AAIB Report: ಏರ್ ಇಂಡಿಯಾ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಹೊರಬಿದ್ದ ಪ್ರಾಥಮಿಕ ವರದಿಗೆ ಮೃತ ಸಂಕೇತ್ ಗೋಸ್ವಾಮಿ (19) ತಂದೆ ಖಂಡಿಸಿದ್ದಾರೆ. ವಿಮಾನಯಾನ ಸಂಸ್ಥೆ ನಡೆಸಿ, ಕೇಂದ್ರಕ್ಕೆ ಸಲ್ಲಿಸಿರುವ ತನಿಖಾ ವರದಿ ಕಿಂಚಿತ್ತು ಒಪ್ಪಿಗೆ ತಂದಿಲ್ಲ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ಅದೊಂದೇ ಕಾರಣಕ್ಕೆ ಮಲಯಾಳಂ ಚಿತ್ರಗಳಲ್ಲಿ ನಟಿಸಿಲ್ಲ! ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಮನದಾಳ | Shilpa Shetty
ಏರ್ ಇಂಡಿಯಾ AI171 ವಿಮಾನ ದುರಂತದಲ್ಲಿ ಸಾವಿಗೀಡಾದ 241 ಪ್ರಯಾಣಿಕರ ಪೈಕಿ ಸಂಕೇತ್ ಕೂಡ ಒಬ್ಬ. ಲಂಡನ್ನಲ್ಲಿ ಮೂರು ವರ್ಷಗಳ ಪದವಿ ಮುಗಿಸಲು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ ಸಂಕೇತ್, ಅಪಘಾತದಲ್ಲಿ ಮೃತಪಟ್ಟ. ಅಪಘಾತದ ಹಿಂದಿರುವ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಮುಂದಾದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಇತ್ತೀಚೆಗಷ್ಟೇ ಪ್ರಾಥಮಿಕ ವರದಿಯನ್ನು ಸಾರ್ವಜನಿಕರ ಎದುರು ಬಹಿರಂಗಪಡಿಸಿತು. ಇದನ್ನು ನೋಡಿದ ಸಂಕೇತ್ ತಂದೆ, ವರದಿ ನನಗೆ ತೃಪ್ತಿ ತಂದಿಲ್ಲ. ಸರ್ಕಾರ ಸಂಪೂರ್ಣ ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಮಗ ಸಂಕೇತ್ನನ್ನು ನೆನೆದು ಭಾವುಕರಾಗಿ ಮಾತನಾಡಿದ ಅತುಲ್ ಗೋಸ್ವಾಮಿ, "ನನ್ನ ಮಗನಿಗೆ 19 ವರ್ಷ ವಯಸ್ಸಾಗಿತ್ತು. ನನ್ನ ಕುಟುಂಬ ಕಠಿಣ ಪರಿಸ್ಥಿತಿಯಲ್ಲಿ ಬದುಕುತ್ತಿದೆ. ನನ್ನ ಮಗನ ಮೇಲೆ ನಾವೆಲ್ಲ ಬಹಳಷ್ಟು ಅವಲಂಬಿಸಿದ್ದೆವು. ಅವನು ಪದವಿ ಪಡೆಯಲು 3 ವರ್ಷಗಳ ಕಾಲ ಲಂಡನ್‌ಗೆ ಹೋಗುತ್ತಿದ್ದ. ಆದರೆ, ಅಷ್ಟರೊಳಗೆ ದುರಂತ ಸಂಭವಿಸಿತು. ಈ ವರದಿಯಿಂದ ನಮಗೆ ತೃಪ್ತಿಯಿಲ್ಲ. ಸರ್ಕಾರವು ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ಕೋರುತ್ತೇವೆ" ಎಂದಿದ್ದಾರೆ,(ಏಜೆನ್ಸೀಸ್).