ನ್ಯೂಸ್

ONGCಯಲ್ಲಿ ಅಪ್ರೆಂಟಿಸ್ ಹುದ್ದೆ; ಅರ್ಜಿ ಸಲ್ಲಿಕೆಗೆ ಸೆ.30 ಕೊನೆ ದಿನ

ಬೆಂಗಳೂರು: ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೊರೇಷನ್ ಲಿಮಿಟೆಡ್(GAIL)ನಿಂದ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ದೇಶದ ವಿವಿಧೆಡೆ ನೇಮಕಾತಿ ನಡೆಯಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

ಕೇಂದ್ರ ಸಾರ್ವಜನಿಕ ವಲಯ ಉದ್ಯಮವಾಗಿರುವ ಒಎನ್‌ಜಿಸಿ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ. 1956ರಲ್ಲಿ ಸ್ಥಾಪನೆಗೊಂಡಿರುವ ಕಂಪನಿಯು, ದೇಶದಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ಸಂಸ್ಕರಣಾ ಕಂಪನಿಗಳಿಗೆ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲವನ್ನು ಸರಬರಾಜು ಮಾಡುವ ಕಾರ್ಯವನ್ನು ನಿಭಾಯಿಸುತ್ತಿದೆ.

ಒಟ್ಟು ಹುದ್ದೆಗಳು: 2,500

ಹುದ್ದೆಗಳ ವಿವರ
ಉತ್ತರ ವಲಯ 159
ಮುಂಬಯಿ ವಲಯ 436
ಪಶ್ಚಿಮ ವಲಯ 732
ಪೂರ್ವ ವಲಯ 593
ದಕ್ಷಿಣ ವಲಯ 378
ಕೇಂದ್ರ ವಲಯ 202

ವಿದ್ಯಾರ್ಹತೆ
ಮಾನ್ಯತೆ ಪಡೆದ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಎಸ್‌ಎಸ್‌ಎಲ್‌ಸಿ/ಪಿಯುಸಿ, ಹುದ್ದೆ ಸಂಬಂಧಿತ ವಿಷಯದಲ್ಲಿ ಐಟಿಐ/ಡಿಪ್ಲೊಮಾ/ಪದವಿ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಲು ಅರ್ಹರು.

ವಯೋಮಿತಿ
ಕನಿಷ್ಠ 18 ರಿಂದ ಗರಿಷ್ಠ 24 ವರ್ಷ ವಯೋಮಿತಿ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಬಹುದು. ಎಸ್ಸಿ/ಎಸ್ಟಿಗೆ 5 ವರ್ಷ, ಒಬಿಸಿಗೆ 3 ವರ್ಷ, ಅಂಗವಿಕಲ ವರ್ಗದವರಿಗೆ 10 ವರ್ಷ ವಯೋಸಡಿಲಿಕೆ ಅನ್ವಯವಾಗಲಿದೆ.

ಅಪ್ರೆಂಟಿಸ್ ಸ್ಟೈಪೆಂಡ್
ಗ್ರಾಜುಯೇಟ್ ಅಪ್ರೆಂಟಿಸ್ 9,000ರೂ.
(ಬಿಎ/ಬಿ.ಕಾಂ/ಬಿ.ಎಸ್ಸಿ/ಬಿಬಿಎ/ಬಿಇ/ಬಿ.ಟೆಕ್)
ಟ್ರೇಡ್ ಅಪ್ರೆಂಟಿಸ್(10ಏ/12ಏ/ಐಟಿಐ) 7,000ರೂ.
ಡಿಪ್ಲೊಮಾ ಅಪ್ರೆಂಟಿಸ್ 8,000ರೂ.

ಆಯ್ಕೆ ಹೇಗೆ?
ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸುವ ಅಂಕದ ಆಧಾರದ ಮೇಲೆ, ಮೆರಿಟ್ ಲಿಸ್ಟ್ ಬಿಡುಗಡೆಗೊಳ್ಳಲಿದೆ. ಒಂದೇ ತರಹದ ಅಂಕಗಳಿಸಿದ ಅಭ್ಯರ್ಥಿಗಳ ಪೈಕಿ ಹಿರಿಯ ವಯಸ್ಸಿನ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿಸಲ್ಲಿಕೆ ಹೇಗೆ?

ಅಭ್ಯರ್ಥಿಗಳು https://apprenticeshipindia.gov.in ಮೂಲಕ ಅರ್ಜಿಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ ಅಂತಿಮ ದಿನ: 30.09.2023
ಹೆಚ್ಚಿನ ಮಾಹಿತಿಗಾಗಿ: www.ongcapprentices.ongc.co.in