ನ್ಯೂಸ್

ನಟಿ ನುಸ್ರತ್ ಬರೂಚ ಟ್ಯಾಟೂ ಎಲ್ಲಿದೆ ನೋಡೋ ರಾಹುಲ್ಲಾ!

ಮುಂಬೈ: ನಟಿ ನಟಿ ನುಸ್ರತ್ ಬರೂಚ ಅವರ ಲೈಫ್‌ ಸಖತ್‌ ಕಲರ್‌ಫುಲ್‌ ಆಗಿದೆ. ಬಾಲಿವುಡ್​ನಲ್ಲಿ ಅವರಿಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ.

ಬಾಲಿವುಡ್​ನ ಖ್ಯಾತ ನಟಿ ನುಸ್ರತ್ ಬರೂಚ ಅವರು ಹೊಸ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಶಾರ್ಟ್ಸ್ ಹಾಗೂ ಟೀ ಶರ್ಟ್ ಧರಿಸಿಕೊಂಡು ಮಿರರ್ ಸೆಲ್ಫಿ ಶೇರ್ ಮಾಡಿದ ನಟಿ ತಮ್ಮ ಟ್ಯಾಟೂ ತೋರಿಸಿದ್ದಾರೆ.

ಬ್ಲ್ಯಾಕ್ ಟೀ ಶರ್ಟ್ ಧರಿಸಿದ್ದ ನುಸ್ರತ್ ಬರೂಚ ಅವರು ಒಂದು ಕೈನಲ್ಲಿ ಮೊಬೈಲ್ ಹಿಡಿದಿದ್ದರೆ ಇನ್ನೊಂದು ಕೈನಲ್ಲಿ ತಮ್ಮ ವೈಟ್ ಕಲರ್ ಶಾರ್ಟ್ಸ್ ಸರಿಸಿ ಹೊಸ ಟ್ಯಾಟೂ ತೋರಿಸಿದ್ದಾರೆ. ಅವರ ಫೋಟೋಸ್ ಈಗ ವೈರಲ್ ಆಗಿವೆ. ಫ್ಲೋರ್ ಲೆಂಗ್ತ್ ಮಿರರ್​​ನಲ್ಲಿ ನಟಿ ಫೋಸ್ ಕೊಟ್ಟಿದ್ದು ಅವರ ಲುಕ್ ಭರ್ಜರಿಯಾಗಿ ಕಂಡುಬಂದಿದೆ. ನಟಿಯ ಲುಕ್ ನೋಡಿದ ನೆಟ್ಟಿಗರು ಹಾಟ್ ಎಂದು ಹೊಗಳಿ ಕಮೆಂಟ್ ಮಾಡುತ್ತಿದ್ದಾರೆ. ಅವರ ಫೊಟೋಸ್ ನೋಡಿ ಟ್ಯಾಟೂ ಹಾಕಿದವನು ಮಾತ್ರ ಲಕ್ಕೀ ಗುರು ಎಂದಿದ್ದಾರೆ ನೆಟ್ಟಿಗರು.

ನನ್ನ ಟ್ಯಾಟೂ ಮಿಸ್ ಮಾಡ್ಕೊಳ್ತಿದ್ದೆ. ನೀನೆಲ್ಲಿದ್ದಿ ಎಂದು ನಟಿ ಈ ಒಂದು ಪೋಸ್ಟ್​ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಬಹಳಷ್ಟು ಜನರು ಟ್ಯಾಟೂ ಸೂಪರ್ ಎಂದು ಹೊಗಳಿದ್ದಾರೆ. ಇನ್ನೂ ಕೆಲವರು ಇದರ ಅರ್ಥ ಏನೆಂದು ಕೇಳಿದ್ದಾರೆ.

ಹಮಾಸ್ ಉಗ್ರರು ಇಸ್ರೇಲ್‌ ಅನ್ನು ಟಾರ್ಗೆಟ್ ಮಾಡಿದ್ದಾಗ ಯುದ್ಧ ಕಾರಣದಿಂದ ಸುದ್ದಿಯಾಗಿದ್ದ ಇಸ್ರೇಸ್​ನಲ್ಲಿ ಬಾಲಿವುಡ್​ನ ನಟಿ ನುಸ್ರತ್ ಸಿಕ್ಕಿಹಾಕಿಕೊಂಡಿದ್ದಾಗ ಈ ಹಿಂದೆ ಸುದ್ದಿಯಾಗಿದ್ದರು.

ಹಮಾಸ್‌ ಉಗ್ರರ ದಾಳಿ ಹಾಗೂ ಇಸ್ರೇಲ್‌ ಸೇನೆಯ ಪ್ರತಿದಾಳಿಯಿಂದಾಗಿ ಒಟ್ಟು ಸಾವಿರಾರು ಮಂದಿ ಮೃತಪಟ್ಟಿದ್ದು, ಸಾವಿರಾರು ಜನ ಗಾಯಗೊಂಡಿದ್ದಾರೆ. ಟೆಲ್‌ಅವಿವ್‌ ನಗರವಂತೂ ಅಕ್ಷರಶಃ ಮಸಣದಂತಾಗಿದೆ. ಇದರ ಬೆನ್ನಲ್ಲೇ, ಇಸ್ರೇಲ್‌ನಲ್ಲಿ ನಾಪತ್ತೆಯಾಗಿದ್ದ ಬಾಲಿವುಡ್‌ ನಟಿ ನುಶ್ರತ್‌ ಭರುಚ್ಚಾ ಅವರು ಸುರಕ್ಷಿತವಾಗಿ ಬಂದಿದ್ದರು.