ನ್ಯೂಸ್

ಫೋಟೋಶೂಟ್ ವೇಳೆ ಎಡವಟ್ಟು: ನವಜೋಡಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ನೆಟ್ಟಿಗರು!

ನವದೆಹಲಿ: ಮೊದಲೆಲ್ಲ ಮದುವೆಯ ದಿನಗಳಷ್ಟೇ ಫೋಟೋ ಹೊಡೆಸಿಕೊಳ್ಳುತ್ತಿದ್ದರು. ಆದರೆ ಪ್ರೀವೆಡ್ಡಿಂಗ್‌, ಪೋಸ್ಟ್‌ ವೆಡ್ಡಿಂಗ್‌ ಫೋಟೋ ಶೂಟ್‌ಗಳು ಕೆಲ ವರ್ಷಗಳಿಂದ ಭಾರಿ ಟ್ರೆಂಡ್‌ ಆಗಿವೆ. ಮದುವೆಯ ದಿನಗಿಂತಲೂ ಹೆಚ್ಚಾಗಿ ಮದುವೆಯ ಮುನ್ನ ಈ ಜೋಡಿಗಳ ಫೋಟೋ ಹೊಡೆಸಿಕೊಳ್ಳುವುದು, ಬೇರೆ ಬೇರೆ ಸ್ಥಳಗಳಿಗೆ ಹೋಗಿ ವಿವಿಧ ಭಂಗಿಗಳಲ್ಲಿ ಫೋಟೋ ಹೊಡೆಸಿಕೊಳ್ಳುವುದು ಇದೀಗ ಮಾಮೂಲಾಗಿಬಿಟ್ಟಿದೆ.

ಈ ರೀತಿ ಫೋಟೋಶೂಟ್‌ ಮಾಡಿಸಿಕೊಳ್ಳುವಾಗ ನಡೆದಿರುವ ಎಡವಟ್ಟುಗಳು ಅದೆಷ್ಟೋ. ಅಂಥದ್ದೇ ಒಂದು ವಿಡಿಯೋ ಇದೀಗ ಭಾರಿ ವೈರಲ್‌ ಆಗಿದೆ. ನವಜೋಡಿಯೊಂದು ಫೋಟೋಶೂಟ್​ ಮಾಡುವಾಗ ಧೂಮಪಾನಕ್ಕೆ ಪ್ರಚೋದನೆ ಮಾಡಿರುವ ಆರೋಪ ಕೇಳಿಬಂದಿದ್ದು, ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ವಧು ಮತ್ತು ವರ ಇಬ್ಬರು ಸಾಂಪ್ರದಾಯಿಕ ಉಡುಗೆಯಲ್ಲಿದ್ದಾರೆ. ವರ ಧೂಮಪಾನ ಮಾಡಿ ವಧುವಿನ ಬಾಯಿ ಬಾಯಿ ಹಾಕಿ ಹೊಗೆಯನ್ನು ವಧುವಿನ ಬಾಯಿಯ ಒಳಗೆ ಬಿಡುತ್ತಾನೆ. ಆ ಹೊಗೆಯನ್ನು ಎಳೆದುಕೊಳ್ಳುವ ವಧು ಮತ್ತು ಹೊಗೆಯನ್ನು ಬಾಯಿಯಿಂದ ಹೊರಗೆ ಬಿಡುತ್ತಾಳೆ. ಬಳಿಕ ಇಬ್ಬರು ಕ್ಯಾಮೆರಾಗೆ ನಗುತ್ತಾ ಪೋಸ್​ ನೀಡುತ್ತಾರೆ.

ಈ ವಿಡಿಯೋವನ್ನು ರಾಜೇಶ್ವರಿ ಅಯ್ಯರ್​ (@RajeswariAiyer) ಎಂಬುವರು ತಮ್ಮ ಎಕ್ಷ್​ (ಟ್ವಿಟರ್​) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಕಲಿಗಾಲ. ಈ ಸಾಂಸ್ಕೃತಿಕ ವಿಘಟನೆಯ ಬಗ್ಗೆ ಏನು ಹೇಳಲಿ? ಇಂತಹದನ್ನು ಪ್ರೋತ್ಸಾಹಿಸುವ ಹೆಂಡತಿ ಯಾರಿಗೆ ಬೇಕು? ಗಂಡನ ಆರೋಗ್ಯ ಹದಗೆಡುವುದನ್ನು ನೋಡಲು ಯಾರಿಗೆ ತಾನೇ ಇಷ್ಟ? ಎಂದು ಟೀಕಿಸಿದ್ದಾರೆ.

ಈ ವಿಡಿಯೋ ಇದೀಗ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ಮೂಲ ಎಲ್ಲಿಯದ್ದು ಎಂದು ತಿಳಿದುಬಂದಿಲ್ಲ. ಆದರೆ, ವಿಡಿಯೋ ಮಾತ್ರ ನೆಟ್ಟಿಗರ ಗಮನ ಸೆಳೆದಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಅದನ್ನು ದಾಟಬಾರದು ಎಂದು ನವಜೋಡಿಯನ್ನು ನೆಟ್ಟಿಗರ ತರಾಟೆಗೆ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್​)