ನ್ಯೂಸ್

9 ತಿಂಗಳ ಕಾಲ ಬಾಣಂತಿಯೆಂದು ಸುಳ್ಳು ಹೇಳಿದಳು; ಸರ್ಕಾರದ ಪ್ರಯೋಜನ ಪಡೆಯಲು ಮಾಸ್ಟರ್​ ಪ್ಲ್ಯಾನ್​​!

ಒಡಿಶಾ: ಬಾಣಂತಿ ಮತ್ತು ಗರ್ಭಿಣಿಯರ ಆರೋಗ್ಯಕ್ಕಾಗಿ ಸರ್ಕಾರದಿಂದ ಕೆಲವು ಯೋಜನೆಗಳಿವೆ. ಆದರೆ ಇಲ್ಲೊಬ್ಬಳು ಸರ್ಕಾರದ ಪ್ರಯೋಜನ ಪಡೆಯಲು 9 ತಿಂಗಳ ಕಾಲ ಬಾಣಂತಿ ಎಂದು ಸುಳ್ಳು ಹೇಳಿಕೊಂಡು ಬಂದಿರುವ ಪ್ರಕರಣ ಒಡಿಶಾದ ಮಲ್ಕಾನ್‌ಗಿರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಮಲ್ಕನಗಿರಿ ಮುಖ್ಯ ಜಿಲ್ಲಾ ವೈದ್ಯಾಧಿಕಾರಿಯೊಬ್ಬರು ಮಾತನಾಡಿ, ಬಿರೇನಪಲ್ಲಿ ಗ್ರಾಮದ ಕೌಶಲ್ಯಾ ಭೂಮಿಯಾ ಎಂಬ ಮಹಿಳೆ ವಿರುದ್ಧ ಮತ್ತಿಲಿ ಪೊಲೀಸ್ ಠಾಣೆಯಲ್ಲಿ ಫೋರ್ಜರಿ ಪ್ರಕರಣ ದಾಖಲಾಗಿದೆ. ಒಡಿಶಾ ಸರ್ಕಾರವು ಮಮತಾ ಯೋಜನೆಯಡಿಯಲ್ಲಿ ಕಳೆದುಹೋದ ಕೆಲಸದ ದಿನಗಳಿಗೆ ಪರಿಹಾರವಾಗಿ ಮತ್ತು ಅವರ ನಿರ್ಣಾಯಕ ತಿಂಗಳುಗಳಲ್ಲಿ ಪೋಷಣೆಯನ್ನು ಒದಗಿಸಲು ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಮೊದಲ ಎರಡು ಹೆರಿಗೆಗೆ ಎರಡು ಕಂತುಗಳಲ್ಲಿ 5,000 ರೂ. ನೀಡುತ್ತದೆ.ಮಹಿಳೆ ಯಾವುದೇ ಮಮತಾ ಯೋಜನೆಯ ಮೂಲಕ ಆರ್ಥಿಕ ಪ್ರಯೋಜನಗಳನ್ನು ಪಡೆದಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದಿದ್ದಾರೆ.

ಆಕೆ ಸ್ಥಳೀಯ ಸಹಾಯಕ ನರ್ಸ್​​ಗಳ ಬಳಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಆದರೆ ಆಶಾ ಕಾರ್ಯಕರ್ತೆ ಈ ಬಗ್ಗೆ ಅನೇಕ ಭಾರಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅವರು ಐಸಿಡಿಎಸ್ ಯೋಜನೆಯಡಿ ಸರ್ಕಾರದಿಂದ ನೀಡಲಾದ ಮೊಟ್ಟೆ ಮತ್ತು ಇತರ ಪೌಷ್ಟಿಕಾಂಶದ ಪೂರಕಗಳನ್ನು ಪಡೆದಿದ್ದಾರೆ ಎಂದು ಹೇಳಿದ್ದಾರೆ.

ಒಂಬತ್ತು ತಿಂಗಳಿನಿಂದ ನಕಲಿ ಗರ್ಭಧಾರಣೆಯ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಮಹಿಳೆ ತನ್ನ ಶಿಶುವನ್ನು ಕದ್ದಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಪ್ರಕರಣ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.