ಜೈಪುರ: ಆಸ್ಪತ್ರೆಯಲ್ಲಿ ವೀಲ್ ಚೇರ್ ಸಿಗದ ಕಾರಣ ವ್ಯಕ್ತಿಯೋರ್ವ ತನ್ನ ಮಗನನ್ನು ಸ್ಕೂಟರ್ನಲ್ಲಿ ಚಿಕಿತ್ಸೆಗೆ ಕರೆದುಕೊಂಡು ಹೋಗಿರುವ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ನಡೆದಿದೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆಯೂ ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆಯಾ ಎಂಬುದರ ಕುರಿತು ದೊರೆತ್ತಿಲ್ಲ.
ವೈರಲ್ ಆಗಿರುವ ವಿಡಿಯೋದಲ್ಲಿ ಕಾಲು ಮುರಿದುಕೊಂಡಿರುವ ಮಗನನ್ನು ಆತನ ತಂದೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಲು ಆಸ್ಪತ್ರೆಯವರ ಬಳಿ ವೀಲ್ ಚೇರ್ ಕೇಳಿದ್ದಾರೆ. ಇದಕ್ಕೆ ಸಿಬ್ಬಂದಿ ವೀಲ್ ಚೇರ್ ಇಲ್ಲ ಎಂದು ಹೇಳಲಾಗದೆ ಸಬೂಬು ಹೇಳಿ ತಪ್ಪಿಸಿಕೊಂಡಿದ್ಧಾರೆ.
ತುಂಬಾ ಹೊತ್ತು ಕಳೆದರೂ ವೀಲ್ ಚೇರ್ ದರೆಯದೆ ಇರುವ ಕಾರಣ ಸಿಟ್ಟಿಗೆದ್ದ ವ್ಯಕ್ತಿ ಆಸ್ಪತ್ರೆಯೊಳಗೆ ತನ್ನ ಸ್ಕೂಟರ್ನೊಂದಿಗೆ ಆಸ್ಪತ್ರೆ ಒಳಗೆ ನುಗ್ಗಿದ್ದು ತನ್ನ ಮಗನನ್ನು ಕೂರಿಸಿಕೊಂಡು ಲಿಫ್ಟ್ ಮೂಲಕ ಮೂರನೇ ಮಹಡಿಗೆ ತೆರಳಿ ಚಿಕಿತ್ಸೆ ಕೊಡಿಸಿದ್ದಾರೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಘಟನೆಯ ಕುರಿತು ಆಸ್ಪತ್ರೆ ಸಿಬ್ಬಂದಿ ಪ್ರತಿಕ್ರಿಯಿಸಿದ್ದು, ವೀಲ್ ಚೇರ್ಗಳ ಅಭಾವ ಇದ್ದ ಕಾರಣ ಹೀಗಾಗಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ಒಬ್ಬರು ಆಸ್ಪತ್ರೆಯಲ್ಲಿ ಸೌಕರ್ಯಗಲ ಕೊರತೆ ಇದ್ದರೆ ದೇವರು ಬಂದು ಕಾಪಾಡಲು ಸಾಧ್ಯವಿಲ್ಲ. ಆ ವ್ಯಕ್ತಿ ಮಾಡಿದ ಕೆಲಸ ಸರಿ ಇದ್ದು ವೀಲ್ ಚೇರ್ ಅಭಾವ ಇದ್ದ ಕಾರಣ ಅವರು ಹೀಗೆ ಮಾಡಬೇಕಾಯಿತು ಎಂದು ವ್ಯಕ್ತಿಯ ನಡೆಯನ್ನು ಪ್ರಶಂಶಿಸಿದ್ದಾರೆ.