Controversial: ಆಪರೇಷನ್ ಸಿಂಧೂರ ಕಾರ್ಯಚರಣೆಯಲ್ಲಿ ಭಯೋತ್ಪಾದನೆ ನಿರ್ಮೂಲನೆ ಆಗುತ್ತದೆ ಎಂದು ಭಾವಿಸಿದ್ದೇವು. ಆದರೆ, 24 ಗಂಟೆಯಲ್ಲಿ ಹಿಂದೆ ಸರಿದಿದೆ. ಇದರಿಂದ ಯಾವ ಭಯೋತ್ಪಾದಕನು ಸತ್ತಿಲ್ಲ ಎಂದು ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಆಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಂಗಳವಾರ ಮಾತನಾಡಿದ ಸ್ವಾಮಿ, ''ಪ್ರಧಾನಿ ನರೇಂದ್ರ ಮೋದಿ ಆಪರೇಷನ್ ಸಿಂಧೂರ ಅನ್ನು ಪ್ರಾರಂಭಿಸಿದರು. ದೇಶವು ಎಂದಿಗೂ ಇಲ್ಲದಷ್ಟು ಸಂತೋಷಪಟ್ಟಿತು. ಆಪರೇಷನ್ ಸಿಂಧೂರ ಮೂಲಕ ಭಯೋತ್ಪಾದನೆ ನಿರ್ಮೂಲನೆ ಆಗುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ, 24 ಗಂಟೆಗಳಲ್ಲಿ ಎಲ್ಲವೂ ಹಾಳಾಗಿ ಹೋಯಿತು. 24ಗಂಟೆಗಳಲ್ಲಿ ಹಿಂದೆ ಸರಿದರು. ಅಲ್ಲಿಗೆ ಪ್ರವೇಶಿಸಿದ ನಂತರ ಒಬ್ಬ ಭಯೋತ್ಪಾದಕನೂ ಕೊಲ್ಲಲ್ಪಟ್ಟಿಲ್ಲ'' ಎಂದು ಹೇಳಿದ್ದಾರೆ.
ಮೋದಿ ಸರ್ಕಾರ, ಸಹೋದರಿಯರನ್ನು ಗೌರವಿಸುವ ಬದಲು ಆಪರೇಷನ್ ಸಿಂಧೂರ ಹೆಸರಿನಲ್ಲಿ ಅವರನ್ನು ಅವಮಾನಿಸಿ ಮೋಸ ಮಾಡಿದೆ. ಈ ಕಾರ್ಯಾಚರಣೆಯ ಮೂಲಕ ಭಾರತೀಯ ಜನತಾ ಪಕ್ಷದ ತಂತ್ರಗಳು, ಪಾತ್ರ ಮತ್ತು ಮುಖವು ಬಹಿರಂಗವಾಯಿತು ಎಂದು ಸ್ವಾಮಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸ್ವಾಮಿ ಅವರು 'ಒಂದು ರಾಷ್ಟ್ರ ಒಂದು ಚುನಾವಣೆ' ಬಗ್ಗೆಯೂ ಟೀಕಿಸಿದರು. ಒಂದು ದೇಶ ಒಂದು ಶಿಕ್ಷಣ ಯೋಜನೆಯನ್ನು ಜಾರಿಗೆ ತರಬೇಕು ಎಂದು ಅವರು ಹೇಳಿದರು. ಶ್ರೀಮಂತರು, ಬಡವರು, ನಗರವಾಸಿಗಳು ಮತ್ತು ಹಳ್ಳಿಗಳೆಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕು ಎಂದರು.