Numerology : ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಸಂಖ್ಯೆಗಳು ನಮ್ಮ ಜೀವನದ ಎಲ್ಲ ವಿಷಯಗಳೊಂದಿಗೆ ಆಳವಾದ ಸಂಬಂಧವನ್ನು ಹೊಂದಿವೆ. ಅಲ್ಲದೆ, ಈ ಸಂಖ್ಯೆಗಳು ನೈಸರ್ಗಿಕವಾಗಿ ವಿಶ್ವದಲ್ಲಿ ವಿಶಿಷ್ಟ ಶಕ್ತಿಯನ್ನು ಹೊಂದಿದ್ದು, ಯಾರನ್ನಾದರೂ ಮೇಲಕ್ಕೇರಿಸಬಹುದು ಮತ್ತು ಕೆಳಗಿಳಿಸಬಹುದು.
ಅಂದಹಾಗೆ ಸಂಖ್ಯಾಶಾಸ್ತ್ರವು ವ್ಯಕ್ತಿಯ ಹೆಸರು, ಆತನ ಹುಟ್ಟಿದ ದಿನಾಂಕ, ತಿಂಗಳು, ವರ್ಷದ ಆಧಾರದ ಮೇಲೆ ಅವರ ಭವಿಷ್ಯದ ಜೀವನ ಹೇಗಿರುತ್ತದೆ ಎಂದು ಊಹಿಸುವ ವಿಜ್ಞಾನವಾಗಿದೆ. ಈ ಸಂಖ್ಯಾಶಾಸ್ತ್ರವನ್ನು ರಾಡಿಕ್ಸ್ ಸಂಖ್ಯೆಗಳ ಆಧಾರದ ಮೇಲೆ ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಮೊತ್ತವನ್ನು ರಾಡಿಕ್ಸ್ ಸಂಖ್ಯೆ ಅಥವಾ ಮೂಲಾಂಕ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಒಬ್ಬ 24ನೇ ತಾರೀಖಿನಂದು ಜನಿಸಿದರೆ ಆತನ ರಾಡಿಕ್ಸ್ ಸಂಖ್ಯೆ 2+4= 6 ಆಗಿರುತ್ತದೆ.
ರಾಶಿಗಳಂತೆ ರಾಡಿಕ್ಸ್ ಸಂಖ್ಯೆಗಳು ಕೂಡ ಗ್ರಹಗಳೊಂದಿಗೆ ಸಂಬಂಧ ಹೊಂದಿವೆ. ಸಂಖ್ಯಾಶಾಸ್ತ್ರದಲ್ಲಿ 01 ರಿಂದ 09ರವರೆಗಿನ ಸಂಖ್ಯೆಗಳನ್ನು ರಾಡಿಕ್ಸ್ ಸಂಖ್ಯೆಗಳು ಎಂದು ಹೇಳಲಾಗುತ್ತದೆ. ಈ ಒಂಬತ್ತು ರಾಡಿಕ್ಸ್ ಸಂಖ್ಯೆಗಳು ಕೂಡ ನವಗ್ರಹಗಳಲ್ಲಿ ಒಂದೊಂದು ಗ್ರಹಗಳಿಗೆ ಸೀಮಿತವಾಗಿವೆ.
ಅಂದಹಾಗೆ, ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ದಿನಾಂಕಗಳಲ್ಲಿ ಜನಿಸಿದ ಮಹಿಳೆಯರೊಂದಿಗೆ ಡೇಟಿಂಗ್ ಮಾಡುವಾಗ ತುಂಬಾ ಎಚ್ಚರದಿಂದ ಇರಬೇಕಂತೆ. ಈ ಮಹಿಳೆಯರು ತಮಗೆ ತೊಂದರೆ ಮಾಡುವವರನ್ನು ಕಂಡರೆ ಸಹಿಸುವುದಿಲ್ಲ. ಅದರಲ್ಲೂ ತಮ್ಮ ಆತ್ಮ ಗೌರವಕ್ಕೆ ಧಕ್ಕೆಯಾದರೆ ತಿರುಗಿ ಬೀಳುತ್ತಾರೆ. ತೊಂದರೆ ಮಾಡಿದವರಿಗೆ ತೊಂದರೆ ಕೊಡದೆ ಬಿಡುವುದಿಲ್ಲ. ನಂಬಿಕೆ ದ್ರೋಹವಾದರೆ ಅವರ ಆಕ್ರೋಶದ ಕಟ್ಟೆ ಹೊಡೆಯುತ್ತದೆ. ಅಂತಹ ಮಹಿಳೆಯರು ಯಾವ ದಿನಾಂಕದಂದು ಜನಿಸುತ್ತಾರೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ರಾಡಿಕ್ಸ್ ಸಂಖ್ಯೆ 1ರಲ್ಲಿ ಜನಿಸಿದ ಮಹಿಳೆಯರು ತಮ್ಮ ನಾಯಕತ್ವದ ಗುಣಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಸೂರ್ಯನಿಂದ ಆಳಲ್ಪಡುತ್ತಾರೆ ಮತ್ತು ತಮ್ಮ ವೃತ್ತಿಯಲ್ಲಿ ಉನ್ನತ ಸ್ಥಾನದಲ್ಲಿರುತ್ತಾರೆ. ಅವರು ವಿಶಿಷ್ಟ ಸೃಜನಶೀಲತೆ ಮತ್ತು ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ. ಅವರು ಹೆಚ್ಚು ಸವಾಲಿನ ಕೆಲಸಗಳನ್ನು ಮಾಡುತ್ತಾರೆ. ಅವರು ಎಷ್ಟೇ ಕಷ್ಟಕರವಾಗಿದ್ದರೂ ಅದನ್ನು ಧೈರ್ಯದಿಂದ ಮಾಡುತ್ತಾರೆ. ಅವರು ತಮ್ಮ ವೃತ್ತಿಪರ ಜೀವನ, ಕೆಲಸದ ಸ್ಥಳ ಮತ್ತು ಕುಟುಂಬ ಜೀವನದಲ್ಲಿ ನಾಯಕತ್ವದ ಪಾತ್ರಗಳನ್ನು ವಹಿಸಿಕೊಳ್ಳುತ್ತಾರೆ. ಅವರು ತಮ್ಮ ಅಗತ್ಯಗಳಿಗಾಗಿ ಮಾತ್ರ ಹಣವನ್ನು ಖರ್ಚು ಮಾಡುತ್ತಾರೆ. ಅವರು ತಮ್ಮ ಅಗತ್ಯಗಳಿಗಾಗಿ ಇತರರಿಂದ ಸಹಾಯವನ್ನು ಪಡೆಯುವುದಿಲ್ಲ. ನೋಡಲು ಅಹಂಕಾರಿಗಳಂತೆ ಕಾಣುತ್ತಾರೆ. ಯಾವುದೇ ಕ್ಷಣದಲ್ಲೂ ಸಡನ್ ಆಗಿ ಕೋಪ ಮಾಡಿಕೊಳ್ಳುವ ಪ್ರವೃತ್ತಿ ಹೊಂದಿರುತ್ತಾರೆ. ಹೀಗಾಗಿ ಇವರೊಂದಿಗೆ ಇರುವಾಗ ಕೊಂಚ ಎಚ್ಚರಿಕೆ ಇದ ಇರಬೇಕು.
ಯಾವುದೇ ತಿಂಗಳ 3, 12, 21 ಮತ್ತು 30 ನೇ ತಾರೀಖಿನಂದು ಜನಿಸಿದ ಮಹಿಳೆಯರಿಗೆ ಗುರುವಿನ ದೃಷ್ಟಿ ಇರುತ್ತದೆ. ಅವರು ಅತ್ಯಂತ ಬುದ್ಧಿವಂತರು ಮತ್ತು ಅವರಿಗೆ ವಹಿಸಿಕೊಟ್ಟ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. 3ನೇ ರಾಡಿಕ್ಸ್ ಸಂಖ್ಯೆ ಹೊಂದಿರುವ ವ್ಯಕ್ತಿಯ ಗುರುವಿನ ಪ್ರಾಬಲ್ಯ ಅವರಲ್ಲಿರುವುದರಿಂದ, ಅವರು ವ್ಯಕ್ತಿತ್ವ, ಖ್ಯಾತಿ ಮತ್ತು ಪ್ರಭಾವವನ್ನು ಪಡೆಯುತ್ತಾರೆ. ಅವರು ಸಮಾಜದಲ್ಲಿ ಖ್ಯಾತಿ, ಪ್ರಭಾವ ಮತ್ತು ಗೌರವದಿಂದ ಬದುಕುತ್ತಾರೆ. ಅವರು ತಮ್ಮ ಕಾರ್ಯಗಳಲ್ಲಿ ಪ್ರಾಮಾಣಿಕರು ಮತ್ತು ಶಾಂತವಾಗಿರುತ್ತಾರೆ. ಈ ಸಂಖ್ಯೆಯಲ್ಲಿ ಜನಿಸಿದ ಮಹಿಳೆಯರು, ಅವರು ಏನೇ ಮುಟ್ಟಿದರೂ ಯಶಸ್ವಿಯಾಗುತ್ತಾರೆ. ಅವರ ವ್ಯಕ್ತಿತ್ವದ ಗುಣಲಕ್ಷಣಗಳಿಂದಾಗಿ, ಅವರು ಇತರರನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರಿಗೆ ಕುಟುಂಬ ಮತ್ತು ಸ್ನೇಹಿತರ ಬೆಂಬಲವಿರುತ್ತದೆ. ಅವರು ತಮ್ಮ ಸುತ್ತಮುತ್ತಲಿನವರ ಬೆಂಬಲದೊಂದಿಗೆ ಸಹ ತಮ್ಮ ಸ್ವಂತ ಕಾಲಿನ ಮೇಲೆ ಸಾಧಿಸುತ್ತಾರೆ. ಆದರೆ, ತಮ್ಮ ನಂಬಿಕೆ ದ್ರೋಹವಾದರೆ, ಅಷ್ಟೇ ಬೇಗೆ ಕೋಪಗೊಳ್ಳುತ್ತಾರೆ. ಇವರೊಂದಿಗೆ ಡೇಟಿಂಗ್ ಮಾಡುವಾಗ ತುಂಬಾ ಎಚ್ಚರವಾಗಿರಬೇಕು ಏನೇ ತಪ್ಪು ಮಾಡಿದರು ಅದರಿಂದ ತೊಂದರೆಯೇ ಹೆಚ್ಚು.
ಯಾವುದೇ ತಿಂಗಳ 7, 16 ಮತ್ತು 25 ನೇ ತಾರೀಖಿನಂದು ಜನಿಸಿದ ಮಹಿಳೆಯರಲ್ಲಿ ಕೇತು ಪ್ರಾಬಲ್ಯ ಹೊಂದಿರುತ್ತಾರೆ. ಅವರು ಅನಿರೀಕ್ಷಿತ ಕೆಲಸಗಳನ್ನು ಮಾಡಬಹುದು. ಅವರ ತಮಾಷೆಯ ಸ್ವಭಾವವು ಅವರನ್ನು ಇತರರಿಂದ ಪ್ರತ್ಯೇಕಿಸುತ್ತದೆ. ಅವರು ಇತರರ ಗಮನವನ್ನು ಸೆಳೆಯಲು ಬಯಸುತ್ತಾರೆ. ಅವರ ವಿಶ್ಲೇಷಣಾತ್ಮಕ ಮತ್ತು ಚಿಂತನಾ ಕೌಶಲ್ಯವು ಅವರನ್ನು ನಾಯಕತ್ವದ ಪ್ರಯಾಣದತ್ತ ಕೊಂಡೊಯ್ಯುತ್ತದೆ. ಅವರು ಅಡೆತಡೆಗಳನ್ನು ಮುರಿಯಲು ಬಯಸುತ್ತಾರೆ ಮತ್ತು ಇತರರಿಂದ ಸಹಾಯಕ್ಕಾಗಿ ಕಾಯುವುದಿಲ್ಲ. ಅವರು ಹೆಚ್ಚಾಗಿ ಏಕಾಂಗಿಯಾಗಿ ಕೆಲಸ ಮಾಡಲು ಬಯಸುತ್ತಾರೆ. ಯಶಸ್ಸು ಅಥವಾ ವೈಫಲ್ಯವನ್ನು ತಮ್ಮದೇ ಆದ ಪ್ರಯತ್ನದಿಂದ ಸಾಧಿಸಬೇಕು ಎಂದು ಅವರು ಹೆಮ್ಮೆಪಡುತ್ತಾರೆ. ಯಾವುದೇ ವಿಷಯವನ್ನು ತೆಗೆದುಕೊಳ್ಳುವ ಮೊದಲು, ಪರಿಣಾಮಗಳು ಏನಾಗುತ್ತವೆ ಎಂಬುದನ್ನು ಅವರು ಪರಿಗಣಿಸುತ್ತಾರೆ. ಅವರು ಸಂಶೋಧನೆಯ ಗುಣಮಟ್ಟವನ್ನು ಹೊಂದಿದ್ದಾರೆ. ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸುವ ಇಂತಹ ಜನರೊಂದಿಗೆ ಡೇಟಿಂಗ್ ಮಾಡುವಾಗ ತುಂಬಾ ಎಚ್ಚರದಿಂದ ಇರಬೇಕು. ಅವರಿಗೆ ತಪ್ಪೆನಿಸಿದರು ಅದನ್ನು ನೇರವಾಗಿಯೇ ಪ್ರಶ್ನೆ ಮಾಡುವ ಸ್ವಭಾವ ಹೊಂದಿರುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.