ಬೆಂಗಳೂರು: ಮೆಸೇಜಿಂಗ್ ಆ್ಯಪ್ಗಳ ಪೈಕಿ ಮುಂಚೂಣಿಯಲ್ಲಿರುವ ವಾಟ್ಸ್ಆ್ಯಪ್ ಹೊಸದಾಗಿ ಬಿಟ್ಟಿರುವ ಚಾನೆಲ್ ಫೀಚರ್ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಕಳೆದ ಎರಡು ಮೂರು ದಿನಗಳಿಂದ ಇದನ್ನು ಬಳಕೆದಾರರಿಗೆ ಈ ಫೀಚರ್ ನೀಡಲಾಗಿದ್ದು, ಜನರು ಇದರ ಬಗ್ಗೆ ಮಾತನಾಡಲಾರಂಭಿಸಿದ್ದಾರೆ.
ವಿಶೇಷವೆಂದರೆ ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ವಾಟ್ಸ್ಆ್ಯಪ್ ಚಾನೆಲ್ ಕ್ರಿಯೇಟ್ ಆಗಿದ್ದು, ಒಂದು ದಿನ ಕಳೆಯುವಷ್ಟರಲ್ಲಿ ಅದಕ್ಕೆ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಆಗಿದ್ದಾರೆ. ಸದ್ಯ ಮೋದಿಗೆ ವಾಟ್ಸ್ಆ್ಯಪ್ ಚಾನೆಲ್ನಲ್ಲಿ 12 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಹೀಗೆ ಪ್ರಧಾನಿ ಮೋದಿ ವಾಟ್ಸ್ಆ್ಯಪ್ ಚಾನೆಲ್ನಲ್ಲಿ ಮೋಡಿ ಮಾಡಿದ್ದಾರೆ.
ಇತ್ತ ಸಿದ್ದರಾಮಯ್ಯ ವಾಟ್ಸ್ಆ್ಯಪ್ ಚಾನೆಲ್ ಹೊಂದಿದ ಮುಖ್ಯಮಂತ್ರಿಗಳ ಪೈಕಿ ಮೊದಲಿಗರು ಎನಿಸಿಕೊಂಡಿದ್ದಾರೆ. ಸದ್ಯ ದೆಹಲಿ, ಉತ್ತರಪ್ರದೇಶ, ಗುಜರಾತ್, ಪಂಜಾಬ್ ಮುಖ್ಯಮಂತ್ರಿಗಳು ವಾಟ್ಸ್ಆ್ಯಪ್ನಲ್ಲಿ ಚಾನೆಲ್ ಹೊಂದಿದ್ದಾರೆ. ಆದರೆ ಇವರೆಲ್ಲರಿಗಂತಲೂ ಮೊದಲು ವಾಟ್ಸ್ಆ್ಯಪ್ ಚಾನೆಲ್ ಹೊಂದಿರುವ ಮುಖ್ಯಮಂತ್ರಿ ಎಂದರೆ ಕರ್ನಾಟಕದ ಸಿದ್ದರಾಮಯ್ಯ. ಸದ್ಯ ನರೇಂದ್ರ ಮೋದಿ ಅವರ ಹೆಸರಿನಲ್ಲಿ ವಾಟ್ಸ್ಆ್ಯಪ್ ಚಾನೆಲ್ ಇದ್ದರೂ ಪ್ರಧಾನಮಂತ್ರಿಯ ಅಧಿಕೃತ ವಾಟ್ಸ್ಆ್ಯಪ್ ಚಾನೆಲ್ ಇನ್ನೂ ಕ್ರಿಯೇಟ್ ಆಗಿಲ್ಲ.
ಪ್ರಧಾನಿ ನರೇಂದ್ರ ಮೋದಿ ವಾಟ್ಸ್ಆ್ಯಪ್ ಚಾನೆಲ್ಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ: https://whatsapp.com/channel/0029Va8IaebCMY0C8oOkQT1F
ಕರ್ನಾಟಕದ ಮುಖ್ಯಮಂತ್ರಿ ವಾಟ್ಸ್ಆ್ಯಪ್ ಚಾನೆಲ್ಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ: https://whatsapp.com/channel/0029Va71PkqBKfi3ZmSit71u