ಚಾಮರಾಜನಗರ: ಅಪ್ಪನನ್ನೇ ಹಿಂಬಾಲಿಸಿಕೊಂಡು ಮನೆಯ ಹೊರಗೆ ಬಂದ ಹಾಲುಗಲ್ಲದ ಕಂದ ಅಪ್ಪನ ಕಾರಿಗೇ ಸಿಕ್ಕಿ ಮೃತಪಟ್ಟಿದ್ದಾನೆ. ಚಿಕ್ಕಹೊಳೆ ಬಳಿಯ ಬೊಮ್ಮನಹಳ್ಳಿಯಲ್ಲಿ ಬುಧವಾರ ಈ ದುರ್ಘಟನೆ ನಡೆದಿದ್ದು, ಶಕ್ತಿವೇಲು ಅವರ ಒಂದು ವರ್ಷದ ಪುತ್ರ ರೋಹಿತ್ ದುರ್ಮರಣಕ್ಕೀಡಾಗಿದ್ದಾನೆ.
ಹೊರಗಡೆ ಹೊರಟಿದ್ದ ಶಕ್ತಿವೇಲು ಶೆಡ್ನಿಂದ ಕಾರು ತೆಗೆಯುವ ವೇಳೆ ಮಗು ಅಪ್ಪನನ್ನು ಹಿಂಬಾಲಿಸಿದೆ. ಮಗು ಬಂದದ್ದು ಗಮನಿಸದ ತಂದೆ ಕಾರನ್ನು ರಿವರ್ಸ್ ತೆಗೆದಿದ್ದಾರೆ. ಆ ವೇಳೆ ಅಲ್ಲೇ ಇದ್ದ ಮಗುವಿಗೆ ಕಾರು ಗುದ್ದಿದೆ.
ಇದನ್ನೂ ಓದಿರಿ ಪತಿ-ಪತ್ನಿ ಇಬ್ಬರೂ ನೀರುಪಾಲು: ಮೂರು ವರ್ಷದ ಮಗು ಅನಾಥ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ತೀವ್ರ ಅಸ್ವಸ್ಥಗೊಂಡ ಮಗುವನ್ನು ಕೂಡಲೇ ತಾಳವಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸಲಿಲ್ಲ. ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.