ಬೆಂಗಳೂರು: ಅಮ್ತಮನಿಗೆ ತವರಿಗೆ ಬರಬೇಕೆಂಬ ಆಸೆಯಿತ್ತು. ಹೀಗಾಗಿಯೇ ಅವರನ್ನು ಕುಂದಾಪುರಕ್ಕೆ ಕರೆತಂದೆ. ಇದು ನನಗೆ ತುಂಬಾ ಸಂತೋಷವಾಯಿತು. ಅಮ್ಮನ ಆಸೆ ಈಡೇರಿಸಿದ ಸಂತೃಪ್ತಿಯೂ ಇದೆ ಎಂದು ಟಾಲಿವುಡ್ ಖ್ಯಾತ ನಟ ಜೂ.ಎನ್‌ಟಿಆರ್ ತಿಳಿಸಿದರು.
ಇದನ್ನೂ ಓದಿ: ಉಡುಪಿ ಶ್ರೀ ಕೃಷ್ಣ ಮಠಕ್ಕೆ ಸ್ಟಾರ್ ನಟರ ಭೇಟಿ: ಜೂ. ಎನ್‌ಟಿಆರ್ ಅಮ್ಮನ ಆರ್ಶಿವಾದ ಪಡೆದ ರಿಷಭ್ ಶೆಟ್ಟಿ
ಪ್ರಶಾಂತ್ ನೀಲ್ ಮತ್ತು ರಿಷಬ್ ಶೆಟ್ಟಿ ಜತೆ ಜೂ.ಎನ್ ಟಿಆರ್ ಶ್ರಾವಣ ಶನಿವಾರದ ಪ್ರಯುಕ್ತ ತಮ್ಮ ತಾಯಿ ನಂದಮೂರಿ ಶಾಲಿನಿ ಅವರ ತವರು ಕುಂದಾಪುರಕ್ಕೆ ಬಂದಿದ್ದರು. ಅಮ್ಮನನ್ನು ಈ ರೀತಿ ಮನೆಗೆ ಕರೆದೊಯ್ದಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಅವರನ್ನು ಹೀಗೆಯೇ ಮನೆಗೆ ಕರೆತರಬೇಕೆಂಬುದು ಅವರ ಬಹುದಿನದ ಆಸೆಯಾಗಿತ್ತು. ಇದರ ಜೊತೆಗೆ ತಾಯಿಯನ್ನು ಉಡಿಯಲ್ಲಿಟ್ಟು ಶ್ರೀಕೃಷ್ಣ ಮಠಕ್ಕೆ ಕರೆದೊಯ್ದಿರುವುದು ಇನ್ನಷ್ಟು ಖುಷಿ ತಂದಿದೆ ಎಂದು ಜೂ.ಎನ್ ಟಿಆರ್ ಟ್ವೀಟ್ ಮಾಡಿದ್ದಾರೆ.
ಸೆಪ್ಟೆಂಬರ್ 2 ರಂದು ನನ್ನ ತಾಯಿಯ ಹುಟ್ಟುಹಬ್ಬ. ಹೀಗಾಗಿ ಅವರ ಹುಟ್ಟುಹಬ್ಬಕ್ಕಿಂತ ಮುಂಚೆ ಅವರನ್ನು ಇಲ್ಲಿಗೆ ಕರೆದೊಯ್ಯುವುದಕ್ಕಿಂತ ದೊಡ್ಡ ಉಡುಗೊರೆ ಇನ್ನೊಂದಿಲ್ಲ ಎಂದು ಹೇಳಿದ್ದಾರೆ.
ಎನ್ ಟಿಆರ್ ತಾಯಿ ಕನ್ನಡತಿ. ಎನ್ ಟಿಆರ್ ನಮಗೆ ಅಣ್ಣನಿದ್ದಂತೆ ಎಂದು ರಿಷಬ್ ಶೆಟ್ಟಿ ಹಿಂದಿನ ಸಂದರ್ಶನಗಳಲ್ಲಿ ಹಲವು ಬಾರಿ ಹೇಳಿರುವುದು ಗೊತ್ತೇ ಇದೆ. ನಿರ್ಮಾಪಕ ವಿಜಯ್ ಕಿರಗಂದೂರು ಸಹ ಸಾಥ್ ಕೊಟ್ಟಿದ್ದರು.
ಎನ್‌ಟಿಆರ್ ಸದ್ಯ ದೇವರ ಸಿನಿಮಾದಲ್ಲಿ ನಟಿಸುತ್ತಿದ್ದು, ಸೆಪ್ಟೆಂಬರ್ 27ಕ್ಕೆ ಮೊದಲ ಭಾಗ ಬರಲಿದೆ.