ನವದೆಹಲಿ: ಸೆಲೆಬ್ರಿಟಿಗಳು, ಗಣ್ಯರ ಮಕ್ಕಳು ಏನು ಮಾಡಿದರೂ ಸುದ್ದಿಯಾಗುವುದು ಸಾಮಾನ್ಯ. ಆದರೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರ ಮಗಳು ಅಂಜಲಿ ಬಿರ್ಲಾ ಬಗ್ಗೆ ಬೇರೆಯದ್ದೇ ತರದ ಸುದ್ದಿಯಾಗಿದೆ. ಆಕೆ ಯುಪಿಎಸ್ಸಿ ಪರೀಕ್ಷೆ ಬರೆಯದಿದ್ದರೂ ಅಪ್ಪನ ಹೆಸರಿನಿಂದಾಗಿ ಐಎಎಸ್ ಪಾಸ್ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಅಷ್ಟಕ್ಕೂ ಇದು ನಿಜವೇ? ಅಂಜಲಿ ಪರೀಕ್ಷೆ ಬರೆದಿಲ್ಲವೇ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.
ಅಂಜಲಿ ಬಿರ್ಲಾ ಬಗ್ಗೆ ಹುಟ್ಟಿಕೊಂಡ ಈ ಸುದ್ದಿಯನ್ನು ಎಎಫ್ಪಿ ಸುದ್ದಿ ಮಾಧ್ಯಮ ಫ್ಯಾಕ್ಟ್ ಚೆಕ್ ಮಾಡಿದೆ. ಫ್ಯಾಕ್ಟ್ ಚೆಕ್ನಲ್ಲಿ ನಿಜಾಂಶ ಹೊರಬಿದ್ದಿದೆ. ಅಂಜಲಿ ಯುಪಿಎಸ್ಸಿಯ ಮೂರೂ ಪರೀಕ್ಷೆಗಳನ್ನು ಬರೆದಿದ್ದಾರೆ. ಆ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಮೆರಿಟ್ ಪಟ್ಟಿಯಲ್ಲಿ ಅವರ ಹೆಸರು ರೋಲ್ ನಂಬರ್ನೊಂದಿಗೆ ಕಾಣಿಸಿಕೊಂಡಿದೆ. ಯುಪಿಎಸ್ಸಿ ಅಧಿಕೃತ ವೆಬ್ಸೈಟ್ನಲ್ಲೂ ಅದು ಲಭ್ಯವಿದೆ.