More

    ವಿಮಾನಕ್ಕೇ ಕಾಂಪಿಟೇಶನ್​ ಕೊಡುತ್ತೆ ಈ ರೈಲು! ಒಂದೇ ಗಂಟೆಯಲ್ಲಿ 620 ಕಿಮೀ ಪ್ರಯಾಣ

    ಬೀಜಿಂಗ್​: ತಾಂತ್ರಿಕವಾಗಿ ಅತಿ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಚೀನಾ ಇದೀಗ ಅತಿ ವೇಗದ ರೈಲೊಂದನ್ನು ತಯಾರಿಸಿದೆ. ಹೊಸದಾಗಿ ಸಿದ್ಧವಾಗಿರುವ ಈ ರೈಲು ಒಂದೇ ಗಂಟೆಯಲ್ಲಿ ಬರೋಬ್ಬರಿ 620 ಕಿಮೀ ಚಲಿಸುತ್ತದೆಯಂತೆ.

    ಇದನ್ನೂ ಓದಿ: ಈ ದೇಶದಲ್ಲಿ 12 ವರ್ಷಕ್ಕೇ ಸೆಕ್ಸ್​ಗೆ ಅನುಮತಿ! ಡಿವೋರ್ಸ್​ ಕೊಡೋದು ಕಾನೂನು ಬಾಹಿರವಂತೆ

    “ಸೂಪರ್ ಬುಲೆಟ್ ಮ್ಯಾಗ್ಲೆವ್ ರೈಲು” ಎಂದು ಈ ಫಾಸ್ಟೆಸ್ಟ್​ ರೈಲನ್ನು ಕರೆಯಲಾಗಿದೆ. ಸದ್ಯ ಅಭಿವೃದ್ಧಿ ಹಂತದಲ್ಲಿರುವ ರೈಲಿನ ಮೊದಲ ಪ್ರೋಟೋಕಾಲ್​ನ್ನು ಇತ್ತೀಚೆಗೆ ಸಿಚುವಾನ್ ಪ್ರಾಂತ್ಯದ ರಾಜಧಾನಿಯಾದ ಚೆಂಗ್ಡೂನಲ್ಲಿ ಪ್ರದರ್ಶಿಸಲಾಯಿತು. ಈ ಹಿಂದೆ 2016ರಲ್ಲಿ ಚೀನಾ ಮ್ಯಾಗ್ಲೆವ್​ ರೈಲನ್ನು ಗಂಟೆಗೆ 600 ಕಿಮೀ ಚಲಿಸುವಂತೆ ಅಭಿವೃದ್ಧಿ ಪಡಿಸಿತ್ತು. ಅದಾದ ನಂತರ ಇದೀಗ ಆ ದಾಖಲೆಯನ್ನು ಸೂಪರ್​ ಬುಲೆಟ್​ ಮ್ಯಾಗ್ಲೆವ್​ ರೈಲು ಮುರಿದಿದೆ.

    ವಿಮಾನಗಳು ಗಂಟೆಗೆ 900 ಕಿಮೀ ವೇಗದಲ್ಲಿ ಚಲಿಸುತ್ತವೆ. ಸದ್ಯ ಭೂಮಿ ಮೇಲೆ ಅತಿ ವೇಗವಾಗಿ ಚಲಿಸುವ ರೈಲುಗಳಲ್ಲಿ ಈ ಸೂಪರ್ ಬುಲೆಟ್ ಮ್ಯಾಗ್ಲೆವ್ ರೈಲು ಮೊದಲು ನಿಂತಿದೆ. ಅದೇ ಕಾರಣದಿಂದಾಗಿ ಇದಕ್ಕೆ ಫ್ಲೋಟಿಂಗ್​ ಟ್ರೈನ್​ ಎನ್ನುವ ಹೆಸರೂ ಇದೆ. ವಿಮಾನದ ಬದಲು ಈ ರೈಲಲ್ಲಿ ಪ್ರಯಾಣಿಸಬಹುದು ಎನ್ನಲಾಗಿದೆ.

    ಇದನ್ನೂ ಓದಿ: ಗೇ ಲವ್ವರ್​ಗಾಗಿ ಪತ್ನಿಯನ್ನೇ ಕೊಂದ ಸಲಿಂಗಕಾಮಿ: ನಾದಿನಿ ಬಿಚ್ಚಿಟ್ಟ ಭಯಾನಕ ರಹಸ್ಯ ಇಲ್ಲಿದೆ..

    ಈ ರೈಲಿನಲ್ಲಿ ಹೈ ಟೆಂಪರೇಚರ್​​ ಸೂಪರ್ ಕಂಡಕ್ಟಿಂಗ್​ ಮ್ಯಾಗ್ಲೆವ್​ ಟೆಕ್ನಾಲಜಿಯನ್ನು ಬಳಸಿರುವುದಾಗಿ ಚೀನಾ ಹೇಳಿಕೊಂಡಿದೆ. ಸಾಮಾನ್ಯ ಮ್ಯಾಗ್ಲೆವ್​ ರೈಲುಗಳಲ್ಲಿ ಲೋ ಟೆಂಪರೇಚರ್​ ಮ್ಯಾಗ್ಲೆವ್​ ಟೆಕ್ನಾಲಜಿ ಬಳಸಲಾಗುತ್ತದೆ. ಆದರೆ ಇದರಲ್ಲಿ ಅದನ್ನು ಬದಲಾಯಿಸಿರುವುದರಿಂದಾಗಿ ವೇಗ ಹೆಚ್ಚಿಸಲು ಸಾಧ್ಯವಾಗಿದೆ ಎಂದು ತಿಳಿಸಲಾಗಿದೆ. (ಏಜೆನ್ಸೀಸ್​)

    ಮದ್ವೆಗೆ ಬರ್ದಿದ್ರೂ ಉಡುಗೊರೆ ಹಾಕಿ! ಲಗ್ನಪತ್ರಿಕೆಯಲ್ಲೇ ಗೂಗಲ್​ ಪೇ, ಫೋನ್​ ಪೇ ಕ್ಯೂಆರ್​ ಕೋಡ್​

    ಪಂಚರ್​ ಟೈಯರ್​ನಲ್ಲೇ ಪತ್ನಿ ಮನೆಗೆ ಪ್ರಯಾಣ ಬೆಳೆಸಿದ ಯುವಕನಿಗೆ ಕಾದಿತ್ತು ಶಾಕ್​! ಅಪಘಾತವಂತೂ ಅಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts