ನ್ಯೂಸ್

ಸಿಕ್ಕಿದ್ದೇ ಚಾನ್ಸ್​ ಎಂದು ಲಾಭ ಮಾಡಿಕೊಳ್ಳುತ್ತಿದ್ದ ಮೆಡಿಕಲ್​ ಶಾಪ್​ಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿಗಳು; 20 ಸಾವಿರ ರೂ.ದಂಡ

ಹಾಸನ: ಕರೊನಾ ವೈರಸ್ ಭೀತಿಗೆ ಜನಸಾಮಾನ್ಯರು ಹೈರಾಣಾಗಿದ್ದರೆ ಕೆಲವು ಮೆಡಿಕಲ್ ಶಾಪ್​ಗಳು ಇದೇ ಸಂದರ್ಭವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿವೆ.

ಮಾಸ್ಕ್​, ಹ್ಯಾಂಡ್​ ಸ್ಯಾನಿಟೈಸರ್​ಗಳನ್ನು ಎಮ್​ಆರ್​ಪಿಗಿಂತ ಅಧಿಕ ಬೆಲೆಗೆ ಮಾರಾಟ ಮಾಡುತ್ತಿವೆ. ಜನರೂ ಅಷ್ಟೇ ಮನೆಯಿಂದ ಆದಷ್ಟು ಮಾಸ್ಕ್​ ಧರಿಸಿಕೊಂಡೇ ಹೋಗುತ್ತಿದ್ದು, ಅದನ್ನು ಕೊಳ್ಳಲು ಮೆಡಿಕಲ್​ ಶಾಪ್​ಗಳಿಗೆ ತೆರಳುತ್ತಿದ್ದಾರೆ.

ಕರೊನಾ ಭಯವನ್ನೇ ಅಸ್ತ್ರ ಮಾಡಿಕೊಂಡು ಮಾಸ್ಕ್​ ಮತ್ತು ಹ್ಯಾಂಡ್​ ಸ್ಯಾನಿಟೈಸರ್​ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಹಾಸನ್ ಮೂರು ಔಷಧಿ ಅಂಗಡಿಗಳ ಮೇಲೆ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮೂರು ಮೆಡಿಕಲ್​ ಶಾಪ್​ಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಸುಮಾರು 20 ಸಾವಿರ ರೂಪಾಯಿ ದಂಡ ಹಾಕಿದ್ದಾರೆ. (ದಿಗ್ವಿಜಯ ನ್ಯೂಸ್​)