ನ್ಯೂಸ್

ಮಹಿಳೆಯೊಬ್ಬರು 2 ಬಾರಿ ಮತ ಚಲಾಯಿಸಿದ್ದಾರೆ ಎಂಬ ಹೇಳಿಕೆ; ರಾಹುಲ್ ಗಾಂಧಿಗೆ ಇಸಿ ನೋಟಿಸ್| EC Notice

EC Notice: ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಕರ್ನಾಟಕ ಮುಖ್ಯ ಚುನಾವಣಾ ಆಯುಕ್ತರು ನೋಟಿಸ್ ನೀಡಿದ್ದಾರೆ. ಮಹಿಳೆಯೊಬ್ಬರು ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ಗುರುವಾರ (ಆಗಸ್ಟ್ 7) ಸುದ್ದಿಗೋಷ್ಠಿ ನಡೆಸಿದ್ದ ವೇಳೆ ಮಾಡಿದ್ದ ಆರೋಪದ ದಾಖಲೆ ನೀಡುವಂತೆ ಹೇಳಿದ್ದಾರೆ.

ಭಾನುವಾರ(ಆಗಸ್ಟ್ ) ನೋಟಿಸ್ ಹೊರಡಿಸಿರುವ ಆಯುಕ್ತರು, ನೀವು ಆರೋಪಿಸಿದ ಮಹಿಳೆ ವಿರುದ್ಧ ನಮ್ಮ ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಪುರಾವೆಗಳು ಕಂಡು ಬಂದಿಲ್ಲ. ವಿವರವಾದ ತನಿಖೆ ಮಾಡಲು ನಿಮ್ಮ ಬಳಿ ಇರುವ ದಾಖಲೆಗಳನ್ನು ಸಲ್ಲಿಸುವಂತೆ ಮನವಿ ಮನವಿ ಮಾಡಿದ್ದಾರೆ.

ಮತದಾನ ಅಧಿಕಾರಿ ನೀಡಿದ ದಾಖಲೆಗಳ ಪ್ರಕಾರ, ಶ್ರೀಮತಿ ಶಕುನ್ ರಾಣಿ ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ನೀವು ಹೇಳಿದ್ದೀರಿ. ಆದರೆ ನಮ್ಮ ಕಚೇರಿ ನಡೆಸಿದ ವಿಚಾರಣೆಯಲ್ಲಿ ನೀವು ಹೇಳಿದಂತೆ ಶಕುನ್ ರಾಣಿ 2 ಬಾರಿ ಮತ ಚಲಾಯಿಸಿಲ್ಲ, ಒಮ್ಮೆ ಮಾತ್ರ ಚಲಾಯಿಸಿದ್ದಾರೆ. ನೀವು ತೋರಿಸಿದ ಗುರುತು ಮಾಡಿದ ದಾಖಲೆಯನ್ನು ಚುನಾವಣಾ ಅಧಿಕಾರಿ ನೀಡಿಲ್ಲ. ನೀವು 2 ಬಾರಿ ಮತ ಚಲಾಯಿಸಿದ್ದಾರೆ ಎಂದು ತೀರ್ಮಾನಿಸಿದ ಸಂಬಂಧಿತ ದಾಖಲೆಗಳನ್ನು ನೀಡುವಂತೆ ನೋಟಿಸ್​ನಲ್ಲಿ ಕೋರಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದೇನು?

ದೇಶದ ಚುನಾವಣೆಗಳಲ್ಲಿ ಮತಗಳನ್ನು ಕದಿಯಲಾಗುತ್ತಿದೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿ, ಆಗಸ್ಟ್ 7ರಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪಿಪಿಟಿ ಮೂಲಕ ತಮ್ಮ ಆರೋಪಕ್ಕೆ ಪೂರಕವಾದ ದಾಖಲೆಗಳನ್ನು ಬಿಡುಗಡೆ ಮಾಡಿದರು. ಅದೇ ರೀತಿ ಸಂಜೆ ಇಂಡಿಯಾ ಮೈತ್ರಿಕೂಟದ ಡಿನ್ನರ್ ಸಭೆಯಲ್ಲೂ ಈ ಕುರಿತು ರಾಹುಲ್ ಗಾಂಧಿ ಹೇಳಿದ್ದರು.

2024ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅಕ್ರಮ ನಡೆದಿದ್ದು, ಬೆಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಮತಗಳ್ಳನ ನಡೆದಿದೆ. ನಮ್ಮ ಸಂಶೋಧನೆ ಪ್ರಕಾರ 6 ರೀತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು. ಡುಪ್ಲಿಕೇಟ್ ಮತದಾರರು, ಒಬ್ಬನೇ ಮತದಾರರ ಹಲವು ರಾಜ್ಯಗಳಲ್ಲಿ ಮತ ಚಲಾಯಿಸುವುದು, ನಕಲಿ ಮನೆ ವಿಳಾಸಗಳು, ಒಂದೇ ಮನೆಯಲ್ಲಿ 80, 150 ಮತದಾರರು, ಮತದಾರರ ಪಟ್ಟಿಯಲ್ಲಿ ಮತದಾರರ ಫೋಟೋ ಇಲ್ಲದಿರುವುದು, ಫಾರ್ಮ್ 6ರ ದುರುಪಯೋಗವನ್ನು ಬಿಡುಗಡೆ ಮಾಡಿದ್ದರು.

ಇದೇ ವೇಳೆ ಶಕುನ್ ರಾಣಿ ಎಂಬ ಮಹಿಳೆ ಎರಡು ಬೂತ್​ಗಳಲ್ಲಿ ಮತ ಚಲಾಯಿಸಿದ್ದಾರೆ ಎಂದು ಆರೋಪಿಸಿದ್ದ ಅವರು, ಅದಕ್ಕೆ ಸಂಬಂಧಪಟ್ಟ ಚುನಾವಣಾ ಅಧಿಕಾರಿ ಟಿಕ್ ಮಾಡಿದ್ದ ದಾಖಲೆಯನ್ನು ಬಿಡುಗಡೆ ಮಾಡಿದ್ದರು.

ಆಡಳಿತರೂಢ ಬಿಜೆಪಿಯೊಂದಿಗೆ ಶಾಮೀಲಾಗಿದೆ ಆಯೋಗ, ವಿಧಾನಸಭೆ ಚುನಾವಣೆಗೆ ನೃತ್ಯ ಸಂಯೋಜನೆಯ ವೇಳೆಪಟ್ಟಿ ರಚಿಸುತ್ತದೆ ಎಂದು ಆರೋಪಿಸಿದ್ದ ಅವರು, ಆಯೋಗಕ್ಕೆ ಡಿಜಿಟಲ್ ಮತದಾರರ ಪಟ್ಟಿ ಒದಗಿಸಲು ನಿರಾಕರಿಸಿದೆ ಎಂದು ಹೇಳಿದ್ದರು. (ಏಜೆನ್ಸೀಸ್)