ಸೂರತ್, ಗುಜರಾತ್: ಅತ್ಯುತ್ತಮ ಕರಕುಶಲತೆಯ ಪ್ರದರ್ಶನದಲ್ಲಿ, ವಜ್ರದ ವ್ಯಾಪಾರಿಯೊಬ್ಬರು 5000ಕ್ಕೂ ಹೆಚ್ಚು ಅಮೇರಿಕನ್ ವಜ್ರಗಳನ್ನು ಬಳಸಿ ರಾಮಮಂದಿರದ ಥೀಮ್ ಮೇಲೆ ಹಾರವನ್ನು ತಯಾರು ಮಾಡಿದ್ದಾರೆ. ಇದನ್ನು ಸೂರತ್ ಮೂಲದ ವಜ್ರದ ವ್ಯಾಪಾರಿ ಅಯೋಧ್ಯೆಯ ರಾಮಮಂದಿರಕ್ಕೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರಥ್ ಕ್ಷೇತ್ರ ಟ್ರಸ್ಟ್, ಮುಂದಿನ ವರ್ಷ ಜನವರಿ 22ರ ಮಧ್ಯಾಹ್ನ ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮ ಲಲ್ಲಾನನ್ನು ಸಿಂಹಾಸನಾರೋಹಣ ಮಾಡಲು ನಿರ್ಧರಿಸಿದೆ.
ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆಯು ಭಾರತದ ಜನರಿಗೆ ಹೆಚ್ಚಿನ ಆಧ್ಯಾತ್ಮಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಅಮೇರಿಕನ್ ವಜ್ರಗಳ ಹಾರದ ಬಗ್ಗೆ ಮಾತನಾಡಿದ ರಸೇಶ್ ಜ್ಯುವೆಲ್ಸ್‌ನ ನಿರ್ದೇಶಕ ಕೌಶಿಕ್ ಕಾಕಡಿಯಾ, "5000ಕ್ಕೂ ಅಧಿಕ ಅಮೆರಿಕನ್ ವಜ್ರಗಳನ್ನು ಬಳಸಲಾಗಿದೆ. ಇದು 2 ಕೆಜಿ ಬೆಳ್ಳಿಯಿಂದ ಮಾಡಲ್ಪಟ್ಟಿದೆ" ಎಂದರು.
"ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಿಂದ ನಾವು ಸ್ಫೂರ್ತಿ ಪಡೆದಿದ್ದೇವೆ. ಇದು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಅಲ್ಲ. ನಾವು ಇದನ್ನು ರಾಮಮಂದಿರಕ್ಕೆ ಉಡುಗೊರೆಯಾಗಿ ನೀಡಲು ಬಯಸುತ್ತೇವೆ. ನಾವೂ ರಾಮಮಂದಿರಕ್ಕೆ ಏನಾದರೂ ಉಡುಗೊರೆ ಕೊಡಬೇಕು ಎಂಬ ಉದ್ದೇಶದಿಂದ ಮಾಡಿದ್ದೇವೆ ಅಷ್ಟೇ" ಎಂದು ಹೇಳಿದರು,(ಏಜೆನ್ಸೀಸ್).