸ್ ಅನ್ನು ಧ್ವಂಸಗೊಳಿಸಿದ್ದೇವೆ, ಪ್ರತಿ ದಾಳಿಯಲ್ಲೂ ಪಾಕಿಸ್ತಾನದ ಸೇನಾಧಿಕಾರಿಗಳು ಮೃತಪಟ್ಟಿದ್ದಾರೆ, ಆಪರೇಷನ್ ಸೀಂಧೂರ್ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದಿದ್ದಾರೆ.
ಆಪರೇಷನ್ ಸಿಂದೂರ್ನಲ್ಲಿ ಹಲವು ಉಗ್ರರನ್ನು ಕೊಲ್ಲಲಾಗಿದೆ. ಲಷ್ಕರೆ ತೈಯಬಾದ ಮುದಾಸಿರ್, ಜೈಷೆ ಸಂಘಟನೆಯ ಉಗ್ರ ಹಫೀಜ್ ಮೊಹಮ್ಮದ್, ಬಹಾವಲ್ಪುರದ ಮರ್ಕಜ್ ಸಭಾನಲ್ಲಾದ ಉಸ್ತುವಾರಿ ಜಮೀಲ್, ಲಷ್ಕರೆ ತೈಬಾ ಉಗ್ರ ಖಾಲಿದ್ ಮೊದಲಾದವರು ಕಾರ್ಯಾಚರಣೆಯಲ್ಲಿ ಹತ್ಯೆಯಾಗಿರುವ ಬಗ್ಗೆ ಡಿಜಿಎಂಒ ಮಾಹಿತಿ ಹಂಚಿಕೊಂಡಿದ್ದಾರೆ.
ಭಾರತವು ಪಾಕಿಸ್ತಾನದ ನಾಗರಿಕರನ್ನು ಗುರಿಯಾಗಿಸಿ ಯಾವುದೇ ದಾಳಿ ಮಾಡಿಲ್ಲ. ಆದರೆ, ಪಾಕಿಸ್ತಾನವು ಭಾರತದಲ್ಲಿ ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡಿದೆ ಎಂದರು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಹೇಳಿದ್ದಾರೆ.
ಇದನ್ನೂ ಓದಿ: ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವವರೆಗೂ ಆಪರೇಷನ್ ಸಿಂಧೂರ್ ಮುಂದುವರಿಯುತ್ತದೆ; ಮೋದಿ ಖಡಕ್ ಎಚ್ಚರಿಕೆ| Modi
ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಭಾರತೀಯ ವಾಯುಪಡೆಯ ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರ್ತಿ ಹಾಗು ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಉಪಸ್ಥಿತರಿದ್ದರು.
(ಏಜೆನ್ಸೀಸ್)