ನ್ಯೂಸ್

ಈ ದಿನಾಂಕಗಳಂದು ಜನಿಸಿದ ಮಹಿಳೆಯರನ್ನು ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲವಂತೆ! Numerology

Numerology : ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರ ಮತ್ತು ಹಸ್ತಸಾಮುದ್ರಿಕ ಶಾಸ್ತ್ರವೂ ಒಂದು. ಸಂಖ್ಯೆಗಳು ನಮ್ಮ ಜೀವನದ ಎಲ್ಲ ವಿಷಯಗಳೊಂದಿಗೆ ಆಳವಾದ ಸಂಬಂಧವನ್ನು ಹೊಂದಿವೆ. ಅಲ್ಲದೆ, ಈ ಸಂಖ್ಯೆಗಳು ನೈಸರ್ಗಿಕವಾಗಿ ವಿಶ್ವದಲ್ಲಿ ವಿಶಿಷ್ಟ ಶಕ್ತಿಯನ್ನು ಹೊಂದಿದ್ದು, ಯಾರನ್ನಾದರೂ ಮೇಲಕ್ಕೇರಿಸಬಹುದು ಮತ್ತು ಕೆಳಗಿಳಿಸಬಹುದು.

ಅಂದಹಾಗೆ ಸಂಖ್ಯಾಶಾಸ್ತ್ರವು ವ್ಯಕ್ತಿಯ ಹೆಸರು, ಆತನ ಹುಟ್ಟಿದ ದಿನಾಂಕ, ತಿಂಗಳು, ವರ್ಷದ ಆಧಾರದ ಮೇಲೆ ಅವರ ಭವಿಷ್ಯದ ಜೀವನ ಹೇಗಿರುತ್ತದೆ ಎಂದು ಊಹಿಸುವ ವಿಜ್ಞಾನವಾಗಿದೆ. ಈ ಸಂಖ್ಯಾಶಾಸ್ತ್ರವನ್ನು ರಾಡಿಕ್ಸ್ ಸಂಖ್ಯೆಗಳ ಆಧಾರದ ಮೇಲೆ ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಮೊತ್ತವನ್ನು ರಾಡಿಕ್ಸ್ ಸಂಖ್ಯೆ ಅಥವಾ ಮೂಲಾಂಕ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಒಬ್ಬ 24ನೇ ತಾರೀಖಿನಂದು ಜನಿಸಿದರೆ ಆತನ ರಾಡಿಕ್ಸ್​ ಸಂಖ್ಯೆ 2+4= 6 ಆಗಿರುತ್ತದೆ.

ರಾಶಿಗಳಂತೆ ರಾಡಿಕ್ಸ್​ ಸಂಖ್ಯೆಗಳು ಕೂಡ ಗ್ರಹಗಳೊಂದಿಗೆ ಸಂಬಂಧ ಹೊಂದಿವೆ. ಸಂಖ್ಯಾಶಾಸ್ತ್ರದಲ್ಲಿ 01 ರಿಂದ 09ರವರೆಗಿನ ಸಂಖ್ಯೆಗಳನ್ನು ರಾಡಿಕ್ಸ್ ಸಂಖ್ಯೆಗಳು ಎಂದು ಹೇಳಲಾಗುತ್ತದೆ. ಈ ಒಂಬತ್ತು ರಾಡಿಕ್ಸ್ ಸಂಖ್ಯೆಗಳು ಕೂಡ ನವಗ್ರಹಗಳಲ್ಲಿ ಒಂದೊಂದು ಗ್ರಹಗಳಿಗೆ ಸೀಮಿತವಾಗಿವೆ.

ಅದೇ ರೀತಿ ಕೆಲವು ದಿನಾಂಕಗಳಲ್ಲಿ ಜನಿಸಿದ ಮಹಿಳೆಯರು ನಂಬಲಾಗದಷ್ಟು ಪ್ರತಿಭಾನ್ವಿತರು ಮತ್ತು ಮಾನಸಿಕವಾಗಿ ಬಲಶಾಲಿಗಳಾಗಿರುತ್ತಾರೆ. ಅಲ್ಲದೆ, ಅವರನ್ನು ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲವಂತೆ! ಹಾಗಾದ್ರೆ ಅಂತಹ ಮಹಿಳೆಯರು ಯಾವ ದಿನಾಂಕಗಳಲ್ಲಿ ಜನಿಸುತ್ತಾರೆ ಅನ್ನೋದನ್ನ ನಾವೀಗ ತಿಳಿದುಕೊಳ್ಳೋಣ.

ಸಂಖ್ಯೆ 1

ಯಾವುದೇ ತಿಂಗಳ 1, 10, 19, ಅಥವಾ 28 ರಂದು ಜನಿಸಿದ ಮಹಿಳೆಯರು ತಮ್ಮ ಮಾನಸಿಕ ಶಕ್ತಿಗೆ ಹೆಸರುವಾಸಿಯಾಗಿರುತ್ತಾರೆ. ಅವರು ಸೂರ್ಯನ ಪ್ರಭಾವದಡಿಯಲ್ಲಿ ಜನಿಸಿರುವುದರಿಂದ, ತುಂಬಾ ಧೈರ್ಯಶಾಲಿಗಳಾಗಿದ್ದು, ಯಾರೂ ಅವರನ್ನು ಸೋಲಿಸಲು ಸಾಧ್ಯವಿಲ್ಲ. ಅವರು ಅಸಾಧಾರಣ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಭವಿಷ್ಯದಲ್ಲಿ ಏನಾಗುತ್ತದೆ ಎಂದು ಊಹಿಸುವ ಸಾಮರ್ಥ್ಯವನ್ನು ಅವರು ಹೊಂದಿರುತ್ತಾರೆ. ಅವರು ಎಲ್ಲಿದ್ದರೂ ಪ್ರಾಬಲ್ಯ ಸಾಧಿಸುವ ಬಲವಾದ ಬಯಕೆಯನ್ನು ಹೊಂದಿರುತ್ತಾರೆ.

ಸಂಖ್ಯೆ 4

ಯಾವುದೇ ತಿಂಗಳಲ್ಲಿ 4, 13, 22 ಮತ್ತು 31 ನೇ ತಾರೀಖಿನಂದು ಜನಿಸಿದ ಮಹಿಳೆಯರು ತಮ್ಮ ಮಾನಸಿಕ ಶಕ್ತಿಗೆ ಹೆಸರುವಾಸಿಯಾಗಿದ್ದಾರೆ. ಅವರು ಕಠಿಣ ಸಂದರ್ಭಗಳನ್ನು ಸ್ಪಷ್ಟವಾಗಿ ಮತ್ತು ಶಾಂತವಾಗಿ ನಿಭಾಯಿಸುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ದಿನಾಂಕಗಳಲ್ಲಿ ಜನಿಸಿದ ಮಹಿಳೆಯರು ಅದ್ಭುತ ಹಣಕಾಸು ನಿರ್ವಹಣಾ ಕೌಶಲ್ಯವನ್ನು ಹೊಂದಿರುತ್ತಾರೆ. ಅವರು ತಮ್ಮಲ್ಲಿರುವ ಹಣವನ್ನು ಹೇಗೆ ದ್ವಿಗುಣಗೊಳಿಸಬೇಕೆಂದು ನಿಖರವಾಗಿ ತಿಳಿದಿರುತ್ತಾರೆ. ಅಲ್ಲದೆ, ಅವರ ಸಮತೋಲಿತ ಸ್ವಭಾವವು ಅವರನ್ನು ತುಂಬಾ ಪ್ರತಿಭಾನ್ವಿತರನ್ನಾಗಿ ಮಾಡುತ್ತದೆ. ಇತರರು ಅವರನ್ನು ಸೋಲಿಸಲು ಸಾಧ್ಯವೇ ಇಲ್ಲ.

ಸಂಖ್ಯೆ 8

ಯಾವುದೇ ತಿಂಗಳ 8, 17 ಮತ್ತು 26ನೇ ತಾರೀಖಿನಂದು ಜನಿಸಿದ ಮಹಿಳೆಯರು ಸ್ವಾಭಾವಿಕವಾಗಿಯೇ ತಮ್ಮ ನ್ಯಾಯ, ಪ್ರಾಮಾಣಿಕತೆ ಮತ್ತು ಅಚಲವಾದ ಆತ್ಮವಿಶ್ವಾಸಕ್ಕೆ ಹೆಸರುವಾಸಿಯಾಗಿರುತ್ತಾರೆ. ಅವರು ತಮ್ಮ ಆಸೆಗಳನ್ನು ಸಂಪೂರ್ಣವಾಗಿ ಸಾಕಾರಗೊಳಿಸಲು ಯಾವಾಗಲೂ ಯಾವುದೇ ಹಂತಕ್ಕೆ ಹೋಗುತ್ತಾರೆ. ಅವರು ತಮ್ಮ ಸ್ವಂತ ಜೀವನವನ್ನು ಮಾತ್ರವಲ್ಲದೆ ತಮ್ಮ ಸುತ್ತಮುತ್ತಲಿನವರ ಜೀವನವನ್ನು ಸಹ ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ಅವರನ್ನು ಸೋಲಿಸುವುದು ಅಸಾಧ್ಯ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.