Odisha, June 25 (ANI): Odisha Chief Minister Naveen Patnaik inaugurating the Product Application and Development Centre, set up by Indian Oil Corporation Ltd (IOCL), via video conferencing, in Paradip on Thursday. (ANI Photo) 
ನ್ಯೂಸ್

ಸರ್ಕಾರಿ ನೌಕರರು ಸ್ಟ್ರೈಕ್ ಮಾಡಿದ್ರೆ ಸೆರೆವಾಸ ಗ್ಯಾರೆಂಟಿ !

ನವದೆಹಲಿ : ಸರ್ಕಾರಿ ನೌಕರರು ವಿನಾಕಾರಣ ಅಕ್ರಮವಾಗಿ ಮುಷ್ಕರ ಹೂಡಿದರೆ, ಅಂಥ ಕೃತ್ಯಗಳಿಗೆ ಹಣಕಾಸಿನ ನೆರವು ಅಥವಾ ಇನ್ನಾವುದೇ ರೀತಿಯ ನೆರವು ನೀಡಿದ್ರೆ ಅಂಥವರು ಇನ್ನು ಸೆರೆವಾಸ ಅನುಭವಿಸುವುದು ಗ್ಯಾರೆಂಟಿ ! ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಸರ್ಕಾರ ಇಂಥದ್ದೊಂದು ಮಸೂದೆಯನ್ನು ಅಂಗೀಕರಿಸಿದೆ.

ಹೌದು ಈ ಕಾನೂನು ಜಾರಿಯಾಗುತ್ತಿರುವುದು ಒಡಿಶಾದಲ್ಲಿ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸರ್ಕಾರ ಇದನ್ನು ಜಾರಿಗೊಳಿಸುತ್ತಿದೆ. ಒಡಿಶಾ ಎಸೆನ್ಶಿಯಲ್​ ಸರ್ವೀಸಸ್​ (ಮೇಂಟೆನೆನ್ಸ್) ಆ್ಯಕ್ಟ್ ಎಂಬುದು ಕಾಯ್ದೆಯ ಹೆಸರು. ಈ ಮಸೂದೆಯನ್ನು ಮುಖ್ಯಮಂತ್ರಿಯವರ ಪರವಾಗಿ ಗೃಹ ಖಾತೆ ರಾಜ್ಯ ಸಚಿವರ ಡಿಎಸ್ ಮಿಶ್ರಾ ಮಂಡಿಸಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಈ ಮಸೂದೆಯಲ್ಲಿನ ವಿವಾದಾತ್ಮಕ ಅಂಶಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಸರ್ಕಾರ ಮಸೂದೆಯನ್ನು ಅಂಗೀಕರಿಸಿದೆ.

ಮಸೂದೆ ಪ್ರಕಾರ, ಯಾರಾದರೂ ಅಕ್ರಮ ಮುಷ್ಕರಗಳಿಗೆ ಹಣಕಾಸು ನೆರವು ನೀಡುವುದು, ಅಕ್ರಮ ಮುಷ್ಕರ ಮಾಡುವಂತೆ ಪ್ರಚೋದಿಸುವುದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ. ಇದು ಸಾಬೀತಾದರೆ ಒಂದು ವರ್ಷದ ತನಕದ ಸಜೆ ಮತ್ತು 5,000 ರೂಪಾಯಿ ತನಕ ದಂಡ ವಿಧಿಸುವುದಕ್ಕೆ ಅವಕಾಶವಿದೆ. ಇದಲ್ಲದೇ, ಸರ್ಕಾರಿ ನೌಕರರೇನಾದರೂ ವಿಶೇಷವಾಗಿ ಅಗತ್ಯಸೇವೆಗಳ ಅಂದರೆ ಅಗ್ನಿಶಾಮಕ, ಅಬಕಾರಿ, ಅರಣ್ಯ, ಬಂದೀಖಾನೆ, ಸುಧಾರಣೆ, ಇಲೆಕ್ಟ್ರಾನಿಕ್ಸ್ ಸೇರಿ ಇತರೆ ಅಗತ್ಯ ಸೇವೆಗಳ ನೌಕರರು ಮುಷ್ಕರ ಘೋಷಿಸುವಂತಿಲ್ಲ. (ಏಜೆನ್ಸೀಸ್)