ನ್ಯೂಸ್

ಬಾಗಿಲು ಬಡಿದ ಮೂವರು ಕಿಡಿಗೇಡಿಗಳು; ಹೊರಬಂದ ಮನೆ ಮಾಲೀಕನ ಮೇಲೆ ಗುಂಡಿನ ದಾಳಿ!

ಅಮೃತ್​ಸರ: ಅಮೃತ್​ಸರದ ದಮ್‌ಗುಂಜ್ ಪ್ರದೇಶದಲ್ಲಿ ವಾಸವಿದ್ದ ವೃದ್ಧನ ಮೇಲೆ ಕಿಡಿಗೇಡಿಗಳು ಗುಂಡಿನ ದಾಳಿ ನಡೆಸಿದ್ದು, ಶೀಘ್ರವೇ ಕುಟುಂಬದವರು ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಆರೋಪಿ ತನ್ನ ಇಬ್ಬರು ಸಹಚರರೊಂದಿಗೆ ವೃದ್ಧನ ಮನೆಯ ಮುಂದೆ ನಿಂತು ಬಾಗಿಲು ಬಡಿದಿದ್ದಾರೆ. ಈ ವೇಳೆ ಡೋರ್​ ತೆಗೆದು ಹೊರಬಂದ ಹಿರಿಯ ವ್ಯಕ್ತಿಯ ಹೊಟ್ಟೆಯ ಭಾಗಕ್ಕೆ ಗನ್​ನಿಂದ ಗುಂಡು ಹಾರಿಸಿದ್ದಾರೆ. ಘಟನೆಯ ಬೆನ್ನಲ್ಲೇ ಸ್ಥಳದಿಂದ ಆರೋಪಿಗಳು ಪರಾರಿಯಾಗಿದ್ದು, ಸಂತ್ರಸ್ತ ವ್ಯಕ್ತಿಯನ್ನು ಕುಟುಂಬದವರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ನಿವಾಸದ ಹೊರಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಘಟನೆಗೆ ಆರೋಫಿ ಮತ್ತು ವೃದ್ಧನ ಕುಟುಂಬದ ಮಧ್ಯೆಯಿದ್ದ ವೈಯಕ್ತಿಕ ಭಿನ್ನಾಭಿಪ್ರಾಯವೇ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ,(ಏಜೆನ್ಸೀಸ್).