ನ್ಯೂಸ್

ಬಾಲಾಸೋರ್​ ರೈಲು ದುರಂತ; ಲಾಟರಿಯಲ್ಲಿ ಗೆದ್ದ ಹಣದಲ್ಲಿ ಸಂತ್ರಸ್ತರಿಗೆ ಪಾಲು ನೀಡಿದ ಒಡಿಶಾ ನಿವಾಸಿ

ಅಬುಧಾಬಿ: ಜೂನ್​ 02ರಂದು ಒಡಿಶಾದ ಬಾಲಾಸೋರ್​ನಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ 300ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು, 1,200ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ಬುಧಾಬಿಯಲ್ಲಿ ನೆಲೆಸಿರುವ ಭಾರತ ಮೂಲದ ಬಾಣಸಿಗ ಸಹಜನ್​ ಮೊಹಮ್ಮದ್​ ಎಂಬುವವರು ತಾವು ಈಚೆಗೆ ಲಾಟರಿಯಲ್ಲಿ ಗೆದ್ದ 4 ಲಕ್ಷ ರೂ. ಹಣವನ್ನು ಒಡಿಶಾ ರೈಲು ದುರಂತದ ಸಂತ್ರಸ್ತರಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಒಡಿಶಾದ ಜಸ್​ಪುರ್​ ಮೂಲಕ ಸಹಜನ್​ ಈಚೆಗೆ ಡ್ರೀಮ್​ ಐಲ್ಯಾಂಡ್​ ಸ್ಕ್ರ್ಯಾಚ್​ಕಾರ್ಡ್​ ಆಟದಲ್ಲಿ 20 ಸಾವಿರ ದಿರ್ಹಾಂ(4, 48, 885 ರೂಗಳನ್ನು) ಬಹುಮಾನವಾಗಿ ಗೆದ್ದಿದ್ದರು.

ಮನೆ ನಿರ್ಮಾಣಕ್ಕೂ ಉಪಯೋಗ

ಈ ಕುರಿತು ಮಾತನಾಡಿರುವ ಸಹಜನ್​ ಅದೃಷ್ಟವಶಾತ್​ ಭೀಕರ ರೈಲು ಅಪಘಾತದಲ್ಲಿ ನನ್ನ ಪರಿಚಿತ ವ್ಯಕ್ತಿಗಳು ಯಾರು ಇರಲಿಲ್ಲ. ದುರಂತದಲ್ಲಿ ನನ್ನ ಗ್ರಾಮದವರು ಕೆಲವರು ಗಾಯಗೊಂಡಿದ್ದಾರೆ. ನಾನು ಮೊದಲು ಅವರಿಗೆ ಸಹಾಯ ಮಾಡುತ್ತೇನೆ.

ಜೂನ್​ 25ರಂದು ನಾನು ನನ್ನ ತವರಿಗೆ ಮರಳುತ್ತಿದ್ದು, ದುರಂತದ ಸಂತ್ರಸ್ತರಿಗೆ ಸಹಾಯ ಮಾಡುವುದರ ಜೊತೆಗೆ ಉಳಿದ ಹಣವನ್ನು ಮನೆ ಉಪಯೋಗಕ್ಕೆ ಉಪಯೋಗಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.