ನ್ಯೂಸ್

VIDEO| ಮಗನ ಸಾವಿನ ನಂತರ ಸೊಸೆಯನ್ನೇ ಮದುವೆಯಾದ ಮಾವ!

ನವದೆಹಲಿ: ವಿವಾಹ ಎನ್ನುವುದು ನವ ವಧು, ವರರಿಗೆ ಸಂತೋಷ ಕ್ಷಣದ ಜತೆ ಹೊಸ ಜೀವನವನ್ನು ಕಟ್ಟಿಕೊಳ್ಳುವ ಒಂದು ಶುಭಗಳಿಗೆಯಾಗಿದೆ. ಸಂಬಂಧಗಳಿಗೆ ಭಾವನೆ ಅರ್ಥವನ್ನು ಕೊಡುವ ಸಂಸ್ಕೃತಿ ಭಾರತೀಯರದ್ದಾಗಿದೆ. ಹೀಗಿರುವಾಗ ಇಲ್ಲೋಬ್ಬ ವ್ಯಕ್ತಿ ತನ್ನ ತನ್ನ ಮಗ ಸಾವನ್ನಪ್ಪಿದ ಬಳಿಕ ಮಗನ ಹೆಂಡಿಯನ್ನೇ ಮದುವೆಯಾಗಿರುವ ಘಟನೆ ನಡೆದಿದೆ.

ಮಗನ ಸಾವಿನ ನಂತರ ಸೊಸೆಯನ್ನು ಮದುವೆಯಾಗಿದ್ದೇನೆ ಎಂದು ವೃದ್ಧ ಹೇಳುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎನ್ನುವ ಮಾಹಿತಿ ಇಲ್ಲ. ಆದರೆ ವೀಡಿಯೋ ಮಾತ್ರ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ನವ ವಧುವರರಂತೆ ಮಹಿಳೆ ಮತ್ತು ವಯಸ್ಸಾದ ವ್ಯಕ್ತಿ ಸಿಂಗಾರವಾಗಿ ಇಬ್ಬರು ಹಾರವನ್ನು ಕತ್ತಿಗೆ ಹಾಕಿರುವುದನ್ನು ನೋಡಬಹುದಾಗಿದೆ. ವಯಸ್ಸಾದ ವ್ಯಕ್ತಿಯನ್ನು ಏಕೆ ಮದುವೆಯಾದಿರಿ ಎಂದು ಮಹಿಳೆಯನ್ನು ಕೇಳಿದಾಗ, ಅವರನ್ನು ಹೊರತುಪಡಿಸಿ ಯಾರೂ ನನ್ನನ್ನು ನೋಡಿಕೊಳ್ಳುವುದಿಲ್ಲ. ತನ್ನ ಸ್ವಂತ ಇಚ್ಛೆಯ ಮೇರೆಗೆ ಮದುವೆಯಾದಳು ಎಂದು ಒಪ್ಪಿಕೊಳ್ಳುತ್ತಾಳೆ.

ವೈರಲ್ ವಿಡಿಯೋದಲ್ಲಿ ಏನಿದೆ?:

ಈ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದ್ದು, ಮಗನ ನಿಧನದ ನಂತರ ಮಾವ ಸೊಸೆಯನ್ನು ಮದುವೆಯಾಗುತ್ತಾನೆ." ಎನ್ನುವ ಶಿರ್ಷಿಕೆಯೊಂದಿಗೆ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ಮಾತ್ರ ಈ ವಿಚಿತ್ರ ಮದುವೆಗೆ ವಿಭಿನ್ನವಾಗಿ ಕಾಮೆಂಟ್​​ ಮಾಡುತ್ತಿದ್ದಾರೆ.