Pinarayi Vijayan: ಬಿಜೆಪಿಯ ಬೆದರಿಕೆಗಳು ಜಾಗತಿಕ ಅಯ್ಯಪ್ಪ ಸಂಗಮ ಆಯೋಜನೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ (ಆಗಸ್ಟ್ 27) ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ವಿಜಯನ್, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತನ್ನ 75 ನೇ ವಾರ್ಷಿಕೋತ್ಸವದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ರಾಜ್ಯ ಸರ್ಕಾರವು ಅದಕ್ಕೆ ಅಗತ್ಯವಿರುವ ಎಲ್ಲ ಅನುಕೂಲಗಳನ್ನು ನೀಡುತ್ತದೆ ಎಂದು ತಿಳಿಸಿದರು. ಶಬರಿಮಲೆ ಇಡೀ ದೇಶದಲ್ಲಿಯೇ ಮಾದರಿ ಪೂಜಾ ಸ್ಥಳವಾಗಿದ್ದು, ಎಲ್ಲಾ ಧರ್ಮ ಮತ್ತು ಜಾತಿಗಳ ಲಕ್ಷಾಂತರ ಜನರು ಅಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ, ಆದ್ದರಿಂದ ಅಂತಹ ಕಾರ್ಯಕ್ರಮ ನಡೆದಾಗ, ಪ್ರತಿಯೊಬ್ಬರೂ ಅದರಲ್ಲಿ ಭಾಗವಹಿಸಲು ಬಯಸುತ್ತಾರೆ ಎಂದರು.
ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಈ ಕಾರ್ಯಕ್ರಮವನ್ನು ಆಯೋಜಿಸಿರುವುದರಿಂದ, ಬಿಜೆಪಿ ಇದನ್ನು ನಾಟಕ ಕರೆದಿತ್ತು. ಇತ್ತ ವಿರೋಧ ಪಕ್ಷ ಕಾಂಗ್ರೆಸ್ ಈ ಕಾರ್ಯಕ್ರಮವನ್ನು ಸಿಪಿಐ(ಎಂ) 2024 ರ ಚುನಾವಣಾ ಸೋಲಿನಿಂದ ಹುಟ್ಟಿಕೊಂಡ ಬಹುಸಂಖ್ಯಾತ ಕೋಮುವಾದದ ಓಲೈಕೆ ಎಂದು ಕರೆದಿದೆ.
2026 ಏಪ್ರಿಲ್-ಮೇ ತಿಂಗಳಿನಲ್ಲಿ ಕೇರಳ ವಿಧಾನಸಭಾ ಚುನಾವಣೆಗಳು ನಡೆಯಲಿವೆ.(ಏಜೆನ್ಸೀಸ್)