ನ್ಯೂಸ್

ಹೃದಯಾಘಾತಕ್ಕೆ ಮತ್ತೊಂದು ಬಲಿ: ಸರ್ಕಾರಿ ಅಧಿಕಾರಿ ನಿಧನ

ಸಾಗರ: 19 ವರ್ಷ ಹಾಗೂ 28 ವರ್ಷದ ಇಬ್ಬರು ಇಂದು ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾದ ಬೆನ್ನಿಗೇ ಇನ್ನೊಬ್ಬರು ಹೃದಯಾಘಾತದಿಂದ ಮೃತಪಟ್ಟ ಸುದ್ದಿಯೊಂದು ಹೊರಬಿದ್ದಿದೆ. ಸರ್ಕಾರಿ ಅಧಿಕಾರಿಯೊಬ್ಬರು ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.

ಸಾಗರ ತಾಲೂಕು ಪಂಚಾಯತ್ ಕಚೇರಿಯಲ್ಲಿ ನರೇಗಾ ವಿಭಾಗದ ಅಧಿಕಾರಿಯಾಗಿದ್ದ, ನಗರ ಸಮೀಪದ ತರುವೆಯ ಬಾಲಸುಬ್ರಹ್ಮಣ್ಯ ಸಾವಿಗೀಡಾದವರು. ಇವರು ಇದಕ್ಕೂ ಮೊದಲು ಸಾಗರ ತಾಲೂಕಿನ ಯಡಜಿಗಗಳೆಮನೆ ಗ್ರಾಮಪಂಚಾಯತ್ ಹಾಗೂ ಬೇರೆ ಪಂಚಾಯತ್ ಗಳಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇವರು ತಂದೆ-ತಾಯಿ ಹಾಗೂ ಪತ್ನಿ ಮಕ್ಕಳನ್ನು ಅಗಲಿದ್ದಾರೆ.

ವಿರಾಜಪೇಟೆ ಹೊರವಲಯದ ಬಿಟ್ಟಾಂಗಲ ಬಳಿಯ ಪೆಗ್ಗರಿಕಾಡು ನಿವಾಸಿ ರವಿಕುಮಾರ್ (28) ಇಂದು ಚಲಿಸುತ್ತಿದ್ದ ವಾಹನದಲ್ಲೇ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದರು. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನಿವಾಸಿ, ನರ್ಸಿಂಗ್ ವಿದ್ಯಾರ್ಥಿನಿ ಸುಮಾ (19) ಲೋ ಬಿಪಿ ಜತೆ ಹೃದಯಾಘಾತಕ್ಕೆ ಒಳಗಾಗಿ ಬಲಿಯಾಗಿದ್ದಾರೆ.