ನ್ಯೂಸ್

ಈ ಜಿಲ್ಲೆಯಲ್ಲಿ ಒಂದು ವಾರದ ಕಾಲ ಲಾಕ್​ಡೌನ್​ ಜಾರಿ! ನಿಯಮ ಪಾಲಿಸದಿದ್ದರೆ ಲಾಕ್​ಡೌನ್​ ವಿಸ್ತರಣೆ

Mandara

ಅಮರಾವತಿ: ಮಹಾರಾಷ್ಟ್ರದಲ್ಲಿ ಕರೊನಾ ಸೋಂಕು ಮತ್ತೊಮ್ಮೆ ಏರಿಕೆ ಕಾಣಲಾರಂಭಿಸಿದೆ. ಸೋಂಕು ಹೆಚ್ಚಳದ ಬೆನ್ನಲ್ಲೇ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ವಿಧಿಸುವ ಬಗ್ಗೆ ಚರ್ಚೆಯೂ ಆರಂಭವಾಗಿದೆ. ಇದೀಗ ಈ ಒಂದು ಜಿಲ್ಲೆಯಲ್ಲಿ ಒಂದು ವಾರದ ಕಾಲ ಸಂಪೂರ್ಣ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ.

ಅಮರಾವತಿ ಜಿಲ್ಲೆಯಲ್ಲಿ ಫೆಬ್ರವರಿ 22ರಿಂದ ಮಾರ್ಚ್​ 1ರವರೆಗೆ ಸಂಪೂರ್ಣ ಲಾಕ್​ಡೌನ್​ ಜಾರಿಯಲ್ಲಿರಲಿದೆ. ಅಗತ್ಯ ವಸ್ತು ಹೊರೆತುಪಡಿಸಿ ಬೇರೆಲ್ಲ ಅಂಗಡಿಗಳು ಬಾಗಿಲು ಮುಚ್ಚಿರಲಿವೆ. ಒಂದು ವೇಳೆ ಜಿಲ್ಲೆಯ ಜನ ನಿಯಮ ಪಾಲನೆ ಮಾಡುವಲ್ಲಿ ಎಡವಿದರೆ ಲಾಕ್​ಡೌನ್​ ವಿಸ್ತರಣೆ ಮಾಡಲಾಗುವುದು ಎಂದು ಸಚಿವ ಯಶೋಮತಿ ಠಾಕೂರ್ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕಳೆದ ಕೆಲ ದಿನಗಳಿಂದ ಸೋಂಕಿನ ಸಂಖ್ಯೆ ಏರಿಕೆಯಾಗಿದೆ. ಆ ಹಿನ್ನೆಲೆಯಲ್ಲಿ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ರಾಜ್ಯದಾದ್ಯಂತ ತೆಗೆದುಕೊಳ್ಳಲಾಗುತ್ತಿದೆ. (ಏಜೆನ್ಸೀಸ್​)